ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಚಾಂಪಿಯನ್‌ಷಿಪ್‌ಗೆ ಫೆಡರರ್‌ ಇಲ್ಲ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದುಬೈ : ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಸೋಮವಾರದಿಂದ ನಡೆಯುವ ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ. ಈ ವಿಷಯವನ್ನು ಟೂರ್ನಿಯ ಸಂಘಟಕರು ಶನಿವಾರ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದಿದ್ದ ರಾಟರ್‌ಡ್ಯಾಮ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ  ಫೆಡರರ್‌, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

‘ಮಿಯಾಮಿ ಮತ್ತು ಇಂಡಿಯಾನ ವೆಲ್ಸ್‌ನಲ್ಲಿ ನಡೆಯುವ ಮಾಸ್ಟರ್ಸ್‌ 1000 ಟೂರ್ನಿಗಳಿಗೆ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಅಮೆರಿಕಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ದುಬೈ ಟೂರ್ನಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ’ ಎಂದು ರೋಜರ್‌,  ಸಂಘಟಕರಿಗೆ ತಿಳಿಸಿದ್ದಾರೆ.

‘ಫೆಡರರ್‌ ಅವರು ಟೆನಿಸ್‌ ಲೋಕದ ದಿಗ್ಗಜ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ’ ಎಂದು ದುಬೈ ಟೂರ್ನಿಯ ನಿರ್ದೇಶಕ ಸಲಾಹ್‌ ತಹಲಾಕ್‌ ಹೇಳಿದ್ದಾರೆ.

ಫೆಡರರ್‌ ಅಲಭ್ಯವಾಗಿರುವ ಕಾರಣ, ಬಲ್ಗೇರಿಯಾದ ಗ್ರೆಗೊರ್‌ ಡಿಮಿಟ್ರೊವ್‌ಗೆ ಅಗ್ರ ಶ್ರೇಯಾಂಕ ಲಭಿಸಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಡಿಮಿಟ್ರೊವ್‌, ಹೋದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಎಟಿಪಿ ಫೈನಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಫ್ರಾನ್ಸ್‌ನ ಲುಕಾಸ್‌ ಪೌವಿಲ್ ಎರಡನೇ ಶ್ರೇಯಾಂಕ ಹೊಂದಿದ್ದಾರೆ. ಸ್ಪೇನ್‌ನ ರಾಬರ್ಟ್‌ ಬಟಿಸ್ಟಾ ಆಗತ್‌, ದಮಿರ್‌ ಜುಮಹುರ್‌ ಮತ್ತು ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕ್ವೆಟ್‌ ಅವರು ಕ್ರಮವಾಗಿ ಮೂರರಿಂದ ಐದನೇ ಶ್ರೇಯಾಂಕ ಪಡೆದಿದ್ದಾರೆ.

ಆರಂಭಿಕ ಸುತ್ತಿನ ಪಂದ್ಯದಲ್ಲಿ ಡಿಮಿಟ್ರೊವ್‌, ಟ್ಯುನೀಷಿಯಾದ ಮೆಲೆಕ್‌ ಜಾಜಿರಿ ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT