ಭಾರತೀಯ ಅಭಿಮಾನಿಗಳ ಮನಗೆದ್ದ ಶಾಹೀದ್‌ ಆಫ್ರಿದಿ

ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಭಾರತದ ಕ್ರಿಕೆಟ್‌ ಅಭಿಮಾನಿಗಳ ಜತೆಗೆ ತ್ರಿವರ್ಣಧ್ವಜದ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದರು.

ಟ್ವಿಟರ್‌ನಲ್ಲಿ ಭಾರತದ ಕ್ರಿಕೆಟ್‌ ಅಭಿಮಾನಿಗಳ ಜತೆ ಆಫ್ರಿದಿ

ಸೇಂಟ್‌  ಮೊರ್ಟಿಜ್‌, ಸ್ವಿಟ್ಜರ್‌ಲೆಂಡ್‌: ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಭಾರತದ ಕ್ರಿಕೆಟ್‌ ಅಭಿಮಾನಿಗಳ ಜತೆಗೆ ತ್ರಿವರ್ಣಧ್ವಜದ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದರು.

ಸೇಂಟ್‌ ಮೇರಿಸ್‌ ಕೆರೆ ಬದಿಯಲ್ಲಿ ನಡೆಯುತ್ತಿರುವ ಐಸ್‌ ಕ್ರಿಕೆಟ್‌ ಚಾಲೆಂಜ್ ಪಂದ್ಯದಲ್ಲಿ ಸೆಹ್ವಾಗ್‌ ನೇತೃತ್ವದ ಪ್ಯಾಲೇಸ್‌ ತಂಡದ ಎದುರು ಆಫ್ರಿದಿ ನೇತೃತ್ವದ ರಾಯಲ್ಸ್ ತಂಡವು ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಆಫ್ರಿದಿ ಅವರನ್ನು ಸುತ್ತುವರಿದ ಅಭಿಮಾನಿಗಳು ಅವರ ಜತೆಗೆ ಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ಭಾರತದ ಯುವತಿಯೊಬ್ಬಳು ಸೆಲ್ಫಿಗಾಗಿ ಮನವಿ ಮಾಡಿದಳು. ಆದರೆ ಆಕೆ ಭಾರತದ ತ್ರಿವರ್ಣಧ್ವಜವನ್ನು ಕೈಯಲ್ಲಿ ಮಡಚಿ ಇಟ್ಟುಕೊಂಡಿದ್ದನ್ನು ಆಫ್ರಿದಿ ಗಮನಿಸಿದರು.

ನಂತರ ಧ್ವಜವನ್ನು ಪೂರ್ತಿಯಾಗಿ ಬಿಚ್ಚಿ, ಗೌರವಯುತವಾಗಿ ಹಿಡಿಯುವಂತೆ ಸೂಚಿಸಿದ ಅವರು, ಆಕೆಯ ಜತೆ ಚಿತ್ರ ತೆಗೆಸಿಕೊಂಡರು. ಆಫ್ರಿದಿ ಅವರ ಈ ನಡವಳಿಕೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್‌ ಆಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಪಂದ್ಯ ಮುಗಿದ ಬಳಿಕ ಡ್ಯಾಡಿ ಡ್ಯೂಟಿಗೆ ಹಾಜರಾದ ದೋನಿ

ವಿಡಿಯೊ ವೈರಲ್‌
ಪಂದ್ಯ ಮುಗಿದ ಬಳಿಕ ಡ್ಯಾಡಿ ಡ್ಯೂಟಿಗೆ ಹಾಜರಾದ ದೋನಿ

27 Apr, 2018
ಸನ್‌ರೈಸರ್ಸ್‌ಗೆ ಅಮೋಘ ಜಯ

ಹೈದರಾಬಾದ್
ಸನ್‌ರೈಸರ್ಸ್‌ಗೆ ಅಮೋಘ ಜಯ

27 Apr, 2018
ಅರ್ಜುನ ‍ಪ್ರಶಸ್ತಿಗೆ ಬಿಧುರಿ, ಸೋನಿಯಾ ಹೆಸರು

ನವದೆಹಲಿ
ಅರ್ಜುನ ‍ಪ್ರಶಸ್ತಿಗೆ ಬಿಧುರಿ, ಸೋನಿಯಾ ಹೆಸರು

27 Apr, 2018
ಅರ್ಜುನ ಪ್ರಶಸ್ತಿಗೆ ರೋಹನ್‌ ಬೋಪಣ್ಣ ಹೆಸರು ಶಿಫಾರಸು

ನವದೆಹಲಿ
ಅರ್ಜುನ ಪ್ರಶಸ್ತಿಗೆ ರೋಹನ್‌ ಬೋಪಣ್ಣ ಹೆಸರು ಶಿಫಾರಸು

27 Apr, 2018
‘ಚೆನ್ನೈ ಸೀನಿಯರ್ ಕಿಂಗ್ಸ್‌’ ತಂಡಕ್ಕೆ ಮೆಚ್ಚುಗೆ

ಬೆಂಗಳೂರು
‘ಚೆನ್ನೈ ಸೀನಿಯರ್ ಕಿಂಗ್ಸ್‌’ ತಂಡಕ್ಕೆ ಮೆಚ್ಚುಗೆ

27 Apr, 2018