ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್ ನಿವಾಸದಲ್ಲಿ ಇ.ಡಿ ಶೋಧ

₹26.40 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ
Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಮುಂಬೈ ಅಪಾರ್ಟ್‌ಮೆಂಟ್‌ ಸಮುದ್ರ ಮಹಲ್‌ನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಹೊಸದಾಗಿ ಶೋಧ ಕಾರ್ಯ ನಡೆಸಿದ್ದು, ಒಟ್ಟು ₹26.40 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.

₹15 ಕೋಟಿ ಮೌಲ್ಯದ ಪುರಾತನ ಆಭರಣಗಳು, ₹1.40 ಕೋಟಿ ಮೌಲ್ಯದ ಕೈಗಡಿಯಾರಗಳು ಹಾಗೂ ಪ್ರಸಿದ್ಧ ಕಲಾವಿದರಾದ ಕೆ.ಕೆ.ಹೆಬ್ಬಾರ್, ಅಮೃತಾ ಶೇರ್‌–ಗಿಲ್ ಮತ್ತು ಎಂ.ಎಫ್. ಹುಸೇನ್ ಅವರು ರಚಿಸಿದ ₹10ಕೋಟಿ ಮೌಲ್ಯದ ಕಲಾ ಕೃತಿಗಳು ಇದರಲ್ಲಿವೆ. ಪುರಾತನ ಆಭರಣಗಳಲ್ಲಿ ಒಂದು ವಜ್ರದ ಉಂಗುರದ ಮೌಲ್ಯವೇ ₹10 ಕೋಟಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಈ ತನಕ ವಶಕ್ಕೆ ಪಡೆದಿರುವ ಆಸ್ತಿಯ ಮೌಲ್ಯ ₹7,664 ಕೋಟಿಗೆಏರಿಕೆಯಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿದ ಹಗರಣ ಸಂಬಂಧ, ನೀರವ್ ಹಾಗೂ ಅವರ ಸಂಬಂಧಿ ಮೆಹುಲ್‌ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಇ.ಡಿ ದಾಖಲಿಸಿರುವ ಪ್ರಕರಣಗಳ ಭಾಗವಾಗಿ ಈ ಶೋಧ ಕಾರ್ಯ ನಡೆಸಲಾಗಿದೆ. ಇ.ಡಿ ನೀರವ್ ಮೋದಿ ವಿರುದ್ಧ ಈವರೆಗೂ ದೇಶದಾದ್ಯಂತ 251 ಬಾರಿ ಶೋಧ ಕಾರ್ಯ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT