ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ...

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು ತಮ್ಮ ‘ಅನುರಣನ’ ಅಂಕಣದಲ್ಲಿ (ಪ್ರ.ವಾ., ಜ.16) ಅರ್ಥಪೂರ್ಣವಾಗಿ ಬೆಳಕು ಚೆಲ್ಲಿದ್ದಾರೆ.

ನಿಜ, ನಾಲ್ಕೂ ನ್ಯಾಯಾಧೀಶರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಈ ಬೃಹತ್ ರಾಷ್ಟ್ರದ ಮಹೋನ್ನತ ನ್ಯಾಯಾಲಯದ ಬಗ್ಗೆ ಕೆಲವು ಗುಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಸ್ಪಷ್ಟಪಡಿಸಬೇಕಾಗಿತ್ತು. ಈ ನೆಲೆಯಲ್ಲಿ ಎ.ನಾರಾಯಣ ಅವರ ವ್ಯಾಖ್ಯಾನ ಕೆಲವು ಮೂಲಭೂತ ಸೂಕ್ಷ್ಮಗಳನ್ನು ಪರಿಚಯಿಸಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆಯಿಂದ ತಲ್ಲಣಗೊಳ್ಳಬೇಕಾಗಿಲ್ಲ. ಪಾರದರ್ಶಕತೆ ಕುರಿತು ಎಂಥ ಪ್ರಶ್ನೆಗಳು ಬಂದರೂ ನಾವು ಸ್ವಾಗತಿಸಲೇಬೇಕು. ಅದು ಇಂಥಕಡೆ ಬರಬೇಕು, ಇಂಥ ಕಡೆ ಬರಬಾರದು ಎಂದು ಯೋಚಿಸುವ ಅಗತ್ಯವಿಲ್ಲ. ಇಂತಹದ್ದು ಹೆಚ್ಚು ಹೆಚ್ಚು ಆಂತರಿಕ ಸಂವಾದವಾಗಿಯೂ ಬೆಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT