ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಹದ ಉಷ್ಣಾಂಶದಿಂದಲೇ ಮೊಬೈಲ್ ಚಾರ್ಜ್’

ಸಾಯಿರಾಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಶೋಧನೆ
Last Updated 5 ಜುಲೈ 2018, 13:58 IST
ಅಕ್ಷರ ಗಾತ್ರ

ಬೆಂಗಳೂರು:‘ದೇಹದ ಉಷ್ಣಾಂಶ, ಸೂರ್ಯನ ಬೆಳಕಿನಿಂದಲೇ ಮೊಬೈಲ್ ಚಾರ್ಜ್ ಆಗುವ ‘ಸೌರಚಾಲಿತ ಅಡಾಪ್ಟರ್’ ಯಂತ್ರವನ್ನುಸಾಯಿರಾಂ ಎಂಜಿನಿಯರಿಂಗ್ ಕಾಲೇಜಿನಿ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ’ ಎಂದುಪ್ರಾಂಶುಪಾಲ ಡಾ.ವೈ.ವಿಜಯ್‍ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಇನೋವೇಟಿವ್ ಸೆಂಟರ್‌ನಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಯಂತ್ರ ಹಾಗೂ ಮೊಬೈಲ್ ನಡುವೆ ಒಂದು ಕ್ಲಿಪ್ ಇರುವ ವೈರ್‌ ಸಂಪರ್ಕ ಕಲ್ಪಿಸಿ, ಕ್ಲಿಪ್‍ನ್ನು ಶರ್ಟ್‍ಗೆ ಸಿಕ್ಕಿಸಿದರೆ ಬ್ಯಾಟರಿ ತಾನಾಗಿಯೇ ಚಾರ್ಜ್ ಆಗುತ್ತದೆ. ಇದು ಪ್ರವಾಸಿಗರಿಗೆ ಹೆಚ್ಚು ಅನುಕೂಲಕಾರಿ’ ಎಂದರು.

‘ಮಾನವ ಚಾಲಿತ ತ್ರಿಚಕ್ರ ವಾಹನ ಬಳಸುವಅಂಗವಿಕಲರಿಗಾಗಿ ‘ಹೆಡ್ ಬ್ಯಾಂಡ್’, ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳು ಅಥವಾ ವಸ್ತುವನ್ನು ಹೊರತೆಗೆಯಲು ‘ಬೋರ್‍ವೆಲ್ ರೆಸ್ಕ್ಯೂ ರೊಬೊಟ್’ (10 ಅಡಿ ಆಳದಿಂದ ಮೇಲೆತ್ತಬಹುದು) ಸಾಧನವನ್ನು ಕಂಡುಹಿಡಿಯಲಾಗಿದೆ. ಸದ್ಯ 50 ಅಡಿ ಆಳದಿಂದ ಮೇಲೆತ್ತುವ ಸಾಧನ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.ರೆಡಿಯೋ ತರಂಗಗಳನ್ನು ಆಧರಿಸಿ ಮೆಟ್ರೋ ನಿಲ್ದಾಣದಲ್ಲಿ ಸ್ವಯಂಚಾಲಿತವಾಗಿ ಗೇಟ್ ತೆರೆಯುವ ಯಂತ್ರ ಮತ್ತು ಕೊಳಚೆ, ಮರಳು ಹಾಗೂ ಮಣ್ಣಿನಲ್ಲಿ ಚಲಿಸುವ ‘ಆಲ್ ಟೆರ್ರೇನ್ ವಾಹನ’ವನ್ನು ಆವಿಷ್ಕರಿಸುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT