ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವಿರ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

Last Updated 24 ಫೆಬ್ರುವರಿ 2018, 9:06 IST
ಅಕ್ಷರ ಗಾತ್ರ

ಗದಗ: ಮತದಾರರ ಜಾಗೃತಿಗಾಗಿ ಶುಕ್ರವಾರ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಂದ ಸೈಕಲ್‌ ಜಾಥಾ ನಡೆಯಿತು. ಗದಗ–ಬೆಟಗೇರಿ ಅವಳಿ ನಗರದ ನಾಲ್ಕೂ ದಿಕ್ಕಿನಿಂದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್‌ ಜಾಥಾ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದರು.

‘ಮತದಾನ ನಮ್ಮ ಹಕ್ಕು. ಅದನ್ನು ಅಭಿಮಾನ ಮತ್ತ ಉತ್ಸಾಹದಿಂದ ಚಲಾಯಿಸಬೇಕು. ನಮ್ಮ ಸುತ್ತಲಿನ ಜನರಿಗೆ ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಹೊಣೆ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸೈಕಲ್ ಜಾಥಾದಲ್ಲಿ ನಗರದ ಬಸವೇ
ಶ್ವರ ಪ್ರೌಢಶಾಲೆ, ಸಿದ್ದಲಿಂಗನಗರದ ಸರ್ಕಾರಿ ಪ್ರೌಢಶಾಲೆ ವೆಂಕಟೇಶ್ವರ ಪ್ರೌಢಶಾಲೆ, ಸಿಡಿಒ ಜೈನ್, ಶಾಸ್ತ್ರೀಜಿ, ಕುರುಡಗಿ, ಸರ್ಕಾರಿ ಉರ್ದು ಪ್ರೌಢಶಾಲೆ,ವಿಡಿಎಸ್‌ಟಿ, ಸಿಎಸ್ ಪಾಟೀಲ, ಜೆ.ಪಿ. , ಕೆವಿಎಸ್‍ಆರ್, ಎಚ್‌.ಸಿ.ಇಎಸ್, ಶರಣಬಸವೇಶ್ವರ, ರಾಣಾಪ್ರತಾಪ್, ಲೊಯೊಲಾ, ಬಾಸೆಲ್ ಮಿಷನ್, ರೋಟರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪದಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್ ಮಾತನಾಡಿದರು. ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಟಿ.ದಿನೇಶ, ಡಿಡಿಪಿಐ ಜಿ.ರುದ್ರಪ್ಪ, ಕ್ರೀಡಾ
ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ ಇದ್ದರು.

ಶಿರಹಟ್ಟಿಯಲ್ಲಿ ಸೈಕಲ್‌ ಜಾಥಾ

ಶಿರಹಟ್ಟಿ: ‘ಮತದಾರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಶುಕ್ರವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವಿಧ್ಯಾರ್ಥಿಗಳಿಂದ ಸೈಕಲ್‌ ಜಾಥಾ ನಡೆಯಿತು.ತಾಲ್ಲೂಕು ಪಂಚಾಯ್ತಿ ಇಒ ಆರ್‌.ವೈ.ಗುರಿಕಾರ ಜಾಥಾಕ್ಕೆ ಚಾಲನೆ ನೀಡಿ, ‘ಮತದಾರರ ಶೇಕಡವಾರು ಪ್ರಮಾಣ ಹೆಚ್ಚಾಗಬೇಕು. ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದರು.

‘ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ. ಈ ಕುರಿತು ನಿರ್ಲಕ್ಷ್ಯ ಸಲ್ಲದು’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಎಚ್‌.ಆರ್‌.ಬೆನ
ಹಾಳ, ತಾಲ್ಲೂಕ ಪಂಚಾಯ್ತಿ ಸಿಬ್ಬಂದಿ ಇದ್ದರು.

‘ಮತದಾನದ ಮಹತ್ವ ಅರಿಯಿರಿ’

ಡಂಬಳ: ‘ಜನರು ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು’ ಎಂದು ಉಪ ತಹಶೀಲ್ದಾರ್ ಎಂ.ಎ.ನದಾಫ ಹೇಳಿದರು. ಗ್ರಾಮದ ತೋಂಟದಾರ್ಯ ಪ್ರೌಢಶಾಲೆಯಲ್ಲಿ ಮತದಾರರ ಜಾಗೃತಿಗಾಗಿ ಶುಕ್ರವಾರ ನಡೆದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಎಲ್ಲ ಗ್ರಾಮೀಣ ಪ್ರದೇಶ, ನಗರ, ಪಟ್ಟಣ, ಕೊಳೆಗೇರಿ ಸೇರಿ ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಶಾಲಾ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್‌ ಜಾಥಾ ನಡೆಸುವ ಮೂಲಕ ಮತದಾನದ ಕುರಿತು
ಜಾಗೃತಿ ಮೂಡಿಸಿದರು. ಮುಖ್ಯಶಿಕ್ಷಕ ಎಸ್.ಬಿ.ಹೂಗಾರ, ಎ.ಪಿ.ಮಾನ್ವಿ, ಬಸವ
ರಾಜ ಹಡಪದ, ಬಿ.ಆರ್.ಚಿಕ್ಕಯ್ಯನಮಠ ಇದ್ದರು.

ಉರ್ದು ಶಾಲೆ ಮಕ್ಕಳಿಂದ ಮತದಾನ ಜಾಗೃತಿ ಜಾಥಾ

ಗಜೇಂದ್ರಗಡ: ಇಲ್ಲಿನ ಸರ್ಕಾರಿ ಉರ್ದು ಪ್ರೌಢಶಾಲೆ ಮತ್ತು ತಾಲ್ಲೂಕು ಆಡಳಿತದಿಂದ ಶುಕ್ರವಾರ ಮತದಾನ ಜಾಗೃತಿ ಜಾಥಾ ನಡೆಯಿತು.ಉರ್ದು ಶಾಲೆಯ ಮಕ್ಕಳು ಮತದಾನ ಜಾಗೃತಿ ಘೋಷಣೆ ಕೂಗುತ್ತಾ ಕಾಲಕಾಲೇಶ್ವರ ವೃತ್ತದಲ್ಲಿ ಮನವ ಸರಪಳಿಯನ್ನು ನಿರ್ಮಿಸಿ ಜನರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲ್ಲೂಕಾ ತಹಶೀಲ್ದಾರ ಶಿವಕುಮಾರ ವಸ್ತ್ರದ, ಉರ್ದು ಶಾಲೆಯ ಪ್ರಧಾನ ಗುರುಗಳಾದ ಎಂ.ಡಿ.ಸರ್ಕಾವಸ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರಧಾನ ಗುರುಗಳಾದ ಬಿ.ಎನ್.ಜಾಲಿಹಾಳ, ಎಂ.ಬಿ.ರಡ್ಡೇರ, ಎ.ಎಂ.ಕೊಪ್ಪಳ, ಸಿ.ಬಿ.ಸೋನಾರ, ಎಸ್.ಬಿ.ಕಂದಗಲ್, ಎಸ್.ಸಿ.ಶಿವಸಿಂಪರ ಮತ್ತು ಎಸ್.ಡಿಎಂಸಿ ಸದಸ್ಯ ಎಚ್.ಎಸ್.ಭಜಂತ್ರಿ ಇದ್ದರು.

‘ಸಂವಿಧಾನಿಕ ಹಕ್ಕು’

ರೋಣ: ಮತದಾನವೆಂಬುದು ಪ್ರತಿಯೊಬ್ಬರ ಸಂವಿಧಾನಿಕ ಹಕ್ಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಎಸ್.ಆರ್.ಪಾಟೀಲ ಶಾಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವತ್ರಿಕ ಚುನಾವಣೆಯ ವೇಳೆ ಮತದಾರರ ಪಟ್ಟಿಯಲ್ಲಿರುವ ಯಾರೊಬ್ಬರು ಮತದಾನದಿಂದ ವಂಚಿತವಾಗಬಾರದು ಎಂಬ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಮತದಾನದ ಪಟ್ಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬರು ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಸೂಚಿದರು.

ತಾಲ್ಲೂಕ ಪಂಚಾಯ್ತಿ ಇಒ ಎಂ.ವಿ.ಚಳಗೇರಿ ಮಾತನಾಡಿ, ಪ್ರತಿಯೊಬ್ಬ ಪ್ರಜೆಯ ಸಂವಿಧಾನಾತ್ಮಕ ಹಕ್ಕು. ಮತದಾನದ ಮಹತ್ವವನ್ನು ಅರಿತು ಮತದಾನ ಪ್ರಕಿಯೆಯಲ್ಲಿ ಪ್ರತಿಯೊಬ್ಬರು ತೊಡಗಬೇಕಿದೆ. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

‘ಮತದಾನ ಪ್ರಮಾಣ ಹೆಚ್ಚಳಕ್ಕೆ ಯತ್ನ’

ಮುಂಡರಗಿ: ಚುನಾವಣಾ ಆಯೋಗ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಕಯ, ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಮತದಾರರ ಜಾಗೃತಿ ಜಾಥಾಕ್ಕೆ ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಮುಂಡರಗಿ ಚಾಲನೆ ನೀಡಿ ಮಾತನಾಡಿದರು.

‘2018ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ. ಮತದಾನವು ದೇಶದ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಹಳ್ಳಿಗುಡಿ ಮಾತನಾಡಿ, ‘ಮುಂಡರಗಿ ಪಟ್ಟಣದಲ್ಲಿ ಎರಡು ತಂಡಗಳನ್ನು ರಚಿಸಿ ಜನ ಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಬೈಸಿಕಲ್ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸುತ್ತಾರೆ’ ಎಂದರು.

ಎಚ್.ಜಿ.ಗದ್ದಿಗೌಡರ, ಎಸ್.ಎಸ್. ಇನಾಮತಿ, ಕೆ.ಕೆ.ಹೂಗಾರ, ಕಾಶೀನಾಥ ಶೀರಬಡಗಿ, ಎಸ್.ಎಸ್.ಗದ್ದಿ, ಬಿ.ಡಿ.ಹಳ್ಳಿಗುಡಿ, ಜಿ.ಎಂ.ಅಬ್ಬಿಗೇರಿ, ಬಿ.ಬಿ.
ಹಳ್ಳಿಗುಡಿ, ಎಂ.ಎ.ಗೌಡರ, ಲಲಿತಾ ಒಣಿಕ್ಯಾಳ, ಎಸ್.ಬಿ.ದೇಸಾಯಿ ಇದ್ದರು.

ಜೆ.ಟಿ.ಹೈಸ್ಕೂಲ್ ವರದಿ: ವಿವಿಧ ಇಲಾಖೆಗಳು ಪಟ್ಟಣದ ಜಗದ್ಗುರು ತೋಂಟದಾರ್ಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮತದಾರರ ಜಾಗೃತಿ ಜಾಥಾಕ್ಕೆ ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ ಶುಕ್ರವಾರ ಚಾಲನೆ ನೀಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಶಂಕರ ಹಡಗಲಿ, ಮುಖ್ಯಶಿಕ್ಷಕ ಎಂ.ಎಚ್‌.ತಳಗಡೆ ಇದ್ದರು.

ಲಕ್ಷ್ಮೇಶ್ವರದಲ್ಲೂ ಜಾಗೃತಿ ಜಾಥಾ

ಲಕ್ಷ್ಮೇಶ್ವರ: ಮತದಾರರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಸೈಕಲ್‌ ಜಾಥಾ ನಡೆಸಿದರು. ತಮ್ಮ ತಮ್ಮ ಶಾಲೆಗಳಿಂದ ಜಾಥಾ ಆರಂಭಿಸಿದ ನೂರಾರು ಮಕ್ಕಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುರಸಭೆಗೆ ಬಂದು ಜಾಥಾ ಕೊನೆಗೊಳಿಸಿದರು. ಶುಕ್ರವಾರ ಸಂತೆ ದಿನವಾಗಿದ್ದರಿಂದ ಹತ್ತಾರು ಹಳ್ಳಿಗಳಿಂದ ಸಂತೆಗೆ ಬಂದಿದ್ದ ಜನರು ಕುತೂಹಲದಿಂದ ಜಾಥಾ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT