ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ಮೋದಿಗೆ ಸೇರಿದ ₹ 26 ಕೋಟಿ ಮೌಲ್ಯದ ವಸ್ತುಗಳ ಮುಟ್ಟಗೋಲು

Last Updated 24 ಮಾರ್ಚ್ 2018, 9:56 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈನಲ್ಲಿರುವ ನೀರವ್‌ ಮೋದಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ₹ 26 ಕೋಟಿ ಮೌಲ್ಯದ ಪುರಾತನ ಆಭರಣಗಳು, ದುಬಾರಿ ಕೈ ಗಡಿಯಾರಗಳು ಹಾಗೂ ವರ್ಣಚಿತ್ರಗಳನ್ನು ಮುಟ್ಟಗೋಲು ಹಾಕಿಕೊಳ್ಳಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹12,000 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈನ ವರ್ಲಿ ಪ್ರದೇಶದಲ್ಲಿರುವ ಸಮುದ್ರ ಮಹಲ್‌ ಅಪಾರ್ಟ್‌ಮೆಂಟ್‌ನಲ್ಲಿನ ನೀರವ್‌ ಅವರಿಗೆ ಸೇರಿದ ಫ್ಲಾಟ್‌ನಲ್ಲಿ ಸಿಬಿಐ ಅಧಿಕಾರಿಗಳೊಂದಿಗೆ ಜಂಟಿಯಾಗಿ ದಾಳಿ ನಡೆಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸದ್ಯ ₹ 15 ಕೋಟಿ ಮೌಲ್ಯದ ಪುರಾತನ ಆಭರಣಗಳು, ₹ 1.4 ಕೋಟಿ ಮೌಲ್ಯದ ದುಬಾರಿ ಕೈಗಡಿಯಾರ, ಖ್ಯಾತ ಚಿತ್ರಕಾರರಾದ ಅಮೃತಾ ಶೇರ್-ಗಿಲ್, ಎಂ.ಎಫ್ ಹುಸೇನ್ ರಚಿಸಿರುವ ₹ 10 ಕೋಟಿ ಮೌಲ್ಯದ ವರ್ಣಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ ಹಾಗೂ ಅವರ ಸಂಬಂಧಿ ಮೆಹುಲ್‌ ಚೋಕ್ಸಿ ವಿರುದ್ಧ ಸಿಬಿಐ ಅಧಿಕಾರಿಗಳು ಮತ್ತೆರಡು ಎಫ್‌ಐಆರ್‌ ದಾಖಲಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕೋರಿಕೆ ಮೇರೆಗೆ ಅವರ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT