ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ಮರು ವಿಚಾರಣೆ ಆರಂಭ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಎತ್ತಿನಹೊಳೆ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ನೀಡಿ, ಕಳೆದ ಅಕ್ಟೋಬರ್‌ 6 ರಂದು ತೀರ್ಪು ನೀಡಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರದಿಂದ ಮರು ವಿಚಾರಣೆ ಆರಂಭಿಸಿದೆ.

ಯೋಜನೆಯನ್ನು ವಿರೋಧಿಸಿ ಪರಿಸರವಾದಿ ಕೆ.ಎನ್‌. ಸೋಮಶೇಖರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕಳೆದ ಸೆಪ್ಟೆಂಬರ್‌ 21ರಂದು ತೀರ್ಪು ಕಾದಿರಿಸಿದ್ದ ಡಾ.ಜವಾದ್‌ ರಹೀಂ ನೇತೃತ್ವದ ಹಸಿರು ಪೀಠವು, ತಜ್ಞ ಸದಸ್ಯ ರಂಜನ್‌ ಚಟರ್ಜಿ ಅವರು ನಿವೃತ್ತರಾಗಲಿದ್ದ ಕಾರಣ ಅಕ್ಟೋಬರ್‌ 6ರಂದು ತೀರ್ಪು ಪ್ರಕಟಿಸಿ, ಷರತ್ತುಗಳನ್ನು ನಂತರ ಘೋಷಿಸುವುದಾಗಿ ಹೇಳಿತ್ತು.

ಚಟರ್ಜಿ ಅವರು ನಿವೃತ್ತರಾಗಿದ್ದರಿಂದ ನಿಯಮಾನುಸಾರ ಷರತ್ತುಗಳಿರುವ ಅಂಶಗಳನ್ನು ಒಳಗೊಂಡ ತೀರ್ಪನ್ನು ಪ್ರಕಟಿಸಲು ಅವಕಾಶ ದೊರೆತಿರಲಿಲ್ಲ. ಹಾಗಾಗಿ ಮಂಗಳವಾರ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT