ಬೆಂಗಳೂರು

ಕಾನ್‌ಸ್ಟೆಬಲ್‌ ಸೋಗಿನಲ್ಲಿ ಕಳವು

ಈ ಬಗ್ಗೆ ಸುಜಾತಾ, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರ ತಾಯಿಯು ಅನ್ನಪೂರ್ಣೇಶ್ವರಿ ನಗರದ 8ನೇ ಕ್ರಾಸ್‍ನಲ್ಲಿ ವಾಸವಿದ್ದಾರೆ. ಅವರಿಗೆ ಊಟ ನೀಡಲೆಂದು ಹೋಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರು: ಕಾನ್‌ಸ್ಟೆಬಲ್‌ ಸೋಗಿನಲ್ಲಿ ದುಷ್ಕರ್ಮಿಯೊಬ್ಬ ನಾಗರಭಾವಿ ನಿವಾಸಿ ಸುಜಾತಾ ಎಂಬುವರ ಚಿನ್ನದ ಸರ ಕಳವು ಮಾಡಿದ್ದಾನೆ.

ಈ ಬಗ್ಗೆ ಸುಜಾತಾ, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರ ತಾಯಿಯು ಅನ್ನಪೂರ್ಣೇಶ್ವರಿ ನಗರದ 8ನೇ ಕ್ರಾಸ್‍ನಲ್ಲಿ ವಾಸವಿದ್ದಾರೆ. ಅವರಿಗೆ ಊಟ ನೀಡಲೆಂದು ಹೋಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಕಾನ್‌ಸ್ಟೆಬಲ್‌ ಎಂದು ಪರಿಚಯಿಸಿಕೊಂಡಿದ್ದ. ‘ಮುಂದಿನ ರಸ್ತೆಯಲ್ಲಿ ಕಳವು ಆಗಿದೆ. ನಿಮ್ಮ ಚಿನ್ನದ ಸರವನ್ನು ಬಚ್ಚಿಟ್ಟುಕೊಂಡು ಹೋಗಿ’ ಎಂದಿದ್ದ.

ಅದನ್ನು ನಂಬಿದ್ದ ಮಹಿಳೆ, 40 ಗ್ರಾಂ ತೂಕದ ಸರವನ್ನು ಪ್ಲಾಸ್ಟಿಕ್ ಕವರ್‍ನಲ್ಲಿಟ್ಟುಕೊಂಡು ಮುಂದೆ ಸಾಗಿದ್ದರು. ಅವರನ್ನೇ ಹಿಂಬಾಲಿಸಿದ ಆರೋಪಿ,
ಕವರ್‌ ಕಿತ್ತೊಯ್ದಿದ್ದಾನೆ ಎಂದು ತಿಳಿಸಿದರು.

ದುಷ್ಕರ್ಮಿ ಹೆಲ್ಮೆಟ್ ಧರಿಸಿದ್ದರಿಂದ ಆತನ ಮುಖ ಚಹರೆ ನೋಡಲಿಲ್ಲವೆಂದು ದೂರುದಾರರು ಹೇಳುತ್ತಿದ್ದಾರೆ. ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018