ನಾಲ್ವರು ಉಸ್ತುವಾರಿಗಳಿಗೆ ತಲಾ ಎಂಟು ಜಿಲ್ಲೆಗಳ ಜವಾಬ್ದಾರಿ ಹಂಚಿಕೆ

ಹೊಣೆ ಮರೆತ ಶಾಸಕರು, ಸಂಸದರು: ಅಮಿತ್ ಷಾ ಗರಂ

ವಹಿಸಿದ ಹೊಣೆಯನ್ನು ನಿಭಾಯಿಸದ ಸಂಸದರು, ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗಡಸು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೊಣೆ ಮರೆತ ಶಾಸಕರು, ಸಂಸದರು: ಅಮಿತ್ ಷಾ ಗರಂ

ಬೆಂಗಳೂರು: ವಹಿಸಿದ ಹೊಣೆಯನ್ನು ನಿಭಾಯಿಸದ ಸಂಸದರು, ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗಡಸು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣಾ ಪೂರ್ವ ಸಿದ್ಧತೆ, ಪಕ್ಷದ ಸಂಘಟನೆ ಕುರಿತು ಚರ್ಚಿಸಲು ಯಲಹಂಕ ಸಮೀಪದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಶಾಸಕರು, ಸಂಸದರು, ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಮಂಗಳವಾರ ಷಾ ಕರೆದಿದ್ದರು.

ವಿಧಾನಸಭಾ ಸದಸ್ಯರಿಗೆ ತಮ್ಮ  ಕ್ಷೇತ್ರದ ಜತೆಗೆ ಪಕ್ಕದ ವಿಧಾನಸಭಾ ಕ್ಷೇತ್ರ, ಸಂಸದರಿಗೆ ಎರಡು ವಿಧಾನಸಭಾ ಕ್ಷೇತ್ರ, ವಿಧಾನಪರಿಷತ್ತಿನ ಸದಸ್ಯರಿಗೆ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಉಸ್ತುವಾರಿಯನ್ನು ಅಮಿತ್ ಷಾ ವಹಿಸಿದ್ದು ಆಗಸ್ಟ್‌ ತಿಂಗಳಿನಲ್ಲಿ ನಡೆಸಿದ್ದ ಸಭೆಯ ವೇಳೆ ಪಕ್ಷದ ಬಲವರ್ಧನೆಗೆ ಏನೇನು ಮಾಡಬೇಕು ಎಂದು ಸ್ಪಷ್ಟ ಸೂಚನೆಯನ್ನು ಅವರು ನೀಡಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ಈ ಕುರಿತು ಅಮಿತ್‌ ಷಾ ಪ್ರಶ್ನಿಸಿದಾಗ ತಬ್ಬಿಬ್ಬಾಗುವ ಸರದಿ ಉಸ್ತುವಾರಿಗಳದ್ದಾಗಿತ್ತು. ನಿರ್ದಿಷ್ಟವಾಗಿ ಕೆಲವರ ಹೆಸರು ಕರೆದ ಷಾ, ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಉತ್ತರ ಹೇಳಲು ತಡವರಿಸಿದಾಗ ಷಾ ಗರಂ ಆದರು ಎಂದು ಮೂಲಗಳು ತಿಳಿಸಿವೆ.

‘ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ ನಿಮ್ಮನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಏನೋ ಉಸ್ತುವಾರಿ ಕೊಟ್ಟಿದ್ದಾರೆ, ಮಾಡಿದರಾಯಿತು ಬಿಡಿ ಎಂಬ ಧೋರಣೆ ಅನೇಕರಲ್ಲಿ ಇದೆ. ಇದನ್ನು ಸಹಿಸುವುದಿಲ್ಲ. ಇನ್ನು ಮುಂದೆ ಪಕ್ಷದ ಚುನಾವಣಾ ಉಸ್ತುವಾರಿಗಳು ನೀಡುವ ಗುರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪಕ್ಷದ ಬಲವರ್ಧನೆ ಮಾಡಬೇಕು’ ಎಂದು ಷಾ ನಿಷ್ಠುರವಾಗಿ ತಾಕೀತು ಮಾಡಿದರು ಎಂದು ಮೂಲಗಳು ವಿವರಿಸಿವೆ.

ಉಸ್ತುವಾರಿ, ಸಹ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪೀಯೂಷ್ ಗೋಯಲ್, ಮುರುಳೀಧರರಾವ್ ಹಾಗೂ ಪುರಂದರೇಶ್ವರಿ ಅವರಿಗೆ ತಲಾ ಎಂಟು ಜಿಲ್ಲೆಗಳ ಉಸ್ತುವಾರಿ ವಹಿಸಿರುವ ಷಾ, ಫೆಬ್ರುವರಿ 2 ರೊಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚಾವಣಿ ಕುಸಿದು ಬಿದ್ದು ಸೆರೆಸಿಕ್ಕ!

ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಸೋಮಶೇಖರ್‌ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

17 Jan, 2018
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

ಆರೋಪಿ ಸೋಮಶೇಖರ್‌ ನಾಪತ್ತೆ
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

17 Jan, 2018

ಬೆಂಗಳೂರು
ದಕ್ಕಲಿಗರಿಗೆ ಇಂದು ವಾಹನ ವಿತರಣೆ

ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.

17 Jan, 2018

ಬೆಂಗಳೂರು
ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ

ಹೊಸ ವರ್ಷಾಚರಣೆ ದಿನವಾದ ಡಿ. 31ರಂದು ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವತಿ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರೌಡಿ ಅಂಬರೀಷ್‌ ಸೇರಿದಂತೆ 9...

17 Jan, 2018
ಒಳ ಉಡುಪು ಮೂಸಿ ಹೋಗ್ತಾನೆ...!

ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ
ಒಳ ಉಡುಪು ಮೂಸಿ ಹೋಗ್ತಾನೆ...!

17 Jan, 2018