ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಯಾಮಿ ಓಪನ್ ಟೆನಿಸ್: ಯೂಕಿಗೆ ಗೆಲುವು

Last Updated 20 ಮಾರ್ಚ್ 2018, 19:23 IST
ಅಕ್ಷರ ಗಾತ್ರ

ಮಿಯಾಮಿ, ಅಮೆರಿಕ: ಭಾರತದ ಯೂಕಿ ಭಾಂಬ್ರಿ ಮಂಗಳವಾರ ಇಲ್ಲಿ ಆರಂಭವಾದ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆದ್ದಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿರುವ ಯೂಕಿ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 6–4, 6–1ರಲ್ಲಿ ಅರ್ಜೆಂಟೀನಾದ ರೆಂಜೊ ಒಲಿವೊ ಅವರನ್ನು ಮಣಿಸಿ ಅರ್ಹತಾ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು.

ಮೊದಲ ಸೆಟ್‌ನಲ್ಲಿ ಉತ್ತಮವಾಗಿ ಆಡಿದ ಎದುರಾಳಿಯನ್ನು ಮಣಿಸಿದ ಯೂಕಿ, ಎರಡನೇ ಸೆಟ್‌ನಲ್ಲಿ ಕೇವಲ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟರು.

ಈಚೆಗೆ ನಡೆದ ಇಂಡಿಯಾನ ವೇಲ್ಸ್ ಟೂರ್ನಿಯಲ್ಲಿ ಯೂಕಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಲೂಕಸ್ ಪುಯಲ್ ಅವರನ್ನು ಸೋಲಿಸಿದ್ದರು. ಮುಂದಿನ ಪಂದ್ಯದಲ್ಲಿ ಅವರು ಸ್ವೀಡನ್‌ನ ಯೆಲಿಯೆಸ್ ಯೆಮರ್ ಅವರನ್ನು ಎದುರಿಸಲಿದ್ದಾರೆ. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಯೆಮರ್‌ 133ನೇ ಸ್ಥಾನದಲ್ಲಿದ್ದಾರೆ.

ರಾಮಕುಮಾರ್‌ಗೆ ಸೋಲು: ಭಾರತದ ರಾಮ್‌ಕುಮಾರ್ ರಾಮನಾಥನ್‌ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ 6–7, 4–6ರಲ್ಲಿ ನೇರ ಸೆಟ್‌ಗಳಿಂದ ಅಮೆರಿಕದ ಮೈಕಲ್ ಮೋ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT