ಕ್ರಿಕೆಟ್‌: 500ರನ್‌ ಕಲೆಹಾಕಿದ ಮಲ್ಯ ಅದಿತಿ ಶಾಲೆ ತಂಡ

ಸಮಿತ್‌ ದ್ರಾವಿಡ್‌, ಆರ್ಯನ್‌ ಶತಕದ ಸೊಬಗು

ಸಮಿತ್‌ ದ್ರಾವಿಡ್‌ (150) ಹಾಗೂ ಆರ್ಯನ್ ಜೋಶಿ(154) ಅವರ ಮಿಂಚಿನ ಶತಕದ ನೆರವಿನಿಂದ ಮಲ್ಯ ಅದಿತಿ ಶಾಲೆ ತಂಡ 500ರನ್‌ ಕಲೆಹಾಕಿದೆ.

ಸಮಿತ್‌ ದ್ರಾವಿಡ್‌, ಆರ್ಯನ್‌ ಶತಕದ ಸೊಬಗು

ಬೆಂಗಳೂರು: ಸಮಿತ್‌ ದ್ರಾವಿಡ್‌ (150) ಹಾಗೂ ಆರ್ಯನ್ ಜೋಶಿ(154) ಅವರ ಮಿಂಚಿನ ಶತಕದ ನೆರವಿನಿಂದ ಮಲ್ಯ ಅದಿತಿ ಶಾಲೆ ತಂಡ 500ರನ್‌ ಕಲೆಹಾಕಿದೆ.

ಬಿಟಿಆರ್‌ ಕಪ್‌ಗಾಗಿ ನಗರದಲ್ಲಿ ನಡೆದ ಕೆಎಸ್‌ಸಿಎ ವತಿಯ (ಗುಂಪು 1) 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಲ್ಯ ಅದಿತಿ ಶಾಲೆ 412 ರನ್‌ಗಳಿಂದ ವಿವೇಕಾನಂದ ಶಾಲೆ ಎದುರು ಜಯಿಸಿತು.

ಮೊದಲು ಬ್ಯಾಟ್ ಮಾಡಿದ ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 500 ರನ್ ಗಳಿಸಿದೆ. ಈ ತಂಡಲ್ಲಿರುವ ಭಾರತದ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಮಗ ಸಮಿತ್‌ 150 ರನ್‌ ಗಳಿಸಿ ಮಿಂಚಿ ದ್ದಾರೆ.  ಆರ್ಯನ್ ಜೋಶಿ 154 ರನ್ ಸಿಡಿಸಿದ್ದಾರೆ. ಸವಾಲಿನ ಮೊತ್ತ ಬೆನ್ನಟ್ಟಿದ ವಿವೇಕಾನಂದ ಶಾಲೆ 27.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 88ರನ್‌ ಗಳಿಸಿತು.

ಸ್ಕೋರು: ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 500 (ಜೋಹಾನ್‌ 82, ಸಮಿತ್ ದ್ರಾವಿಡ್‌ 150, ಆರ್ಯನ್ ಜೋಶಿ 154, ಕೈವಲ್ಯ 30, ಅಕ್ಷನ್‌ 27). ವಿವೇಕಾನಂದ ಶಾಲೆ: 27.3 ಓವರ್‌ಗಳಲ್ಲಿ 88 (ಜೋಹನ್‌ 25ಕ್ಕೆ2, ಕೈವಲ್ಯ 20ಕ್ಕೆ2, ಇಶಾನ್‌ 6ಕ್ಕೆ3, ಅಗಸ್ತ್ಯಾ 4ಕ್ಕೆ2). ಫಲಿತಾಂಶ: ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆಗೆ 412 ರನ್‌ಗಳ ಜಯ.

ವಿದ್ಯಾಶಿಲ್ಪ ಅಕಾಡೆಮಿ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 248. ಸಿಂಧಿ ಶಾಲೆ, ಹೆಬ್ಬಾಳ: 48.5 ಓವರ್‌ಗಳಲ್ಲಿ 5 ವಿಕೆಟ್‌ಗೆ 252. ಫಲಿತಾಂಶ: ಸಿಂಧಿ ಶಾಲೆಗೆ 5 ವಿಕೆಟ್‌ಗಳ ಜಯ.

Comments
ಈ ವಿಭಾಗದಿಂದ ಇನ್ನಷ್ಟು
ಅಂಬೇಡ್ಕರ್ ವಿರುದ್ಧ ಟ್ವೀಟ್‌: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

ಟ್ವೀಟ್‌ ಬಗ್ಗೆ ಅನುಮಾನ
ಅಂಬೇಡ್ಕರ್ ವಿರುದ್ಧ ಟ್ವೀಟ್‌: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

22 Mar, 2018

ಕೊಚ್ಚಿ
ಕೊಚ್ಚಿಯಲ್ಲಿ ಪಂದ್ಯ: ತಜ್ಞರ ಅಭಿಪ್ರಾಯಕ್ಕೆ ಮನ್ನಣೆ

ಜವಾಹರಲಾಲ್ ನೆಹರು ಫುಟ್‌ಬಾಲ್‌ ಕ್ರೀಡಾಂಗಣವನ್ನು ಅಗೆಯದೇ ಕ್ರಿಕೆಟ್ ಪಂದ್ಯಗಳಿಗೆ ಬಳಸಲು ಸಾಧ್ಯವೇ ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಕೋರಲು ನಿರ್ಧರಿಸಲಾಗಿದೆ.

22 Mar, 2018

ಹರಾರೆ
ವಿಶ್ವಕಪ್‌ಗೆ ಅರ್ಹತೆ ಗಳಿಸಿದ ವೆಸ್ಟ್ ಇಂಡೀಸ್‌

ವೆಸ್ಟ್ ಇಂಡೀಸ್ ತಂಡ ಮುಂದಿ ವರ್ಷ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಬುಧವಾರ ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಈ ತಂಡ...

22 Mar, 2018

ನವದೆಹಲಿ
ಸಿದ್ದಾರ್ಥ್‌, ಶ್ರೀಶಂಕರ್ ಸ್ಪರ್ಧೆ ಅನುಮಾನ

ಅವಧಿಗೆ ಮೊದಲೇ ಹೆಸರು ನೋಂದಾಯಿಸದ ಕಾರಣ ಟ್ರ್ಯಾಕ್‌ ಮತ್ತು ಫೀಲ್ಡ್ ಅಥ್ಲೀಟ್‌ ಎಸ್‌.ಶ್ರೀಶಂಕರ್ ಹಾಗೂ ಸಿದ್ದಾರ್ಥ್ ಯಾದವ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದು ಇನ್ನೂ ಖಚಿತಗೊಂಡಿಲ್ಲ. ...

22 Mar, 2018
ನೇಮರ್ ಚೇತರಿಕೆ: ರೋಡ್ರಿಗೊ

ಕ್ರೀಡೆ
ನೇಮರ್ ಚೇತರಿಕೆ: ರೋಡ್ರಿಗೊ

22 Mar, 2018