ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕುಸಿದ ರೂಪಾಯಿ ಮೌಲ್ಯ

Last Updated 5 ಜುಲೈ 2018, 14:44 IST
ಅಕ್ಷರ ಗಾತ್ರ

ಮುಂಬೈ:ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರ 21 ಪೈಸೆ ಇಳಿಕೆ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 68.95ರಲ್ಲಿ ವಹಿವಾಟು ಅಂತ್ಯವಾಗಿದೆ.

ಅಮೆರಿಕದ ಡಾಲರ್‌ಗೆ ಡಿಢೀರನೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದರಿಂದ ರೂಪಾಯಿ ಮೌಲ್ಯವುಗುರುವಾರ 21 ಪೈಸೆ ಇಳಿಕೆ ಕಂಡು ದಾಖಲೆ ಕುಸಿತಕ್ಕೆ ಒಳಗಾಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗುತ್ತಿದೆ. ಹೀಗಾಗಿ ಆರ್ಥಿಕ ಪ್ರಗತಿ ತಗ್ಗುವ ಆತಂಕ ಎದುರಾಗಿದೆ. ಇದರ ಜತೆಗೆ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಏರಿಕೆ ನಿರ್ದಾರ ಹಾಗೂ ಚಾಲ್ತಿ ಖಾತೆ ಕೊರತೆ ಅಂತದಲ್ಲಿನ ಹೆಚ್ಚಳವೂ ನಕಾರಾತ್ಮಕ ಪರಿಣಾಮ ಬೀರಿದೆ.

ಆರ್‌ಬಿಐ ಮಧ್ಯಪ್ರವೇಶ ಮಾಡಿದ್ದರಿಂದ ರೂಪಾಯಿ ಮೌಲ್ಯ 69ರ ಮಟ್ಟಕ್ಕೆ ಕುಸಿಯುವುದು ತಪ್ಪಿದೆ ಎಂದುವಿಶ್ಲೇಷಕರು ಅಂದಾಜು ಮಾಡಿದ್ದಾರೆ.

ಜೂನ್‌ 28 ರಂದು ದಾಖಲೆ ಮಟ್ಟವಾದ ₹ 69.10ಕ್ಕೆ ಇಳಿಕೆಯಾಗಿತ್ತು.

ಸೂಚ್ಯಂಕ ಇಳಿಕೆ:ಎರಡು ದಿನಗಳ ಸೂಚ್ಯಂಕದ ಓಟಕ್ಕೆ ಗುರುವಾರ ತಡೆ ಬಿದ್ದಿದೆ.

ಚೀನಾದ ಸರಕುಗಳಿಗೆ ಹೆಚ್ಚುವರಿ ಸುಂಕ ವಿಧಿಸುವ ಅಮೆರಿಕದ ನಿರ್ಧಾರದಿಂದ ಏಷ್ಯಾದ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿತು. ಇದು ಭಾರತದ ಮೇಲೆಯೂ ಪರಿಣಾಮ ಬೀರುವಂತಾಯಿತು.

ವಿದೇಶಿ ಬಂಡವಾಳ ಹೊರಹರಿವು ಹೆಚ್ಚುತ್ತಲೇ ಇದೆ. ಇದು ಸಹ ವಹಿವಾಟಿನ ಇಳಿಕೆಗೆ ಕಾರಣವಾಯಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 71 ಅಂಶ ಇಳಿಕೆ ಕಂಡು 35,574 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್‌ಇ) ನಿಫ್ಟಿ 20 ಅಂಶ ಇಳಿಕೆಯಾಗಿ 10,740 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಇನ್ಫೊಸಿಸ್‌ಗೆ ₹ 13,125 ಕೋಟಿ ನಷ್ಟ:ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ಗೆಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ 4.5 ರಷ್ಟು ಇಳಿಕೆ ಕಂಡಿವೆ.

ಇದರಿಂದ ಸಂಸ್ಥೆಯ ಬಂಡವಾಳ ಮೌಲ್ಯದಲ್ಲಿ ₹ 13,125 ಕೋಟಿ ಕರಗಿದ್ದು, ಒಟ್ಟು ಮೌಲ್ಯ ₹ 2.80 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಬಿಎಸ್‌ಇನಲ್ಲಿ 4.57 ಲಕ್ಷ ಷೇರುಗಳು ವಹಿವಾಟು ನಡೆಸಿದರೆ, ಎನ್‌ಎಸ್‌ಇನಲ್ಲಿ 85 ಲಕ್ಷ ಷೇರುಗಳು ಕೈಬದಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT