ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಡನ್‌ಗೆ ಜಯದ ಸಿಹಿ: ಸ್ವಿಸ್‌ಗೆ ಕಹಿ

ಎಮಿಲ್ ಫೋರ್ಸ್‌ಬರ್ಗ್ ಗಳಿಸಿದ ಏಕೈಕ ಗೋಲು: ಕ್ವಾರ್ಟರ್‌ಫೈನಲ್‌ಗೆ ಸಾಗಿದ ಸ್ವೀಡನ್
Last Updated 3 ಜುಲೈ 2018, 19:50 IST
ಅಕ್ಷರ ಗಾತ್ರ

ಮಾಸ್ಕೊ: ಎಮಿಲ್ ಫೋರ್ಸ್‌ಬರ್ಗ್‌ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ವೀಡನ್ ತಂಡವು ಮಂಗಳವಾರ ರಾತ್ರಿ ಇಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ಗಳಿಸಿತು.

ಸ್ವಿಟ್ಜರ್‌ಲೆಂಡ್ ತಂಡವು 1954ರಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು. ಅದರ ನಂತರ ಆಡಿದ ವಿಶ್ವಕಪ್ ಟೂರ್ನಿಗಳಲ್ಲಿ ಎಂಟರ ಘಟ್ಟ ತಲುಪುವ ತಂಡದ ಕನಸು ಈಡೇರಿಲ್ಲ. ಈ ಬಾರಿಯೂ ಸ್ವೀಡನ್ ತಂಡದ ಎಮಿಲ್ ಅಡ್ಡಗಾಲು ಹಾಕಿದರು.

ಪಂದ್ಯದ 65 ನಿಮಿಷಗಳವರೆಗೆ ಉಭಯ ತಂಡಗಳು ನಡೆಸಿದ ತುರುಸಿನ ಹೋರಾಟ ರಂಗೇರಿತು. ಇದರಿಂದಾಗಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ 66ನೇ ನಿಮಿಷದಲ್ಲಿ ಎಮಿಲ್ ಅವರ ಮಿಂಚಿನ ಆಟ ಫಲ ನೀಡಿತು. ಸ್ವೀಡನ್ 1–0 ಮುನ್ನಡೆ ಗಳಿಸಿತು.

ಚುರುಕಾದ ಪಾಸ್‌ಗಳ ಮೂಲಕ ಗಮನ ಸೆಳೆದ ಎರಡೂ ತಂಡಗಳ ಆಟಗಾರರು ಗೋಲು ಗಳಿಸಲು ಹರಸಾಹಸಪಟ್ಟರು. ಕೊನೆಯ 25 ನಿಮಿಷಗಳು ಮತ್ತು ಇಂಜುರಿ ಸಮಯದಲ್ಲಿ ಸ್ವಿಸ್‌ ತಂಡದ ಆಟಗಾರರು ವೇಗದ ಆಟವಾಡಿದರು. ಆದರೆ, ಸ್ವೀಡನ್ ತಂಡದ ರಕ್ಷಣಾ ಆಟಗಾರರೂ ದಿಟ್ಟತನದಿಂದ ಎದುರಿಸಿದರು.

ಸ್ವಿಸ್ ತಂಡವು ಶೇ 63ರಷ್ಟು ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಸ್ವೀಡಿಶ್ ಆಟಗಾರರು ಶೇ 37ರಷ್ಟು ನಿಯಂತ್ರಣ ಸಾಧಿಸಿದರೂ ಗೆಲುವಿನ ಗಡಿ ಮುಟ್ಟುವಲ್ಲಿ ಹಿಂದೆ ಬೀಳಲಿಲ್ಲ.

ಸ್ವಿಸ್‌ ತಂಡವು ನಾಲ್ಕು ಬಾರಿ ಗೋಲು ಬಾರಿಸುವ ಅತ್ಯಂತ ನಿಕಟ ಪ್ರಯತ್ನ ಮಾಡಿತು. ಆದರೆ ಸಫಲವಾಗಲಿಲ್ಲ. ಸ್ವೀಡನ್ ಕೂಡ ಮೂರು ಬಾರಿ ಅವಕಾಶಗಳನ್ನು ಕೈಚೆಲ್ಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT