ಸ್ಮಾರ್ಟ್‌ ಬೆಳಕಿನ ವ್ಯವಸ್ಥೆ

ವಿಪ್ರೊದಿಂದ ಚತುರ ಬೆಳಕು

‘ಡಿಜಿಟಲ್‌ ಮಾಧ್ಯಮವನ್ನು ಬಳಸಿ ಚತುರ ಬೆಳಕಿನ ವ್ಯವಸ್ಥೆ ರೂಪಿಸಿದ್ದೇವೆ. ಇದು ಸ್ಮಾರ್ಟ್‌ ಹೋಮ್‌ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನೆರವಾಗಿದೆ. ಸಿಸ್ಕೊ ಹಾಗೂ ಸ್ಕಾಟ್ಲೆಂಡ್‌ನ ಪ್ಯೂರ್‌ ಲಿ–ಫೈ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಿದ್ದೇವೆ. ಮನೆಯಲ್ಲಿರುವ ಎಲ್ಲ ಸಾಧನಗಳನ್ನು ಬೆಳಕಿನ ವ್ಯವಸ್ಥೆಗೆ ಜೋಡಿಸಿ ಅವನ್ನು ಸ್ವಯಂಚಾಲಿತಗೊಳಿಸಬಹುದು’...

ಹೊರಾಂಗಣದಲ್ಲಿ ಅಳವಡಿಸಬಹುದಾದ ಸ್ಮಾರ್ಟ್‌ ಬೆಳಕಿನ ವ್ಯವಸ್ಥೆಯನ್ನು ವಿಪ್ರೊ ವ್ಯವಹಾರ ವಿಭಾಗದ ಮುಖ್ಯಸ್ಥ ಅನುಜ್‌ ಧಿರ್‌ ವಿವರಿಸಿದರು. ವಿನೀತ್‌ ಅಗರ್ವಾಲ್‌ ಇದ್ದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಹಾಗೂ ಬಿಗ್‌ ಡಾಟಾ ಪರಿಕಲ್ಪನೆಯನ್ನು ಬಳಸಿಕೊಂಡು ವಿಪ್ರೊ ಕಂಪನಿ ಚತುರ ಬೆಳಕಿನ ವ್ಯವಸ್ಥೆಯನ್ನು ಪರಿಚಯಿಸಿದೆ.

ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮಾತನಾಡಿದ ಕಂಪನಿ ಸಿಇಒ ವಿನೀತ್‌ ಅಗರ್ವಾಲ್‌, ‘ಡಿಜಿಟಲ್‌ ಮಾಧ್ಯಮವನ್ನು ಬಳಸಿ ಚತುರ ಬೆಳಕಿನ ವ್ಯವಸ್ಥೆ ರೂಪಿಸಿದ್ದೇವೆ. ಇದು ಸ್ಮಾರ್ಟ್‌ ಹೋಮ್‌ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನೆರವಾಗಿದೆ. ಸಿಸ್ಕೊ ಹಾಗೂ ಸ್ಕಾಟ್ಲೆಂಡ್‌ನ ಪ್ಯೂರ್‌ ಲಿ–ಫೈ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಿದ್ದೇವೆ. ಮನೆಯಲ್ಲಿರುವ ಎಲ್ಲ ಸಾಧನಗಳನ್ನು ಬೆಳಕಿನ ವ್ಯವಸ್ಥೆಗೆ ಜೋಡಿಸಿ ಅವನ್ನು ಸ್ವಯಂಚಾಲಿತಗೊಳಿಸಬಹುದು’ ಎಂದು ವಿವರಿಸಿದರು.

‘ಯಾವ ಕೋಣೆಯಲ್ಲಿ ಬಲ್ಬ್‌ ಉರಿಯುತ್ತಿದೆ ಎಂಬುದನ್ನು ನಿಮ್ಮ ಮೊಬೈಲ್‌ನಲ್ಲಿಯೇ ತಿಳಿಯಬಹುದು. ಮನೆಯಿಂದ ಹೊರಗೆ ಹೊರಡುವಾಗ ಸ್ಮಾರ್ಟ್‌ಫೋನಿನಲ್ಲಿ ‘Going out’ ಎಂಬ ಸಂದೇಶ ಟೈಪಿಸಿದರೆ ಬಲ್ಬ್‌ಗಳು ಆಫ್ ಆಗುವ ವ್ಯವಸ್ಥೆ ಇದರಲ್ಲಿದೆ. ಹೊರಾಂಗಣದಲ್ಲಿ ಬಹಳಸಬಹುದಾದ ಲೈಟಿಂಗ್‌ಗಳು ಭದ್ರತೆ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಬಲ್ಲವು’ ಎಂದು ಹೇಳಿದರು.

ಬೆಳಕಿನ ಮೂಲಕ ಅಂತರ್ಜಾಲ ಬಳಸಬಹುದಾದ ಲಿ–ಫೈ ತಂತ್ರಜ್ಞಾನಪರಿಚಯಿಸಿದ್ದೇವೆ. ಇದು ವೈ–ಫೈ ತಂತ್ರಜ್ಞಾನಕ್ಕೆ ಪರ್ಯಾಯವಾಗಿದೆ. ಎಲ್‌ಇಡಿ ಬಲ್ಬ್‌ನಲ್ಲಿ ಮೈಕ್ರೊಚಿಪ್‌ ಅಳವಡಿಸಲಾಗುತ್ತದೆ.ಹೊರಹೊಮ್ಮುವ ಬೆಳಕಿನ ಸಂಕೇತಗಳಿಂದ ಅಂತರ್ಜಾಲ ಸಂಪರ್ಕ ಪಡೆಯಬಹುದು. ಸದ್ಯ ರೇಡಿಯೊ ತರಂಗಾಂತರದ ಮೂಲಕ ಅಂತರ್ಜಾಲದ ಸಂಕೇತ­ಗಳನ್ನು ರವಾನಿಸಲಾಗುತ್ತಿದೆ ಎಂದು ವಿವರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018