ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸು ಅರಿಯುವ ಹೊಸ ತಂತ್ರಜ್ಞಾನ ಅಭಿವೃದ್ಧಿ

ಟೊರಾಂಟೊ ಸ್ಕಾರ್‌ಬರೊ ವಿಶ್ವವಿದ್ಯಾಲಯದ ಅಧ್ಯಯನ
Last Updated 25 ಫೆಬ್ರುವರಿ 2018, 19:32 IST
ಅಕ್ಷರ ಗಾತ್ರ

ಟೊರಾಂಟೊ: ಮಿದುಳಿನ ತರಂಗಗಳನ್ನು ಬಳಸಿ, ವ್ಯಕ್ತಿಯ ಯೋಚನೆಗೆ ಅನುಸಾರವಾಗಿ ಚಿತ್ರ ಸೃಷ್ಟಿಸುವ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಟೊರಾಂಟೊ ಸ್ಕಾರ್‌ಬರೊ ವಿಶ್ವವಿದ್ಯಾಲಯದ  ಡ್ಯಾನ್ ನೆಮ್ರಡೊವ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಈ ಕುರಿತ ಸಂಶೋಧನಾ ವರದಿ ‘ಇ ನ್ಯೂರೊ’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಈ ತಂತ್ರಜ್ಞಾನವು ವ್ಯಕ್ತಿಯ ಯೋಚನೆ ಮತ್ತು ಮಿದುಳಿನ ತರಂಗಗಳನ್ನು ವಿಶ್ಲೇಷಿಸಿ, ವ್ಯಕ್ತಿಯ ಮನಸಿನಲ್ಲಿ ಸುಳಿಯುವ ಚಿತ್ರಗಳನ್ನು ಎಲೆಕ್ಟ್ರೊಎನ್‌ಸೆಫ್ಯಾಲೊಗ್ರಫಿ (ಇಇಜಿ) ಸಾಧನದ ದತ್ತಾಂಶ ಬಳಸಿ, ಡಿಜಿಟಲ್‌ ರೂಪದಲ್ಲಿ ಪುನರ್‌ಸೃಷ್ಟಿ ಮಾಡುತ್ತದೆ.

‘ನಾವು ಏನನ್ನಾದರೂ ನೋಡಿದಾಗ ಮಿದುಳು ಅದನ್ನು ಗ್ರಹಿಸುತ್ತದೆ. ಈ ಗ್ರಹಿಕೆಯನ್ನು ಇಇಜಿ ಸಾಧನ ಬಳಸಿ ಸೆರೆಹಿಡಿಯಬಹುದು. ಆ ಮೂಲಕ ವ್ಯಕ್ತಿಯ ಮನಸಿನಲ್ಲಿ ಏನಾಗುತ್ತಿದೆ ಎಂಬುದರ ನೇರ ಪ್ರಾತ್ಯಕ್ಷಿಕೆ ಪಡೆಯಬಹುದು’ ಎಂದು ನೆಮ್ರಡೊವ್‌ ತಿಳಿಸಿದ್ದಾರೆ.

‘ಈ ಅಧ್ಯಯನದ ಭಾಗವಾಗಿ ಪ್ರಯೋಗದಲ್ಲಿ ಭಾಗವಹಿಸಿದ್ದವರಿಗೆ ಇಇಜಿ ಸಾಧನ ಅಳವಡಿಸಿ, ವಿವಿಧ ಮುಖಗಳ ಚಿತ್ರಗಳನ್ನು ತೋರಿಸಲಾಗಿತ್ತು. ನಂತರ ಅವರ ಮಿದುಳಿನಲ್ಲಿ ಆದ ಬದಲಾವಣೆ, ಪ್ರತಿಕ್ರಿಯೆ, ತರಂಗಗಳನ್ನು ಅಲ್ಗಾರಿದಮ್‌ ಆಧಾರಿತ ತಂತ್ರ ಬಳಸಿ ಅಧ್ಯಯನ ಮಾಡಲಾಯಿತು. ನಂತರ ಆಯಾ ಮುಖದ ಚಿತ್ರಗಳನ್ನು ಪುನರ್‌ ಸೃಷ್ಟಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಮುಖ, ಮುಖಭಾವಗಳನ್ನಷ್ಟೆ ಅಲ್ಲದೆ, ಇನ್ನಿತರ ವಿವಿಧ ಅಂಶಗಳನ್ನು ಆಧರಿಸಿ ಚಿತ್ರಗಳನ್ನು ಪುನರ್‌ಸೃಷ್ಟಿಸಲು ಅಧ್ಯಯನ ನಡೆಸಲಾಗುತ್ತಿದೆ. ಇದು ಯಶಸ್ವಿಯಾದರೆ ಈ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರ, ವಿಧಿವಿಜ್ಞಾನ ಪ್ರಯೋಗಾಲಯ, ಮಾತು ಬಾರದವರ ಕಲ್ಪನೆ, ನೆನಪು, ಯೋಚನೆಗಳ ಅಧ್ಯಯನಕ್ಕೆ ಹೆಚ್ಚು ನೆರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT