ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ; 12 ತಂಡ ಮುನ್ನಡೆ

ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ– ಕುಲ್ಲೇಟಿರ ಕಪ್ ಹಾಕಿ
Last Updated 18 ಏಪ್ರಿಲ್ 2018, 9:20 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯ ದಲ್ಲಿ ಮೇಕೇರಿರ, ಕನ್ನಂಡ, ಮುಕ್ಕಾಟಿರ, ಕರ್ತಮಾಡ, ಚೋಡುಮಾಡ, ಮಲ್ಲಂಡ, ಕಲ್ಲೇಂಗಡ, ಮೂಕಳಮಾಡ ಪೊರ್ಕೋವಂಡ, ಮುಂಡಚಾಡಿರ, ಕೇಕಡ, ಅಜ್ಜಮಾಡ ಕುಟುಂಬ ತಂಡ ಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೇಕೇರಿರ ಮತ್ತು ಮಚ್ಚೂರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು ಮಚ್ಚೂರ ತಂಡವನ್ನು 2-0 ಗೋಲಿನಿಂದ ಮಣಿಸಿತು. ಮೇಕೇರಿರ ತಂಡದ ಪರ ನಿಹಾಲ್ ಹಾಗೂ ಅರ್ಜುನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಪಾತ್ರರಾದರು.

ಪಟ್ಟಮಾಡ ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡವು ಪಟ್ಟಮಾಡ ತಂಡವನ್ನು 5-1 ಗೋಲಿನಿಂದ ಸೋಲಿಸಿತು. ಕನ್ನಂಡ ತಂಡದ ಪರ ಪೆಮ್ಮಯ್ಯ, ನಾಚಪ್ಪ, ದೇವಯ್ಯ, ಸುಧಾಲ್ ಗೋಲು ದಾಖಲಿಸಿದರೆ, ಪಟ್ಟಮಾಡ ತಂಡದ ಪರ ಡ್ಯೂಕ್ ಪೂವಪ್ಪ ಒಂದು ಗೋಲು ದಾಖಲಿಸಿದರು.

ಕರ್ತಮಾಡ (ಬಿ.ಶೆಟ್ಟಿಗೇರಿ) ಮತ್ತು ಪಳಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರ್ತಮಾಡ ತಂಡವು ಪಳಂಗೇಟಿರ ತಂಡವನ್ನು 2-0 ಗೋಲಿನ ಅಂತರದಿಂದ ಮಣಿಸಿತು. ಕರ್ತಮಾಡ ತಂಡದ ಪರ ಲಲನ್ ಮತ್ತು ರೀತು ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಕಾಳಚಂಡ ಮತ್ತು ಚೋಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಡುಮಾಡ ತಂಡವು ಕಾಳಚಂಡ ತಂಡವನ್ನು 4-0 ಗೋಲಿನಿಂದ ಪರಾಭವಗೊಳಿಸಿತು. ಚೋಡುಮಾಡ ತಂಡದ ಪರ ನಿಖಿಲ್ ಕಾವೇರಪ್ಪ, ಬಿದ್ದಪ್ಪ, ಜೀವನ್ ಬೆಳ್ಯಪ್ಪ, ಹರ್ಷ ಅಯ್ಯಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು.

ಮುಕ್ಕಾಟಿರ (ಭೇತ್ರಿ) ಮತ್ತು ಪೊನ್ನಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಪೊನ್ನಚೆಟ್ಟಿರ ತಂಡವನ್ನು 3-2 ಗೋಲಿನ ಅಂತರದಿಂದ ಸೋಲಿಸಿತು.

ಮುಕ್ಕಾಟಿರ ತಂಡದ ಪರ ಭಜನ್, ಪೊನ್ನಣ್ಣ, ಹೇಮಂತ್ ಗೋಲು ದಾಖಲಿಸಿದರೆ, ಪೊನ್ನಚೆಟ್ಟಿರ ತಂಡದ ಪರ ದಿವಿನ್ ಹಾಗೂ ವಿವೇಕ್ ತಲಾ ಒಂದೊಂದು ಗೋಲು ದಾಖಲಿಸಿದರು.

