ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇಡಂ ಉತ್ಸವ ಮನೆಯ ಹಬ್ಬವಾಗಲಿ’

Last Updated 8 ಜನವರಿ 2018, 6:56 IST
ಅಕ್ಷರ ಗಾತ್ರ

ಸೇಡಂ: ‘ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಜ. 14 ರಂದು ನಡೆಯುವ 10ನೇ ‘ಸೇಡಂ ಉತ್ಸವ’ ಪ್ರತಿಯೊಬ್ಬರ ಮನೆಯ ಹಬ್ಬವಾಗಬೇಕು’ ಎಂದು ಮಹಿಳಾ ಪ್ರಮುಖೆ ಸಂತೋಷಿರಾಣಿ ಆರ್.ಪಾಟೀಲ ತಿಳಿಸಿದರು.

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಹಿಳೆಯ ರಿಗಾಗಿ ಭಾನುವಾರ ನಡೆದ ‘ಆದರ್ಶ ದಂಪತಿ’ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸೇಡಂನ ಮಹಿಳೆಯರು ಒಂದಿ ಲ್ಲೊಂದು ಕಾರ್ಯಚಟುವಟಿಕೆ ಹಮ್ಮಿ ಕೊಳ್ಳುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ಸ್ವಯಂ ಉತ್ಸಾಹಕತೆಯ ಪಾಲ್ಗೊಳ್ಳುವ ಮನೋಭಾವ ಇನ್ನೂ ಹೆಚ್ಚಬೇಕಿದೆ. 10ನೇ ಸೇಡಂ ಉತ್ಸವದ ವಿವಿಧ ಸ್ಪರ್ಧೆಯಲ್ಲಿ ಹೆಚ್ಚಿನ ಮಹಿಳೆಯರು ಪಾಲ್ಗೊಂಡು ಕುಟುಂಬದ ಏಕತೆ ಬಲಗೊಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಆದರ್ಶ ದಂಪತಿಗಳೇ. ಸ್ಪರ್ಧೆಯಲ್ಲಿ ಸೋತರೆ ನಾವು ಕಳೆಗುಂದಬೇಕಿಲ್ಲ. ಇನ್ನೂ ಅದರ ತಯಾರಿಯನ್ನು ಬಲ ಗೊಳಿಸಿ, ಸಕರಾತ್ಮಕ ಚಿಂತನೆಗಳೊಂದಿಗೆ ಮುನ್ನಗ್ಗಬೇಕಿದೆ’ ಎಂದರು.

ಆದರ್ಶ ದಂಪತಿಯಾಗಿ ಮೊದಲ ಸ್ಥಾನವನ್ನು ಸಂಧ್ಯಾ–ಗುರುರಾಜ, ದ್ವಿತೀಯ ಸ್ಥಾನವನ್ನು ಸಾವಿತ್ರಿ– ನಾಗರಾಜ ಟೆಂಗಳಿ ಪಡೆದರು. ಸವಿತಾ–ಸಂಜಯ್ ಬಾಸೂದಕರ್, ಲಕ್ಷ್ಮಿ–ರಮೇಶ ಐನಾಪೂರ, ಸವಿತಾ –ಸಂಪತ ಕುಮಾರ, ಅಂಜನಾ–ಶರಣಪ್ಪ ಹಡಪದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ರುಕ್ಮುಣಿ ಕಾಳಗಿ, ರಾಜೇಶ್ವರಿ ಬಿಲಗುಂದಿ, ಮಾಧವಿ ಐನಾಪೂರ ಇದ್ದರು. ಸುಮಾ ಲಕ್ಷ್ಮಿನಾರಾಯಣ ಚಿಮ್ಮನಚೋಡ್ಕರ್ ಕಾರ್ಯಕ್ರಮ ನಡೆಸಿಕೊಟ್ಟರು. ಸೇಡಂ ಉತ್ಸವ ಸಮಿತಿ ಕಾರ್ಯದರ್ಶಿ ನಾಗೀಂದ್ರಪ್ಪ ಡೊಳ್ಳಾ, ಪ್ರದೀಪ ಪಾಟೀಲ, ಬಸವಪ್ರಭು, ಗೋಪಾಲ ರಾಠೋಡ, ಜಗದೀಶ, ಸವಿತಾ ಗೋವರ್ಧನ, ಮಹಾನಂದ ಸಾಹು, ಭಾಗ್ಯಲಕ್ಷ್ಮಿ ನಾಯಿಕೋಡಿ, ವಾಣಿ ದೇಶಕ, ಸವಿತಾ ಚವಾಣ್, ಆರತಿ ಕಡಗಂಚಿ, ಮಲ್ಲಮ್ಮ ಪತ್ರಿ, ಆಶಯ ಬೇಗಂ, ಕಸ್ತೂರಿ ಸೇಡಂಕರ್, ಮಲ್ಲಮ್ಮ ಚವಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT