ಅಧಿಕಾರಿಗಳು, ಮರಳು ಹರಾಜುದಾರರ ಸಭೆಯ ತಹಶೀಲ್ದಾರ್ ಸೂಚನೆ

ಷರತ್ತು ಉಲ್ಲಂಘಿಸದೆ ಮರಳು ಪೂರೈಸಿ

ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ 2, ಬಿದರಕೆರೆ 2, ಹೊಸಹಳ್ಳಿ 2 ಹಾಗೂ ಸಾಲುಹುಣಿಸೆ ಗ್ರಾಮದ ಸಮೀಪ 1 ಮರಳು ಬ್ಲಾಕ್ ಗಳನ್ನು ಇ–ಹರಾಜು ಹಾಕಲಾಗಿದೆ.

ಹಿರಿಯೂರು: ತಾಲ್ಲೂಕಿನಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಅಗತ್ಯ ಪೂರೈಸಲು ಹಾಗೂ ಅಕ್ರಮ ಮರಳುದಂಧೆ ತಡೆಯಲು ವೇದಾವತಿ ನದೀ ಪಾತ್ರದಲ್ಲಿ ಇ–ಹರಾಜು ಮೂಲಕ ಗುತ್ತಿಗೆ ಪಡೆದಿರುವ ಹರಾಜುದಾರರು ಸರ್ಕಾರಿ ನಿಯಮಾನುಸಾರ ಮರಳು ಎತ್ತುವಳಿ ಮಾಡಬೇಕು ಎಂದು ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ತಾಕೀತು ಮಾಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೇದಾವತಿ ನದೀ ಪಾತ್ರದಲ್ಲಿನ ಮರಳು ಎತ್ತುವಳಿ ಮಾಡುವ ಕುರಿತು ನಡೆದ ಅಧಿಕಾರಿಗಳು ಹಾಗೂ ಹರಾಜುದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ 2, ಬಿದರಕೆರೆ 2, ಹೊಸಹಳ್ಳಿ 2 ಹಾಗೂ ಸಾಲುಹುಣಿಸೆ ಗ್ರಾಮದ ಸಮೀಪ 1 ಮರಳು ಬ್ಲಾಕ್ ಗಳನ್ನು ಇ–ಹರಾಜು ಹಾಕಲಾಗಿದೆ. ತಾಲ್ಲೂಕಿನಲ್ಲಿ ಮರಳಿನ ಅಗತ್ಯ ಹೆಚ್ಚಿದ್ದು, ಸರ್ಕಾರಿ ನಿಯಮ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಆದೇಶ ಮತ್ತು ಷರತ್ತುಗಳನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸದೆ ತುರ್ತಾಗಿ ಮರಳನ್ನು ಎತ್ತುವಳಿ ಮಾಡಬೇಕು. ನದೀ ದಂಡೆಯಿಂದ 200 ಮೀಟರ್ ಅಂತರದಲ್ಲಿರುವ ಮರಳು ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಬೇಕು. ತಾಲ್ಲೂಕಿಗೆ ಪ್ರಥಮ ಆದ್ಯತೆ ನೀಡಿ ಮರಳು ವಿತರಣೆ ಮಾಡಬೇಕು ಎಂದು ಹರಾಜುದಾರರಿಗೆ ಸೂಚಿಸಿದರು.

ಮರಳು ಎತ್ತುವಳಿ ಮಾಡುವಾಗ ಸುತ್ತಮುತ್ತ ಗ್ರಾಮಗಳಲ್ಲಿನ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಮರಳು ಅವಶ್ಯಕತೆ ಇರುವ ಸಾರ್ವಜನಿಕರು ಮರಳು ಸ್ಟಾಕ್ ಯಾರ್ಡ್‌ನಲ್ಲಿ ಉತ್ತಮ ಗುಣಮಟ್ಟದ ಮರಳು ಪಡೆಯಬಹುದು ಎಂದು ವೆಂಕಟೇಶಯ್ಯ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸ್ವಶಕ್ತಿ ಮೇಲೆ ಆಡಳಿತ ನಡೆಸಿದ ಶಿವಾಜಿ

ಚಿತ್ರದುರ್ಗ
ಸ್ವಶಕ್ತಿ ಮೇಲೆ ಆಡಳಿತ ನಡೆಸಿದ ಶಿವಾಜಿ

20 Feb, 2018

ಚಿತ್ರದುರ್ಗ
ಸಾಗುವಳಿ ಪತ್ರಕ್ಕೆ ಆಗ್ರಹಿಸಿ ಸಚಿವರ ನಿವಾಸದೆದುರು ಧರಣಿ

ಕರ್ನಾಟಕ ರಾಜ್ಯ ಬಂಜಾರ ಜನಜಾಗೃತಿ ಅಭಿಯಾನ ವೇದಿಕೆ ಪ್ರಧಾನ ಕಾರ್ಯದರ್ಶಿ ನಿಂಗನಾಯ್ಕ ಮಾತನಾಡಿ, ‘ನೂರಾರು ಬಡ ಕುಟುಂಬಗಳು ಬಗರ್‌ಹುಕುಂ ಮತ್ತು ಅರಣ್ಯಭೂಮಿಯನ್ನು ಸಾಗುವಳಿ ಮಾಡಿಕೊಂಡು...

20 Feb, 2018
ಕಾಂಗ್ರೆಸ್‌ ಕೋಟೆಯಲ್ಲಿ ‘ಕೈ’ನದ್ದೇ ದರ್ಬಾರು

ಹಿರಿಯೂರು
ಕಾಂಗ್ರೆಸ್‌ ಕೋಟೆಯಲ್ಲಿ ‘ಕೈ’ನದ್ದೇ ದರ್ಬಾರು

19 Feb, 2018

ಹಿರಿಯೂರು
ವಾಣಿ ವಿಲಾಸಪುರ ಗ್ರಾ.ಪಂ: ಬಯಲು ಶೌಚಮುಕ್ತ ಮಾಡುವತ್ತ ದಿಟ್ಟ ಹೆಜ್ಜೆ

ಹಿಂದೆಲ್ಲ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ಪಡೆದು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದು ಉಂಟು. ಈಗ ಖುದ್ದು ಪರಿಶೀಲನೆ ಮಾಡಲಾಗುತ್ತಿದೆ.

19 Feb, 2018
ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ

ಚಳ್ಳಕೆರೆ
ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ

18 Feb, 2018