ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಫನ್ ಗೇಮ್ ಲಿಂಕ್ ಕ್ಲಿಕ್ ಮಾಡುವ ಮುನ್ನ ….

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ರಾಮಾಯಣದಲ್ಲಿ ನೀವು ಯಾವ ಪಾತ್ರಧಾರಿಯಾಗಿದ್ದಿರಿ? ನಿಮ್ಮ ಮೇಲೆ ಎಷ್ಟು ಜನರಿಗೆ ಕ್ರಶ್ ಇದೆ, ಪೂರ್ವಜನ್ಮದಲ್ಲಿ ನಿಮ್ಮ ಪ್ರೇಯಸಿಯಾಗಿದ್ದವರು ಯಾರು? ನಿಮ್ಮನ್ನು ತುಂಬಾ ಪ್ರೀತಿಸುವ ಗೆಳೆಯ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಏನೆಂದು ತಿಳಿಯುವ ಕುತೂಹಲ. ಫೇಸ್‌ಬುಕ್‌ನಲ್ಲಿ ಕಾಣುವ ಯಾವುದೋ ಆ್ಯಪ್‌ ಲಿಂಕ್ ಕ್ಲಿಕ್ ಮಾಡಿದರೆ ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆ ಉತ್ತರವನ್ನು ಫೇಸ್‌ಬುಕ್ ಗೋಡೆಯಲ್ಲಿ ಶೇರ್ ಮಾಡಿ ಖುಷಿಪಡುತ್ತೇವೆ. ಇದೆಲ್ಲವೂ ತಮಾಷೆ ಎಂಬುದು ಗೊತ್ತಿದ್ದರೂ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಟೈಂಪಾಸ್ ಮಾಡುತ್ತಿರುತ್ತೇವೆ.

ಆದರೆ ಇಲ್ಲಿ ನಾವು ಕ್ಲಿಕ್ ಮಾಡುವ ಆ್ಯಪ್‌ ಲಿಂಕ್‌ಗಳು ನಮ್ಮ ಮಾಹಿತಿಯನ್ನು ಕದಿಯುತ್ತಿರುತ್ತವೆ ಎಂಬ ವಿಷಯ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇದೆಲ್ಲಾ ತಮಾಷೆಗೆ, ಲಿಂಕ್ ಕ್ಲಿಕ್ ಮಾಡಿದರೆ ನಮ್ಮ ಮಾಹಿತಿ ಹೇಗೆ ಕದಿಯಲ್ಪಡುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಇಲ್ಲಿ ಕೇಳಿ... ನೀವು ಅದ್ಯಾವುದೋ ಆ್ಯಪ್ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಫೇಸ್‌ಬುಕ್‌ನಲ್ಲಿರುವ ಮಾಹಿತಿಯನ್ನು ಬಳಸಿ ಕೊಳ್ಳಲೇ ಎಂಬ ಪ್ರಶ್ನೆಯನ್ನು ಕೇಳುತ್ತದೆ.

ಉದಾಹರಣೆಗೆ ನಿಮ್ಮ ಪ್ರೊಫೈಲ್‌ನಲ್ಲಿ ನೀಡಿರುವ ನಿಮ್ಮ ಜನ್ಮ ದಿನಾಂಕ, ಉದ್ಯೋಗ, ನಿಮ್ಮ ಸಂಬಂಧ, ನಿಮ್ಮ ಸಂಪರ್ಕದಲ್ಲಿರುವ ಗೆಳೆಯ/ಗೆಳತಿಯರ ಪ್ರೊಫೈಲ್ ಮಾಹಿತಿಯನ್ನು ಬಳಸಿಕೊಳ್ಳು ವುದಕ್ಕೆ ಅನುಮತಿ ಕೇಳುತ್ತದೆ. ನೀವು Yes ಎಂದು ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಪ್ರೊಫೈಲ್ Analyse ಮಾಡಿ ಉತ್ತರವೊಂದನ್ನು ನಿಮ್ಮ ಮುಂದಿಡುತ್ತದೆ. ಈ ರೀತಿ ನಿಮ್ಮ ಮಾಹಿತಿಗಳು ಆ್ಯಪ್ ಪಾಲಾಗುತ್ತವೆ.

ಈಗಾಗಲೇ ನೀವು ಇಂಥ Fun App ಲಿಂಕ್‌ಗಳನ್ನು ಕ್ಲಿಕ್ ಮಾಡಿ, ಅದನ್ನು ಫೇಸ್‌ಬುಕ್‌ ಗೋಡೆಯಲ್ಲಿ ಶೇರ್ ಮಾಡಿರುತ್ತೀರಿ. ಇನ್ನು ಕೆಲವರು ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿರುತ್ತೀರಿ ಆದರೆ ಆದನ್ನು ಶೇರ್ ಮಾಡಿರುವುದಿಲ್ಲ. ನೀವು ಶೇರ್ ಮಾಡಿದರೂ ಮಾಡದೇ ಇದ್ದರೂ ನಿಮ್ಮ ಮಾಹಿತಿಗಳು ಆ್ಯಪ್‌ನಲ್ಲಿ ಸೇವ್ ಆಗಿರುತ್ತವೆ ಮತ್ತು ನಿಮ್ಮ ಪ್ರೊಫೈಲ್‌ನಲ್ಲಿಯೇ ಇರುತ್ತವೆ. ನಿಮ್ಮ ಮಾಹಿತಿಗಳಿಗೆ ಕನ್ನ ಹಾಕುವ ಅನಗತ್ಯ ಆ್ಯಪ್‌ಗಳನ್ನು ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ: ಫೇಸ್‌ಬುಕ್‌ಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಮೆನುವಿನಲ್ಲಿ ಆ್ಯಪ್‌ ಬಟನ್ ಕ್ಲಿಕ್ ಮಾಡಿ. ಅಲ್ಲಿ ನೀವು ಬಳಸಿದ ಆ್ಯಪ್‌ಗಳ ಮಾಹಿತಿ ಇರುತ್ತದೆ. ಆ ಆ್ಯಪ್‌ ಮೇಲೆ ಸ್ವಲ್ಪ ಹೊತ್ತು ಕರ್ಸರ್‌ ಇಟ್ಟರೆ ಆ್ಯಪ್‌ ಡಿಲೀಟ್ ಮಾಡಲೇ? ಎಂಬ ಪ್ರಶ್ನೆ ಕಾಣಿಸುತ್ತದೆ. ಆಗ ‘X’ ಚಿಹ್ನೆ ಕ್ಲಿಕ್ ಮಾಡಿ ಡಿಲೀಟ್ ಮಾಡಿ.

ಡಿಲೀಟ್ ಮಾಡಿದ ನಂತರ ಅದರ ಕೆಳಗೆ ‘Apps others Use one’ ಎಂಬಲ್ಲಿ ಎಡಿಟ್ ಬಟನ್ ಕ್ಲಿಕ್ ಮಾಡಿ. ಇದೊಂದು hidden menu ಆಗಿದ್ದು ನಿಮ್ಮ ಫೇಸ್‌ಬುಕ್ ಸ್ನೇಹಿತರು ಆ್ಯಪ್‌ ಇನ್‌ಸ್ಟಾಲ್ ಮಾಡಿದಾಗ ನಿಮ್ಮ ಯಾವೆಲ್ಲಾ ಮಾಹಿತಿಗಳನ್ನು ಅವರು Access ಮಾಡಿಕೊಳ್ಳಬಹುದು ಎಂಬುದು ಇಲ್ಲಿ Check ಆಗಿರುತ್ತದೆ. ಉದಾಹರಣೆಗೆ ನಮ್ಮ ಊರು, ಹುಟ್ಟಿದ ದಿನ, ನಮ್ಮ ಹವ್ಯಾಸ...

ಹೀಗೆ ನಾವು ನಮ್ಮ ಫೇಸ್‌ಬುಕ್‌ನಲ್ಲಿ ನೀಡಿದ ಮಾಹಿತಿಗಳನ್ನು ಇತರರೂ ಬಳಸಿಕೊಳ್ಳಬಹುದು ಎಂದು ನಾವಿಲ್ಲಿ ಅನುಮತಿ ನೀಡಿದಂತಿರುತ್ತದೆ. ಹಾಗಾಗಿ ಅಲ್ಲಿರುವ ಮಾಹಿತಿ ಪಟ್ಟಿಯ ಮುಂದೆ ಇರುವ ಬಾಕ್ಸ್ Check ಆಗಿದ್ದರೆ ಅದನ್ನು Uncheck ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT