ಫೌಂಡೇಶನ್‌ ಶಿಕ್ಷಣ ಸಂಸ್ಥೆ ಮನವಿ ತಿರಸ್ಕರಿಸಿದ ಹೈಕೋರ್ಟ್

ಆರ್‌ಟಿಇ ವಿನಾಯ್ತಿ ಕೋರಿಕೆ ತಿರಸ್ಕಾರ

ಈ ಕುರಿತಂತೆ ಸಂಸ್ಥೆಯ ಕಾರ್ಯದರ್ಶಿ ಜೋಜಿ ಮ್ಯಾಥ್ಯೂ ಕುರನ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶ ನೀಡುವುದಕ್ಕೆ ವಿನಾಯ್ತಿ ಕೋರಿದ್ದ ನಗರದ ‘ಫೌಂಡೇಶನ್‌ ಶಿಕ್ಷಣ ಸಂಸ್ಥೆ’ ಮನವಿಯನ್ನು ಹೈಕೋರ್ಟ್‌ ನಿರಾಕರಿಸಿದೆ.

ಈ ಕುರಿತಂತೆ ಸಂಸ್ಥೆಯ ಕಾರ್ಯದರ್ಶಿ ಜೋಜಿ ಮ್ಯಾಥ್ಯೂ ಕುರನ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳರಾಷ್ಟ್ರೀಯ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

‘ಅರ್‌ಟಿಇ ಕೋಟಾದ ಅಡಿವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

‘ನಮ್ಮ ಶಿಕ್ಷಣ ಸಂಸ್ಥೆ ಅಲ್ಪಸಂಖ್ಯಾತ ಮಾನ್ಯತೆಗೆ ಅರ್ಜಿ ಸಲ್ಲಿಸಿದೆ. ಆದರೆ, ಅದಿನ್ನೂ ಸಿಕ್ಕಿಲ್ಲ. ಆದ್ದರಿಂದ, ನಮಗೆ ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ಸೀಟುಗಳನ್ನು ನೀಡಬೇಕೆಂಬ ನಿರ್ದೇಶನದಿಂದ ವಿನಾಯ್ತಿ ನೀಡಬೇಕು’ ಎಂಬುದು ಅರ್ಜಿದಾರ ಕೋರಿಕೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018