ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌

ಶಾ, ಸಿದ್ದರಾಮಯ್ಯ ಟ್ವೀಟ್ ಸಮರ

ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಶಾ, ಸಿದ್ದರಾಮಯ್ಯ ಟ್ವೀಟ್ ಸಮರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಮಂಗಳವಾರ ಅವರ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಕುವೆಂಪು ಸಮಾಧಿ ಸ್ಥಳ ಕವಿಶೈಲಕ್ಕೆ ಭೇಟಿ ನೀಡಿದ ಬಳಿಕ ಅಮಿತ್‌ ಶಾ ‘ಕುವೆಂಪುರವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕೊಂಡಾಡಿದ್ದರು. ಅಂತಹ ಶಾಂತಿಯ ಬೀಡಾದ ಈ ರಾಜ್ಯವನ್ನು ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಮತ್ತು ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದ್ದು ಅತ್ಯಂತ ಖಂಡನೀಯ. ಇದಕ್ಕೆ ಅವರು ಬೆಲೆ ತೆರುತ್ತಾರೆ’ ಎಂದು ಟ್ವೀಟ್ ಮಾಡಿದ್ದರು.

ಅಮಿತ್ ಶಾ ಅವರ ಟ್ವೀಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿರುಗೇಟು ನೀಡಿದ್ದು ಅವರೂ ಕೂಡ ನಾಡಗೀತೆಯ ಸಾಲುಗಳನ್ನೇ ಉಲ್ಲೇಖಿಸಿ ಅಮಿತ್‌ ಶಾಗೆ ತಿರುಗೇಟು ಕೊಟ್ಟಿದ್ದಾರೆ.

’ಅಮಿತ್‌ ಶಾ ಅಂತಹವರು ಸಹ ಕುವೆಂಪು ನುಡಿಗಳನ್ನು ಬಳಸುವಂತೆ ಮಾಡಿದ ಕರ್ನಾಟಕದ ಚುನಾವಣೆಗೆ ಧನ್ಯವಾದ ಹೇಳುತ್ತೇನೆ. ರಾಷ್ಟ್ರಕವಿಯ ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನದಿಂದ ಹೊರತಾದ ಪಕ್ಷವನ್ನು ಪ್ರತಿನಿಧಿಸುವ  ಶಾ ತಾವು ಉಲ್ಲೇಖಿಸಿರುವ ‘ಸರ್ವ ಜನಾಂಗದ ಶಾಂತಿಯ ತೋಟ’ ಚರಣದಲ್ಲಿನ (ಪ್ಯಾರಾ) ಮುಂದಿನ ಸಾಲುಗಳನ್ನು ಬಹುಶ: ಓದಿರಲಿಕ್ಕಿಲ್ಲ’ (ಆ ಚರಣದ ಮುಂದಿನ ಸಾಲುಗಳಾದ ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ, ಜನಕನ ಹೋಲುವ ದೊರೆಗಳ ಧಾಮ’) ಎಂದು ಟ್ವೀಟ್‌ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಈ ಟ್ವೀಟ್‌ ಅನ್ನು 2400 ಜನ ಲೈಕ್‌ ಮಾಡಿದ್ದರೆ 900 ಜನ ರಿಟ್ವೀಟ್‌ ಮಾಡಿದ್ದಾರೆ. ಹಾಗೇ ಅಮಿತ್ ಶಾ ಟ್ವೀಟ್‌ಗೆ 1700 ಜನ ಲೈಕ್ ಮಾಡಿ, 420 ಮಂದಿ ರಿಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ನಲ್ಲಿ ನಾಡಗೀತೆಯ ಸಾಲುಗಳನ್ನು ಬಳಸಿಕೊಂಡು ಪರಸ್ಪರಕಾಲೆಳೆದುಕೊಂಡಿದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

*

Comments
ಈ ವಿಭಾಗದಿಂದ ಇನ್ನಷ್ಟು
ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

ಬೆಂಗಳೂರು
ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಬಾದಾಮಿಯಲ್ಲಿ ಸ್ಪರ್ಧೆ: ಸಿದ್ದರಾಮಯ್ಯ

26 Apr, 2018
‘ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

ಶೇ 52.9ರಷ್ಟು ಗಂಡು ಮಕ್ಕಳು
‘ಲೈಂಗಿಕ ದೌರ್ಜನ್ಯ ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

26 Apr, 2018

ತುಮಕೂರು
ಶಂಕಾಸ್ಪದ ಸಾವು : ಪ್ರಕರಣ ಸಿಐಡಿ ತನಿಖೆಗೆ

‘ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗಲೇ ಅವರು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ನನ್ನ ಸಹೋದರ ಚೆನ್ನಾಗಿಯೇ ಇದ್ದ. ಮಂಗಳವಾರ ಮಧ್ಯಾಹ್ನವಷ್ಟೇ ಮನೆಗೆ ಬಂದಿದ್ದ. ಆತನ...

26 Apr, 2018
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕನ್‌ ಸಾವು

‌ಮೈಸೂರು
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕನ್‌ ಸಾವು

26 Apr, 2018

ವಿಜಯಪುರ
‘ದೌರ್ಜನ್ಯಕ್ಕೆ ಬೆದರುವುದಿಲ್ಲ: ಬಬಲೇಶ್ವರ ಭೇಟಿ ನಿಲ್ಲಿಸುವುದಿಲ್ಲ!’

ಧರ್ಮ ಪ್ರಚಾರದ ತಮ್ಮ ಕರ್ತವ್ಯದಿಂದ ಎಂದೂ ವಿಮುಖರಾಗುವುದಿಲ್ಲ. ಬಾಡಿಗೆ ಕಿಡಿಗೇಡಿಗಳ ದೌರ್ಜನ್ಯಕ್ಕೆ ಕಿಮ್ಮತ್ತು ನೀಡುವುದಿಲ್ಲ ಎಂದ ಅವರು, ತಮ್ಮ ಕಾರ್ಯಕ್ಕೆ ಪದೇ ಪದೇ ಅಡ್ಡಿಯಾದರೆ...

26 Apr, 2018