ಧಾರವಾಡ

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಸದಾಶಿವ ಆಯೋಗದ ವರದಿಯನ್ನು ಕೂಡಲೇ ರಾಜ್ಯ ಸರ್ಕಾರ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಧಾರವಾಡ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಅಸ್ಪೃಶ್ಯ ಪಂಚಮ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವರದಿ ಜಾರಿ ಮಾಡುವಂತೆ ಬಹಳಷ್ಟು ಹೋರಾಟಗಳನ್ನು ಮಾಡಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆಗಳನ್ನು ಮಾಡಿ, ಅಸ್ಪೃಶ್ಯ ಜಾತಿಗಳ ಬೃಹತ್ ಸಮಾವೇಶಗಳ ಮೂಲಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ. ಆದಿ ಜಾಂಬವ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಒಳ ಮೀಸಲಾತಿಯ ವರದಿ ಜಾರಿಗಾಗಿ ಒತ್ತಾಯಿಸಲಾಗಿದೆ. ಆದರೆ, ವರದಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪ ಮಾಡಿದರು.

ಸದಾಶಿವ ಆಯೋಗದ ವರದಿಯನ್ನು ಕೂಡಲೇ ರಾಜ್ಯ ಸರ್ಕಾರ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಪಿತಾಂಬರಪ್ಪ ಬಿಳಾರ, ಬಸಪ್ಪ ಮಾದರ, ಭೀಮಣ್ಣ ತೇರದಾಳ, ಸಂತೋಷ ಸವಣೂರ, ರವಿ ಬಂಕಾಪುರ, ಮೋಹನ ಹಿರೇಮನಿ, ಸುನೀಲ ಗಾಮನಗಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

ಹುಬ್ಬಳ್ಳಿ/ಧಾರವಾಡ
ಧಾರವಾಡ: ಜಿಲ್ಲೆಯಲ್ಲಿ ಮುಂದುವರಿದ ಮಳೆ

21 Mar, 2018

ಧಾರವಾಡ
‘ಕುಟುಂಬ ರಾಜಕಾರಣ ಮಾಡುವುದಿಲ್ಲ’

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತದೆ ಎಂದು ಕೇಂದ್ರದ ಪರಿಸರ ಮತ್ತು ಸಾಂಸ್ಕೃತಿಕ ಸಚಿವ ಡಾ. ಮಹೇಶ ಶರ್ಮಾ ಹೇಳಿದರು. ...

21 Mar, 2018

ಧಾರವಾಡ
ಮಳೆ: ₹ 4 ಕೋಟಿ ಹಾನಿ ಆರೋಪ

ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿಆರ್‌ಟಿಎಸ್ ನಿಧಾನಗತಿ ಕಾಮಗಾರಿ ಎಡವಟ್ಟಿನಿಂದ ಶಂಕರ ಪ್ಲಾಜಾ ಕಾಂಪ್ಲೆಕ್ಸ್ ನೆಲಮಹಡಿ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ₹...

21 Mar, 2018

ಧಾರವಾಡ
ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ ವಶಕ್ಕೆ

ಕಲಬುರ್ಗಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸುರಕ್ಷತೆ ಮತ್ತು ವಿಚಕ್ಷಣ ದಳದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಪತಿ ದೊಡ್ಡಲಿಂಗಣ್ಣನವರ ಮನೆಯ ಮೇಲೆ ಮಂಗಳವಾರ...

21 Mar, 2018

ಧಾರವಾಡ
‘ಕಾವ್ಯಕ್ಕಿದೆ ನಿಸರ್ಗ ಪ್ರೀತಿಸುವ ಶಕ್ತಿ’

ಕವಿತೆಗಳನ್ನು ಬರೆ_ಯುವುದಕ್ಕಿಂತ ಅದರ ಸಾರಾಂಶ ಅರ್ಥೈಸಿಕೊಳ್ಳುವುದು ಮುಖ್ಯ. ಕಾವ್ಯಕ್ಕೆ ನಿಸರ್ಗ ಪ್ರೀತಿಸುವ ಶಕ್ತಿ ಇದೆ. ನಿಸರ್ಗದಲ್ಲಿನ ಹಾಗೂ ಮನಸ್ಸಿನ ಭಾವ ಒಂದೇ ಆಗಿರಬೇಕು. ಅಂದಾಗ...

21 Mar, 2018