ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 07–3–1968

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪುಸ್ತಕಗಳ ಅಶ್ಲೀಲ ಬರಹದ ಮಾದರಿಯ ಉದ್ಧರಣ: ಮೇಲ್ಮನೆ ದಿಗ್ಭ್ರಾಂತ
ಬೆಂಗಳೂರು, ಮಾ. 6–
ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ಪುಸ್ತಕ ಭಂಡಾರಗಳಿಗೆ ಅಧಿಕಾರಿಗಳು ‘ಒತ್ತಾಯ ಪೂರ್ವಕವಾಗಿ ಹೇರುತ್ತಿರುವ’ ಕೆಲವು ಪುಸ್ತಕಗಳಲ್ಲಿನ ‘ಅಶ್ಲೀಲ’ ಬರಹದ ಮಾದರಿಯನ್ನು ಇಂದು ಸದಸ್ಯರೊಬ್ಬರು ತಮ್ಮ ಗಮನಕ್ಕೆ ತಂದಾಗ ಮೇಲ್ಮನೆಯಲ್ಲಿ ಅನೇಕರು ದಿಗ್ಭ್ರಾಂತಿಗೊಂಡರು.

ಜನಸಂಘದ ಸದಸ್ಯ ಶ್ರೀ ವೈ.ಎಸ್. ಪಾಟೀಲ್‌ರವರು ಅನೇಕ ಪುಸ್ತಕಗಳಿಂದ ಸಾಲುಗಳನ್ನು ಓದಿ ‘ಈ ಪುಸ್ತಕಗಳನ್ನು ಕೊಳ್ಳುವಂತೆ ಶಾಲೆಗಳನ್ನು ಒತ್ತಾಯಪಡಿಸಿದವರು ಲಂಚ ತಿಂದಿರಬೇಕು’ ಎಂದು ಆ‍ಪಾದಿಸಿದರು.

ಶಾಲೆಗಳು ಪುಸ್ತಕ ಭಂಡಾರಗಳಿಗೆ ಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಫಾರಸು ಮಾಡಿರುವ, ಜನಪದ ಸಾಹಿತ್ಯ ಅಕೆಡೆಮಿ ಪ್ರಕಟಿಸಿ
ರುವ ಕೆಲವು ಪುಸ್ತಕಗಳಿಂದ ಪಾಟೀಲ್‌ರವರು ಕೆಲವು ಭಾಗಗಳನ್ನು ಓದಿದರು.

ಒಂದು ಪುಸ್ತಕದ ಹೆಸರು ‘ಒಲವಿನ ಸೆರೆಯಲ್ಲಿ’. ಅದರಲ್ಲಿ ‘ಬೀದಿಯಲ್ಲಿ ಸೇದುವ ಬಾವಿಯಲ್ಲಿ ಎದುರುಮನೆ ಸುಬ್ಬಮ್ಮ, ತನ್ನ ಮಡಿಸೀರೆಯ ಸೆರಗಿನ ಹೊರಗೆ ಎದೆಯನ್ನು ಕುಣಿಸಿಕೊಂಡು ನೀರು ಸೇದುತ್ತಿದ್ದಳು’ ಎಂಬ ಮಾತುಕತೆಗಳಿವೆಯೆಂದು ಶ್ರೀ ಪಾಟೀಲರು ಆಕ್ಷೇಪಿಸಿದರು.

‘ಜಾನಪದ ಪ್ರೇಮಗೀತೆಗಳು’, ‘ಜೇನು ಹನಿಗಳು’ ಈ ಪುಸ್ತಕಗಳಿಂದಲೂ ಕೆಲವು ಸಾಲುಗಳನ್ನು ಓದಿದರು.

ಆಡಳಿತ ಭಾಷೆಯಾಗಿ ಕನ್ನಡ: ತೀವ್ರ ಕ್ರಮ
ಬೆಂಗಳೂರು, ಮಾ. 6–
ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಸರ‍್ಕಾರ ತೀವ್ರ ಕಾರ್ಯಕ್ರಮವನ್ನು ತೆಗೆದುಕೊಳ್ಳುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಆಡಳಿತ ಭಾಷೆಯನ್ನು ಕಾರ್ಯಗತ ಮಾಡಲು ಸಾಕಾದಷ್ಟು ಜನ ಟೈಪಿಸ್ಟ್‌ಗಳು ಹೆಚ್ಚು ಕಡಿಮೆ ಇದ್ದಾರೆಂದೂ, ಅದರೂ ಇನ್ನೂ ಹೆಚ್ಚು ಜನರು ಬೇಕಾ
ಗುವರೆಂದೂ ಸಚಿವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT