ಏಳು ಮಂದಿ ಸಿಬ್ಬಂದಿ ಅಮಾನತು

ಎಂಜಿನ್ ಇಲ್ಲದೆ 10 ಕಿ.ಮೀ ದೂರ ಚಲಿಸಿದ ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ರೈಲು

ರೈಲು ಹಳಿಯ ಮೇಲೆ ಎಂಜಿನ್‌ ಇಲ್ಲದೆ ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ರೈಲು ಸುಮಾರು 10 ಕಿ.ಮೀ ದೂರ ಚಲಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ರೈಲ್ವೆ ಇಲಾಖೆಯ ಏಳು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಚಿತ್ರ: ಎಎನ್‌ಐ ಟ್ವಿಟರ್‌

ಭುವನೇಶ್ವರ: ರೈಲು ಹಳಿಯ ಮೇಲೆ ಎಂಜಿನ್‌ ಇಲ್ಲದೆ ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ರೈಲು ಸುಮಾರು 10 ಕಿ.ಮೀ ದೂರ ಚಲಿಸಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ರೈಲ್ವೆ ಇಲಾಖೆಯ ಏಳು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಒಡಿಶಾದ ಟಿಟ್ಲಾಗರ್ ನಿಲ್ದಾಣದಿಂದ ಹೊರಟ ರೈಲು ಕೆಸಿಂಗಾ ಜಂಕ್ಷನ್‌ ಕಡೆಗೆ ಹೋಗುತ್ತಿತ್ತು. ರೈಲು ನಿಲುಗಡೆ ವೇಳೆ ಚಾಲಕ ಸ್ಕಿಡ್ ಬ್ರೇಕ್‌ ಹಾಕದೆ ಇರುವುದು ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಪ್ರಯಾಣಿಕರೊಬ್ಬರು ವಿಡಿಯೊ ಚಿತ್ರೀಕರಣ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಲಿಸುತ್ತಿರುವ ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್‌ ಇಲ್ಲದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. 

ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

ಅನೌಪಚಾರಿಕ ಶೃಂಗಸಭೆ
ಚೀನಾದ ವುಹಾನ್‌ಗೆ ಬಂದಿಳಿದ ಪ್ರಧಾನಿ ಮೋದಿ

27 Apr, 2018
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ:  ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

ಕೊಲಿಜಿಯಂ
ಸುಪ್ರೀಂ ಶಿಫಾರಸು ವಾಪಸ್‌ ಕಳುಹಿಸಿದ ಕೇಂದ್ರ: ಜೋಸೆಫ್‌ ಬಡ್ತಿಗೆ ಸರ್ಕಾರದ ಅಡ್ಡಿ

27 Apr, 2018
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

38 ಮಂದಿಯ ವಿರುದ್ಧ ಪ್ರಕರಣ
ಐಡಿಬಿಐಗೆ ₹600 ಕೋಟಿ ಸಾಲ ವಂಚನೆ

27 Apr, 2018

ಚೆನ್ನೈ
ಜಯಾ ಜೈವಿಕ ಮಾದರಿ ಇಲ್ಲ: ಅಪೋಲೋ ಆಸ್ಪತ್ರೆ ಹೇಳಿಕೆ

‘ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಅಪೋಲೋ ಆಸ್ಪತ್ರೆ ಗುರುವಾರ...

27 Apr, 2018

ನವದೆಹಲಿ
ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ವಚ್ಛ ಭಾರತ ಅಭಿಯಾನ ಸಹಕಾರಿ

ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ‘ಸ್ವಚ್ಛ ಭಾರತ ಅಭಿಯಾನ’ ಸಹಕಾರಿಯಾಗಿದೆ ಎಂದು ಸಚಿವ ಸುರೇಶ್‌ ಪ್ರಭು...

27 Apr, 2018