ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಾಡ ನಿಷೇಧ ವಾಪಸ್‌ ನಾಯಕ ಸ್ಟೀವ್ ಸ್ಮಿತ್ ಕಿಡಿ

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್‌ (ಎಎಫ್‌ಪಿ): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವೇಗಿ ಕಗಿಸೊ ರಬಾಡ ಅವರ ಮೇಲೆ ಹೇರಿದ್ದ ಎರಡು ಪಂದ್ಯಗಳ ನಿಷೇಧವನ್ನು ಐಸಿಸಿ ತೆರವುಗೊಳಿಸಿರುವ ಕ್ರಮಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಸ್ಮಿತ್‌ ವಿಕೆಟ್ ಪಡೆದ ನಂತರ ಅನುಚಿತವಾಗಿ ವರ್ತಿಸಿದ್ದರಿಂದ ರಬಾಡ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ವಿಚಾರಣೆ ಸಂದರ್ಭದಲ್ಲಿ ವಿಡಿಯೊ ಪರಿಶೀಲಿಸಿದ ಅಧಿಕಾರಿಗಳು ರಬಾಡ ತಪ್ಪಿತಸ್ಥ ಅಲ್ಲ ಎಂದು ಆದೇಶ ನೀಡಿದ್ದರು.

ವಿಚಾರಣೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಪಡೆಯದೇ ಇದ್ದದ್ದು ಅಚ್ಚರಿಯ ಸಂಗತಿ ಎಂದು ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿಡಿಯೊದಲ್ಲಿ ಕಾಣಿಸುವುದಕ್ಕೂ ಹೆಚ್ಚು ಜೋರಾಗಿ ರಬಾಡ ನನ್ನ ಭುಜಕ್ಕೆ ಗುದ್ದಿದ್ದರು. ಇದು ಐಸಿಸಿಯ ಗಮನಕ್ಕೆ ಬಾರದೇ ಇದ್ದದ್ದು ಬೇಸರ ತಂದಿದೆ’ ಎಂದು ಸ್ಮಿತ್ ಹೇಳಿದರು.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಗುರುವಾರ ನ್ಯೂಲ್ಯಾಂಡ್ಸ್‌ನಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT