ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಮರೆಸಿಕೊಂಡಿರುವ ಮರಳು ದಂಧೆಕೋರರ ಬಂಧನಕ್ಕೆ ಕ್ರಮ: ಲಕ್ಷ್ಮಣ್ ನಿಂಬರಗಿ

Last Updated 24 ಫೆಬ್ರುವರಿ 2018, 6:03 IST
ಅಕ್ಷರ ಗಾತ್ರ

ಉಡುಪಿ: ‘ಟೋಲ್ ಗೇಟ್ ಶುಲ್ಕ ತಪ್ಪಿಸಲು ಗ್ರಾಮಾಂತರ ಮಾರ್ಗದಲ್ಲಿ ಸಂಚರಿಸುವ ಭಾರಿ ತೂಕದ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಪ್ರಾದೇಶಿಕ ಸಾರಿಗೆ ಕಚೇರಿಗೆ ರವಾನಿಸುವಂತೆ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಶುಕ್ರವಾರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ ಸಾರ್ವಜನಿಕರೊಬ್ಬರು, ಸಾಸ್ತನ ಟೋಲ್‌ ಶುಲ್ಕ ತಪ್ಪಿಸಲು 40ರಿಂದ 50ಟನ್‌ ತೂಕ ಹೊತ್ತ ವಾಹನಗಳು ಜನ್ನಾಡಿ, ಬಾರ್ಕೂರು, ಹೆರಾಡಿ ಮಾರ್ಗವಾಗಿ ಸಂಚರಿಸುತ್ತಿವೆ. ಈ ಮಾರ್ಗದಲ್ಲಿರುವ ಚಿಕ್ಕದಾದ ಸೇತುವೆಗಳು ಇದೀಗ ಕುಸಿತದ ಹಂತದಲ್ಲಿವೆ. ವಾಹನ ಸಂಚಾರ ಮುಂದುವರೆದರೆ ನಗರಕ್ಕೆ ಸಂಪರ್ಕ ಒದಗಿಸುವ ಸೇತುವೆ ಕುಸಿಯಲಿದೆ ಎಂದು ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ನಿಷೇಧಿತ ಪ್ರದೇಶದಲ್ಲಿ ಸಂಚರಿಸುವ ಭಾರಿ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ. ನಂತರ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ ರವಾನಿಸಿ. ಜನ ವಸತಿ ಪ್ರದೇಶದಲ್ಲಿ ಕೂಡ ವಾಹನಗಳು ಸಂಚರಿಸದಂತೆ ದಡೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. 15 ದಿನಕ್ಕೊಮ್ಮೆಯಾದರೂ ಸಿಬ್ಬಂದಿ ಅಂತಹ ಸ್ಥಳಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗುವುದು ಎಂದರು.

ಉದ್ಯಾವರ, ಬ್ರಹ್ಮಾವರ, ಬಲೈಪಾದೆ ಪ್ರದೇಶದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ಮಾರ್ಗದಲ್ಲಿ ಸಂಚರಿಸುವುದರಿಂದ ತೊಂದರೆ ಆಗುತತಿದೆ. ಗಂಗೊಳಿ ಸಮೀಪ ಶಿರಸಿಯಲ್ಲಿ ವಾಹನಗಳ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುತ್ತಿರುವುದರಿಂದ ಶಾಲೆ, ಉದ್ಯೋಗಕ್ಕೆ ತೆರಳುವವರಿಗೆ, ವೃದ್ಧರಿಗೆ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದರು.

ಬೆಳಿಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ಪಾಳಿಯಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು. ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸಿದಂತೆ ಸಹ ವಿಶೇಷ ಗಸ್ತು ವ್ಯವಸ್ಥೆ ಹಾಕಲಾಗುವುದು ಎಂದು ಭರವಸೆ ನೀಡಿದರು.

ಬ್ರಹ್ಮಾವರ ಹಂದಾಡಿಯಲ್ಲಿ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸ್‌ ಇಲಾಖೆ ಶೋಧದಲ್ಲಿ ಇದ್ದಾರೆ ತನಿಖೆ ಪ್ರಗತಿಯಲ್ಲಿದೆ. ಕಳೆದ ಎರಡು ವಾರದಿಂದ ಕಾರ್ಕಳ ನಗರ 4 ಹಾಗೂ ಕೋಟದಲ್ಲಿ 1 ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲಾಗಿದೆ ಎಂದರು. ಒಟ್ಟು 23 ಕರೆಗಳು ಬಂದಿವು.

ಮಂಗನಕಾಟ ನಿವಾರಿಸಿ!

ಶಿರ್ವ ಹಳೆ ಪೊಲೀಸ್‌ ನಿವಾಸದಲ್ಲಿ ಯಾರು ವಾಸವಾವಿಲ್ಲದ ಕಟ್ಟಡಲ್ಲಿ ಮಂಗಗಳು ಬೀಡು ಬಿಟ್ಟಿವೆ ಇದರಿಂದಾಗಿ ಪರಿಸರದ ಮನೆಗಳ ಮೇಲೆ ಮಂಗಗಳು ದಾಳಿ ಮಾಡುತ್ತಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಈಗಾಗಲೇ ರಾಜಕಾರಣಿ ಹಾಗೂ ಅಧಿಕಾರಿಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ನೀವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿ ಎಂದು ಸಾರ್ವಜನಿಕೊಬ್ಬರ ಮನವಿ ಮಾಡಿದರು.

ಮಣಿಪಾಲ ಪೊಲೀಸ್‌ ವಸತಿ ಗೃಹದಿಂದ ಕರೆ ಮಾಡಿದ ಮಹಿಳೆ ಸಮೀಪದ ಪ್ರವಾಸಿ ನಿಲಯದಿಂದ ಹೊರ ಬಿಡುತ್ತಿರುವ ತ್ಯಾಜ್ಯ ನೀರಿನಿಂದಾಗಿ ಇಲ್ಲಿ ವಾಸಿಸುವ ಪೊಲೀಸರಿಗೆ ಹಾಗೂ ಮಕ್ಕಳಿಗೆ ಜ್ವರ, ಮಲೇರಿಯ ದಂತಹ ಆರೊಗ್ಯ ಸಂಬಂಧಿತ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂದು ದೂರಿದರು. ಮೂರು ದಿನದಲ್ಲಿ ಈ ಸಮಸ್ಯೆ ನಿವಾರಿಸುವುದಾಗಿ ಎಸ್ಪಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT