ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್‌ ಇಂಡೀಸ್‌ ಜಯಭೇರಿ

ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ನಿರಾಸೆ
Last Updated 7 ಜುಲೈ 2018, 14:07 IST
ಅಕ್ಷರ ಗಾತ್ರ

ನಾರ್ಥ್‌ ಸೌಂಡ್‌, ಆ್ಯಂಟಿಗಾ (ಎಎಫ್‌ಪಿ): ಶಾನನ್‌ ಗ್ಯಾಬ್ರಿಯಲ್‌ (77ಕ್ಕೆ5) ಮತ್ತು ಕೆಮರ್‌ ರೋಚ್‌ (8ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 219ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ 6 ವಿಕೆಟ್‌ಗೆ 62ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಬಾಂಗ್ಲಾದೇಶ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 40.2 ಓವರ್‌ಗಳಲ್ಲಿ 144ರನ್‌ಗಳಿಗೆ ಆಲೌಟ್‌ ಆಯಿತು. ಈ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 18.4 ಓವರ್‌ಗಳಲ್ಲಿ 43ರನ್‌ಗಳಿಗೆ ಹೋರಾಟ ಮುಗಿಸಿತ್ತು. ಕೆಮರ್‌ ರೋಚ್‌ ದಾಳಿಗೆ ಶಕೀಬ್‌ ಅಲ್‌ ಹಸನ್‌ ‍ಪಡೆ ಕಂಗೆಟ್ಟಿತ್ತು.

ಆತಿಥೇಯ ವಿಂಡೀಸ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 137.3 ಓವರ್‌ಗಳಲ್ಲಿ 406ರನ್‌ಗಳನ್ನು ದಾಖಲಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌, 18.4 ಓವರ್‌ಗಳಲ್ಲಿ 43 ಮತ್ತು 40.2 ಓವರ್‌ಗಳಲ್ಲಿ 144 (ತಮಿಮ್‌ ಇಕ್ಬಾಲ್‌ 13, ಶಕೀಬ್‌ ಅಲ್‌ ಹಸನ್‌ 12, ಮಹಮದುಲ್ಲಾ 15, ನೂರುಲ್ ಹಸನ್‌ 64, ರುಬೆಲ್‌ ಹೊಸೇನ್‌ 16; ಜೇಸನ್‌ ಹೋಲ್ಡರ್‌ 30ಕ್ಕೆ3, ಶಾನನ್‌ ಗೇಬ್ರಿಯಲ್‌ 77ಕ್ಕೆ5, ಮಿಗುಯೆಲ್‌ ಕಮಿನ್ಸ್‌ 16ಕ್ಕೆ2).

ವೆಸ್ಟ್‌ ಇಂಡೀಸ್‌: ಪ್ರಥಮ ಇನಿಂಗ್ಸ್‌, 137.3 ಓವರ್‌ಗಳಲ್ಲಿ 406 (ಕ್ರೆಗ್‌ ಬ್ರಾಥ್‌ವೇಟ್‌ 121, ಡೆವೊನ್‌ ಸ್ಮಿತ್‌ 58, ಕೀರನ್‌ ಪೊವೆಲ್‌ 48, ದೇವೇಂದ್ರ ಬಿಷೂ 19, ಶಾಯ್‌ ಹೋಪ್‌ 67, ಜೇಸನ್‌ ಹೋಲ್ಡರ್‌ 33, ಕೆಮರ್‌ ರೋಚ್‌ 33; ಅಬು ಜಾಯೆದ್‌ 84ಕ್ಕೆ3, ಕಮ್ರುಲ್‌ ಇಸ್ಲಾಂ ರಾಬಿ 69ಕ್ಕೆ1, ಶಕೀಬ್‌ ಅಲ್‌ ಹಸನ್‌ 71ಕ್ಕೆ2, ಮೆಹದಿ ಹಸನ್‌ 101ಕ್ಕೆ3, ಮಹಮದುಲ್ಲಾ 18ಕ್ಕೆ1).

ಫಲಿತಾಂಶ: ವೆಸ್ಟ್‌ ಇಂಡೀಸ್‌ ತಂಡಕ್ಕೆ ಇನಿಂಗ್ಸ್‌ ಮತ್ತು 219ರನ್‌ ಗೆಲುವು.

ಪಂದ್ಯಶ್ರೇಷ್ಠ: ಕೆಮರ್‌ ರೋಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT