ಕಲಬುರ್ಗಿ

ಅಪಘಾತ: 10 ಪ್ರಯಾಣಿಕರಿಗೆ ಗಾಯ

ಬಸ್ ಕಲಬುರ್ಗಿಯಿಂದ ರಾಯಚೂರಿಗೆ ತೆರಳುತ್ತಿತ್ತು. ಸಿಮೆಂಟ್‌ ತುಂಬಿದ್ದ ಲಾರಿಯು ಶಹಾಬಾದ್‌ನಿಂದ ಅಫಜಲಪುರ ಕಡೆಗೆ ತೆರಳುತ್ತಿತ್ತು.

ಕಲಬುರ್ಗಿಯ ರಾಮ ಮಂದಿರ ವೃತ್ತದಲ್ಲಿ ಭಾನುವಾರ ಬಸ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿರುವುದು

ಕಲಬುರ್ಗಿ: ಇಲ್ಲಿನ ರಾಮ ಮಂದಿರ ವೃತ್ತದಲ್ಲಿ ಭಾನುವಾರ ಲಾರಿ ಮತ್ತು ಎನ್‌ಇಕೆಆರ್‌ಟಿಸಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, 10 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ.

ಬಸ್ ಕಲಬುರ್ಗಿಯಿಂದ ರಾಯಚೂರಿಗೆ ತೆರಳುತ್ತಿತ್ತು. ಸಿಮೆಂಟ್‌ ತುಂಬಿದ್ದ ಲಾರಿಯು ಶಹಾಬಾದ್‌ನಿಂದ ಅಫಜಲಪುರ ಕಡೆಗೆ ತೆರಳುತ್ತಿತ್ತು.

‘ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕಿತ್ಸೆಗೆ ಸ್ಪಂದಿಸದೆ ಸಾವು: ಕಲಬುರ್ಗಿ: ಬೈಕ್‌ನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಗುರುಬಾಯಿ ಕಾಮಶೆಟ್ಟಿ (60) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟವರು.

ಇವರು ಕಲಬುರ್ಗಿ ತಾಲ್ಲೂಕು ಕಗ್ಗನಮಡಿ–ಯಳವಂತಗಿ ಕ್ರಾಸ್ ಬಳಿ ಈಚೆಗೆ ಬೈಕ್‌ ಮೇಲಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಹಟ್ಟಿ ಚಿನ್ನದ ಗಣಿ
ಧ್ವಜಕ್ಕೆ ಬೆಂಕಿ: ಕಾರ್ಮಿಕರ ಆಕ್ರೋಶ

ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಎದುರು ಮರಕ್ಕೆ ಅಳವಡಿಸಿದ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಸಂಘಟನೆ ಧ್ವಜವನ್ನು ಗುರುವಾರ ರಾತ್ರಿ...

17 Feb, 2018
ನಿರ್ವಹಣೆ ಕಾಣದ ಶೌಚಾಲಯ: ಪರದಾಟ

ವಾಡಿ
ನಿರ್ವಹಣೆ ಕಾಣದ ಶೌಚಾಲಯ: ಪರದಾಟ

17 Feb, 2018
ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ

ಕಲಬುರ್ಗಿ
ತಾಂಡಾಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಲಿ

16 Feb, 2018

ಕಲಬುರ್ಗಿ
ತೊಗರಿ ಖರೀದಿ ಪ್ರಮಾಣ ಕಡಿತ: ಪರದಾಟ

ಕೇಂದ್ರ ಸರ್ಕಾರ ಕಡಿಮೆ ಪ್ರಮಾಣಕ್ಕೆ ಅನುಮತಿ ನೀಡಿದ್ದರಿಂದ ತಲಾ 10 ಕ್ವಿಂಟಲ್‌ ಮಾತ್ರ ಖರೀದಿಸುತ್ತೇವೆ. ಎಲ್ಲ ರೈತರಿಂದ ತೊಗರಿ ಖರೀದಿಸಬೇಕಾದರೆ ಕೇಂದ್ರ ಸರ್ಕಾರ ಇನ್ನೂ...

16 Feb, 2018
ಪ್ರಭಾವಿಗಳ ಪುತ್ರರಿಗೆ ಒಲಿಯದ ಮೊದಲ ಜಯ

ಕಲಬುರ್ಗಿ
ಪ್ರಭಾವಿಗಳ ಪುತ್ರರಿಗೆ ಒಲಿಯದ ಮೊದಲ ಜಯ

15 Feb, 2018