ಗಡಿಭಾಗದ ಬಾಗೇಪಲ್ಲಿ

ಬಿಜೆಪಿ ‘ಪರಿವರ್ತನಾ ಯಾತ್ರೆ’: ಜನರನ್ನು ಹಿಡಿದಿಡಲು ಆರ್ಕೆಸ್ಟ್ರಾ, ವೇದಿಕೆಯಲ್ಲಿ ಯುವತಿಯರ ಮಾದಕ ಕುಣಿತ

ಬಾಗೇಪಲ್ಲಿ ಪಟ್ಟಣದ ಎಚ್‌.ಎನ್‌.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಐದು ಯುವತಿಯರು ಬಗೆಬಗೆಯ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ಕುಣಿಯುತ್ತಿದ್ದರೆ, ವೇದಿಕೆ ಬಳಿ ನೆರೆದಿರುವ ನೂರಾರು ಜನರು ನೃತ್ಯ ನೋಡಿ ಕೇಕೆ, ಶಿಳ್ಳೆ ಹೊಡೆದರು.

ಬಾಗೇಪಲ್ಲಿಯಲ್ಲಿ ‘ಪರಿವರ್ತನಾ ಯಾತ್ರೆ’ಯ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕಂಡುಬಂದ ದೃಶ್ಯವಿದು.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದೆ. ಇದಕ್ಕಾಗಿಯೇ ಗಡಿಭಾಗದ ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದಾರೆ.

ಪಟ್ಟಣದ ಎಚ್‌.ಎನ್‌.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಐದು ಯುವತಿಯರು ಬಗೆಬಗೆಯ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ಕುಣಿಯುತ್ತಿದ್ದಾರೆ. ವೇದಿಕೆ ಬಳಿ ನೆರೆದಿರುವ ನೂರಾರು ಜನರು ನೃತ್ಯ ನೋಡಿ ಕೇಕೆ, ಶಿಳ್ಳೆ ಹೊಡೆಯುತ್ತಿದ್ದಾರೆ.

ಕೆಲ ಯುವಕರು, ಸಾರ್ವಜನಿಕರು ಕೂಡ ಯುವತಿಯರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡುಬಂದವು. ಬಹಿರಂಗ ವೇದಿಕೆಯಲ್ಲಿ ‘ಅಲ್ಲಾಡ್ಸು ಅಲ್ಲಾಡ್ಸು’ ಹಾಡು ಸೇರಿದಂತೆ ಅನೇಕ ಗೀತೆಗಳಿಗೆ ವೇದಿಕೆ ಮೇಲಿದ್ದವರೆಲ್ಲ ತೋರಿದ ಮಾದಕ ಕುಣಿತಕ್ಕೆ ಅನೇಕ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ವ ನಿಗದಿಯಂತೆ ಬಾಗೇಪಲ್ಲಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಯಾತ್ರೆ ನಡೆಯಬೇಕಿತ್ತು. ಆದರೆ ಗೌರಿಬಿದನೂರಿನಲ್ಲಿ 11 ಗಂಟೆಗೆ ಆರಂಭವಾಗಬೇಕಾದ ಯಾತ್ರೆ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಅದು ಸಂಜೆ 4ರ ಸುಮಾರಿಗೆ ಬಾಗೇಪಲ್ಲಿ ತಲುಪುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಈ ನೃತ್ಯ ನಡೆಯಲಿದೆ ಎನ್ನಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಚಿಕ್ಕಬಳ್ಳಾಪುರ
ನೌಕರರು ವೃತ್ತಿ ಗೌರವಕ್ಕೆ ಮನ್ನಣೆ ನೀಡಿ

ನೌಕರರು ಸಣ್ಣ ಹುದ್ದೆ ಎಂಬ ಸಂಕುಚಿತ ಮನೋಭಾವ ಬದಿಗಿಟ್ಟು ವೃತ್ತಿ ಗೌರವವನ್ನು ಎತ್ತಿಹಿಡಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಶಾಸಕ ಡಾ.ಕೆ.ಸುಧಾಕರ್‌...

21 Mar, 2018

ಚಿಂತಾಮಣಿ
ಶಾಸಕ ಕೃಷ್ಣಾರೆಡ್ಡಿಗೆ ಕೊಲೆ ಬೆದರಿಕೆ: ದೂರು

‘ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಸೋಮವಾರ ರಾತ್ರಿ ನಗರ ಠಾಣೆಗೆ ದೂರು ನೀಡಿದ್ದಾರೆ.

21 Mar, 2018

ಚಿಂತಾಮಣಿ
ಭುವನೇಶ್ವರಿ ಅಮ್ಮನ ಸಂಭ್ರಮದ ರಥೋತ್ಸವ

ಕಸಬಾ ಹೋಬಳಿಯ ಕುರುಬೂರಿನಲ್ಲಿ ಅನಾದಿ ಕಾಲದಿಂದ ನೆಲೆಸಿರುವ ಭುವನೇಶ್ವರಿ ಅಮ್ಮನವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.

21 Mar, 2018

ಚಿಂತಾಮಣಿ
24ರಿಂದ ಇತಿಹಾಸ ಕಾಂಗ್ರೆಸ್‌ ಅಧಿವೇಶನ

ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ, ರಾಜ್ಯ ಪತ್ರಾಗಾರ ಇಲಾಖೆ ಬೆಂಗಳೂರು, ರಾಜ್ಯ ಪುರಾತತ್ವ ಮತ್ತು ಪರಂಪರೆ ಇಲಾಖೆ ಮೈಸೂರು ವತಿಯಿಂದ ಮಾರ್ಚ್‌ 24ರಿಂದ...

21 Mar, 2018

ಚಿಕ್ಕಬಳ್ಳಾಪುರ
ಕುಡಿಯುವ ನೀರಿನ ಸಮಸ್ಯೆ ನೀಗಿಸಿ

ಬೇಸಿಗೆಯಲ್ಲಿ ಕಂಡು ಬರುವ ಶುದ್ಧ ಕುಡಿಯುವ ನೀರಿನ ಅಭಾವವನ್ನು ಸಂಬಂಧಪಟ್ಟ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

20 Mar, 2018