ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಬಂದ ಅರೆಸೇನಾಪಡೆ

ಮೊದಲ ಹಂತದಲ್ಲಿ ಐಟಿಬಿಪಿಯ 280 ಯೋಧರ ನಿಯೋಜನೆ
Last Updated 9 ಏಪ್ರಿಲ್ 2018, 5:41 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭೆ ಚುನಾವಣೆ ಭದ್ರತೆ ಹಿನ್ನೆಲೆಯಲ್ಲಿ ಕೇಂದ್ರದಿಂದ ಅರೆಸೇನಾಪಡೆ ನಿಯೋಜನೆ ಆರಂಭವಾಗಿದೆ.ಬಾಗಲಕೋಟೆ ಉಪವಿಭಾಗದಲ್ಲಿ ಚುನಾವಣೆ ಕರ್ತವ್ಯ ನಿರ್ವಹಣೆಗೆ ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್‌ನ (ಐಟಿಬಿಪಿ) 120 ಮಂದಿ ಯೋಧರ ತಂಡ ಭಾನುವಾರ ನಗರಕ್ಕೆ ಬಂದಿದೆ.

ಮತದಾನದ ವೇಳೆ ಪ್ರತೀ ಮತಗಟ್ಟೆಯ ರಕ್ಷಣೆಗೂ ಯೋಧರನ್ನು ನೇಮಿಸಲಾಗುವುದು. ಜೊತೆಗೆ ಅಗತ್ಯಬಿದ್ದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು ಅವರನ್ನು ಬಳಕೆ ಮಾಡಿಕೊಳ್ಳಲಾಗುವುದು. ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವವರೆಗೂ ಅವರು ಇಲ್ಲಿಯೇ ಇರಲಿದ್ದಾರೆ ಎಂದು ಡಿವೈಎಸ್‌ಪಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಲಾ 120 ಜನರ ಇನ್ನೂ ಎರಡು ತಂಡ ಬಾಗಲಕೋಟೆ ಉಪವಿಭಾಗಕ್ಕೆ ಬರಲಿವೆ. ಜಮಖಂಡಿ ಉಪವಿಭಾಗಕ್ಕೂ 160 ಜನರ ಒಂದು ತಂಡ
ಬಂದಿದೆ. ಮುಧೋಳದಲ್ಲಿ ಬೀಡು ಬಿಟ್ಟಿದ್ದಾರೆ. ಶಾಂತಿಯುತ ಮತದಾನಕ್ಕೆ ಅವರ ನೆರವು ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.

**

ಭದ್ರತೆಯ ನಿಟ್ಟಿನಲ್ಲಿ ಐಟಿಬಿಪಿ ಯೋಧರ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಸೂಕ್ಷ್ಮ ಪ್ರದೇಶಗಳಲ್ಲಿ ಯೋಧರ ಪಥ ಸಂಚಲನ ಕೂಡ ಆರಂಭಿಸಲಾಗುವುದು – ಸಿ.ಬಿ.ರಿಷ್ಯಂತ್, ಎಸ್‌ಪಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT