ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣಯ್ಯ ನೆನಪು...

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರೈತ ಮುಖಂಡ ಪುಟ್ಟಣ್ಣಯ್ಯನವರ ಸಾವಿನ ವಿಷಯ ಬೇಸರ ಮೂಡಿಸಿತು. ಜೊತೆಗೆ ಒಂದೆರಡು ಘಟನೆಗಳೂ ನೆನಪಾದವು.

ಸಾಹಿತ್ಯ ಸಮ್ಮೇಳನವೊಂದರಲ್ಲಿ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ಹಿಂದಿಯನ್ನೂ ಒಂದಿಷ್ಟು ಬಳಸಿಕೊಂಡು ಚೆನ್ನಾಗಿಯೇ ಮಾತನಾಡಿದರು. ‘ಮುಂದೆ ದೆಹಲಿಗೆ ಹೋಗಬೇಕಾಗುತ್ತದೇನೋ, ಯಾರಿಗೆ ಗೊತ್ತು’ ಎಂದು ತಮಾಷೆಯಾಗಿ ಸೇರಿಸಿದರು ಕೂಡ.

ಅದಾದ ಮೇಲೆ, ಕೆಳಗೆ ಸಿಕ್ಕಾಗ ‘ಎರಡು ನಿಮಿಷ ಮಾತನಾಡುವುದಿದೆ’ ಎಂದೆ. ‘ಸ್ವಲ್ಪ ಹೊತ್ತು ಬಿಟ್ಟುಬಿಡಿ, ಎರಡು ನಿಮಿಷವೇನು, ಎರಡು ಗಂಟೆ ಮಾತಾಡೋಣ’ ಎಂದರು. ಆ ‘ಸ್ವಲ್ಪ ಹೊತ್ತು’ ಎಳೆಯಿತು, ನಾನು ಜಾಗ ಖಾಲಿ ಮಾಡಿದೆ.

ಎಂ.ಡಿ. ನಂಜುಂಡಸ್ವಾಮಿ ತೀರಿಕೊಂಡಾಗ, ‘ಸರ್ವಾಧಿಕಾರಿ ಧೋರಣೆ ಅವರ ದೋಷವಾಗಿತ್ತು’ ಎಂದಿದ್ದರವರು. ಪುಟ್ಟಣ್ಣಯ್ಯನವರ ದೌರ್ಬಲ್ಯ– ಹೆಚ್ಚು ಮಾತನಾಡುವುದು, ತಮ್ಮ ಮಾತಿನ ಬಗ್ಗೆ ತಾವೇ ಮೋಹಗೊಳ್ಳುವುದು. ರಾಜಕೀಯ ಚಪಲ ಬಿಟ್ಟು, ಟ್ರೇಡ್‌ ಯೂನಿಯನ್‌ ಶೈಲಿಗಿಂತ ಭಿನ್ನವಾಗಿ, ಒಂದಿಷ್ಟು ರಚನಾತ್ಮಕವಾಗಿಯೂ ರೈತ ಚಳವಳಿಯನ್ನು ಕಟ್ಟಿದ್ದಿದ್ದರೆ ಪುಟ್ಟಣ್ಣಯ್ಯ ಇನ್ನಷ್ಟು ಉಪಯುಕ್ತರಾಗುತ್ತಿದ್ದರು.

ಎಚ್‌.ಎಸ್‌. ಮಂಜುನಾಥ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT