ಲಕ್ಷ್ಮೇಶ್ವರ

ತ್ರಿಕೋಟಿ ಲಿಂಗ ಸ್ಥಾಪನೆಯತ್ತ ಮುಕ್ತಿಮಂದಿರ

ಸಮೀಪದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಫೆ.13, 14 ಮತ್ತು 15ರಂದು ಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.

ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ತರಿಸಿರುವ ಬೃಹತ್‌ ಶಿವಲಿಂಗಗಳು

ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಫೆ.13, 14 ಮತ್ತು 15ರಂದು ಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.

ಸ್ಥಳದ ಮಹಿಮೆ: ಇಂದಿನ ಮುಕ್ತಿಮಂದಿರ ಹಿಂದೆ ಸಿದ್ದಯ್ಯನ ಅಡವಿಯಾಗಿತ್ತು. ಒಮ್ಮೆ ಗುರು ಗೋವಿಂದ ಭಟ್ಟರು ತಮ್ಮ ಪ್ರಿಯ ಶಿಷ್ಯ ಶರೀಫರೊಂದಿಗೆ ಈ ಮಾರ್ಗವಾಗಿ ಹಾದು ಹೋಗುವಾಗ ಅಲ್ಲಿನ ಒಂದು ಪತ್ರಿ ಮರದ ಬುಡದಲ್ಲಿ ಕುಳಿತುಕೊಳ್ಳುತ್ತಾರೆ. ಆಗ ಅವರಿಗೆ ಅವರು ಕುಳಿತ ಜಾಗದಿಂದ ಧೂಪದ ಸುವಾಸನೆ ಬರುತ್ತದೆ. ಆಗ ಗೋವಿಂದ ಭಟ್ಟರು ಶಿಷ್ಯನನ್ನು ಉದ್ದೇಶಿಸಿ ‘ಶರೀಫ, ಮುಂದೊಂದು ಈ ಅಡವಿ ಧರ್ಮ ಜಾಗೃತಿ ಮಾಡುವ ಕ್ಷೇತ್ರವಾಗಿ ಬೆಳೆಯುತ್ತದೆ’ ಎಂದು ಭವಿಷ್ಯ ನುಡಿಯುತ್ತಾರೆ.

ಮುಕ್ತಿಮಂದಿರದ ಸಂಸ್ಥಾಪಕರಾದ ವೀರಗಂಗಾಧರ ಸ್ವಾಮೀಜಿ ಹುಬ್ಬಳ್ಳಿ ತಾಲ್ಲೂಕು ಪಾಲೀಕೊಪ್ಪದಿಂದ ಇಲ್ಲಿಗೆ ಬಂದಾಗ ಈ ಸ್ಥಳ ಕಾಡು ಪ್ರಾಣಿಗಳಿಂದ ಕೂಡಿದ ಅರಣ್ಯವಾಗಿತ್ತು. ಕಠಿಣ ತಪಸ್ಸಿನಿಂದ ಗಂಗಾಧರ ಜಗದ್ಗುರು ಗಳು ಇದನ್ನೊಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾಡಿ ಅದಕ್ಕೆ ಮುಕ್ತಿಮಂದಿರ ಎಂದು ನಾಮಕರಣ ಮಾಡುತ್ತಾರೆ.

ಗಂಗಾಧರ ಸ್ವಾಮೀಜಿ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆಂದು ಕನಸು ಕಂಡಿದ್ದರು. ಆದರೆ ಅವರ ಕನಸು ಅವರ ಜೀವಿತಾವಧಿಯಲ್ಲಿ ಈಡೇರಲಿಲ್ಲ. ಈಗಿನ ಪೀಠಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಮಲರೇಣುಕ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳು ಈ ಕೆಲಸವನ್ನು ಭರದಿಂದ ನಡೆಸುತ್ತಿದ್ದಾರೆ.

ರಂಭಾಪುರಿ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇದಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಸಾವಿರಾರು ದೊಡ್ಡ ದೊಡ್ಡ ಶಿವಲಿಂಗಗಳು ಕ್ಷೇತ್ರದಲ್ಲಿ ಇವೆ. ಒಂದು ದೊಡ್ಡ ಶಿವಲಿಂಗದಲ್ಲಿ ಆರು ಸಾವಿರ ಸಣ್ಣ ಸಣ್ಣ ಲಿಂಗಗಳನ್ನು ಕೆತ್ತಲಾಗಿತ್ತರುತ್ತದೆ. ಇಂಥ ಐದು ಸಾವಿರ ದೊಡ್ಡ ಶಿವಲಿಂಗಗಳನ್ನು ಸ್ಥಾಪಿಸಿದಾಗ ತ್ರಿಕೋಟಿ ಶಿವಲಿಂಗ ಸ್ಥಾಪನೆ ಕಾರ್ಯ ಮುಗಿದಂತೆ. ಇದಕ್ಕಾಗಿ ಕ್ಷೇತ್ರದಲ್ಲಿ ಕೆಲಸಗಳು ಜೋರಾಗಿ ನಡೆಯುತ್ತಿವೆ.

ನಾಡಿನ ನೂರಾರು ಭಕ್ತರು ಆರು ಸಾವಿರ ರೂಪಾಯಿ ಕೊಟ್ಟು ಒಂದೊಂದು ಲಿಂಗವನ್ನು ದಾನವಾಗಿ ಕೊಡಿಸಿದ್ದಾರೆ. ಇನ್ನೇನು ಕೆಲ ದಿನಗಳಲ್ಲೇ ಮುಕ್ತಿಮಂದಿರದಲ್ಲಿ ಶಿವಲಿಂಗ ಸ್ಥಾಪನೆ ಕನಸು ನನಸಾಗ ಲಿದ್ದು ಮುಂದಿನ ದಿನಗಳಲ್ಲಿ ಇದರ ಕೀರ್ತಿ ಎಲ್ಲ ಕಡೆ ಪಸರಿಸಲಿದೆ.

ಈ ಕಾರ್ಯ ನೆರವೇರಲು ಭಕ್ತರ ಸಹಾಯ ಸಹಕಾರ ಬಹಳ ಮುಖ್ಯ ಎನ್ನುತ್ತಾರೆ ಮುಕ್ತಿಮಂದಿರದ ಪೀಠಾಧ್ಯಕ್ಷ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು.

Comments
ಈ ವಿಭಾಗದಿಂದ ಇನ್ನಷ್ಟು

ಡಂಬಳ
ಆಕಸ್ಮಿಕ ಬೆಂಕಿ: 2ಎಕರೆ ತೊಗರಿ ಭಸ್ಮ

‘ಸತತ ಬರದಿಂದ ಹಿಂದಿನ ವರ್ಷಗಳಲ್ಲಿ ಬೆಳೆ ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆ ಆಗಿತ್ತು. ಗ್ರಾಮದ ಕೆರೆಯೂ ತುಂಬಿತ್ತು. ಅದರಿಂದ ಬೆಳೆ ಚೆನ್ನಾಗಿ ಬಂದಿತ್ತು. ...

20 Feb, 2018

ನರಗುಂದ
ಪುಟ್ಟಣ್ಣಯ್ಯ ಕೊಡುಗೆ ಸ್ಮರಣೆ

‘ಮಹದಾಯಿ ಸೇರಿದಂತೆ ರಾಜ್ಯದ ಎಲ್ಲ ರೈತ ಹೋರಾಟಗಳಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಅವರು ಮುಂಚೂಣಿಯಲ್ಲಿ ಇರುತ್ತಿದ್ದರು. ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ’

20 Feb, 2018

ಗಜೇಂದ್ರಗಡ
ಶಿವಾಜಿ ದೇಶಪ್ರೇಮ: ಶ್ಲಾಘನೆ

ಶಿವಾಜಿಯ ವಿಚಾರಧಾರೆ, ಆದರ್ಶ ಮತ್ತು ಕೊಡುಗೆಯನ್ನು ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗಕ್ಕೆ ತಿಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

20 Feb, 2018
ಬಿಸಿಲು,ದೂಳು; ತಪ್ಪದ ಗೋಳು

ಗದಗ
ಬಿಸಿಲು,ದೂಳು; ತಪ್ಪದ ಗೋಳು

19 Feb, 2018

ನರಗುಂದ
‘ಮಹದಾಯಿ ವಿಚಾರದಲ್ಲಿ ರಾಜಕೀಯ ಸಲ್ಲ’

‘ಮಹದಾಯಿಗಾಗಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ನ್ಯಾಯಮಂಡಳಿಯ ತೀರ್ಪು ನಮ್ಮ ಪರವಾಗಿ ಬರುವಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕಿದೆ.

19 Feb, 2018