ಕೊಲ್ಲಿರ ಮತ್ತು ಮಲ್ಲಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಂಡ ತಂಡವು ಕೊಲ್ಲಿರ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು.

ಮಲ್ಲಂಡ ತಂಡದ ಪರ ಮುತ್ತಪ್ಪ ಹಾಗೂ ಕಾವೇರಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ಕೊಲ್ಲಿರ ತಂಡದ ಪರ ಅಪ್ಪಚ್ಚು ಒಂದು ಗೋಲು ದಾಖಲಿಸಿದರು.

ಬಡುವಂಡ ಮತ್ತು ಕಲ್ಲೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಲೇಂಗಡ ತಂಡವು ಬಡುವಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕಲ್ಲೇಂಗಡ ತಂಡದ ಪರ ಹರ್ಷ ಅಯ್ಯಪ್ಪ, ಚರಣ್ ಚೇತನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ನೆರವಂಡ ಮತ್ತು ಮೂಕಳಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಳಮಾಡ ತಂಡವು 5-2 ಗೋಲಿನ ಅಂತರದಿಂದ ನೆರವಂಡ ತಂಡವನ್ನು ಪರಾಭವಗೊಳಿಸಿತು.

ಮೂಕಳಮಾಡ ತಂಡದ ಪರ ಗಣಪತಿ 3, ಬೋಪಣ್ಣ ಮತ್ತು ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿದರೆ, ನೆರವಂಡ ಪ್ರಶಾಂತ್ ತಮ್ಮ ತಂಡದ ಪರ ಎರಡು ಗೋಲು ದಾಖಲಿಸಿದರು. ಪೊನ್ನಕಚ್ಚಿರ ಮತ್ತು ಪೊರ್ಕೊವಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೊರ್ಕೊವಂಡ ತಂಡವು ಪೊನ್ನಕಚ್ಚಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಪೊರ್ಕೊವಂಡದ ಲವ ಹಾಗೂ ದೀಪಕ್, ತಲಾ ಒಂದೊಂದು ಗೋಲು ದಾಖಲಿಸಿದರು.

ತಾತೀರ ಮತ್ತು ಮುಂಡಚಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡವು ತಾತಿರ ತಂಡವನ್ನು 3-0 ಗೋಲಿನಿಂದ ಪರಾಭವಗೊಳಿಸಿತು.

ಮುಂಡಚಾಡಿರ ಮಂಜುನಾಥ್, ನಿಶ್ಚಿತ್, ಕುಂಞಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಕೇಕಡ ಮತ್ತು ತೀತಿರ ತಂಡಗಳ ನಡುವಿನ ಪಂದ್ಯದಲ್ಲಿ ತೀತಿರ ತಂಡವು 5-3 ಗೋಲಿನ ಅಂತರದಿಂದ ಟೈ ಬ್ರೇಕರ್ ನಲ್ಲಿ ತೀತಿರ ತಂಡವನ್ನು ಮಣಿಸಿತು. 70ನೇ ವರ್ಷದ ತೀತಿರ ಮಾದಪ್ಪ ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ನಾಳಿಯಂಡ ಮತ್ತು ಅಜ್ಜಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಅಜ್ಜಮಾಡ ತಂಡವು 3-1 ಗೋಲಿನ ಅಂತರದಿಂದ ನಾಳಿಯಂಡ ತಂಡವನ್ನು ಪರಾಭವಗೊಳಿಸಿತು.

ಅಜ್ಜಮಾಡ ತಂಡದ ಪರ ವಿಕಾಶ್, ಬ್ರೋನ್, ತಿಮ್ಮಯ್ಯ ಒಂದೊಂದು ಗೋಲು ದಾಖಲಿಸಿದರೆ, ನಾಳಿಯಂಡ ಕಾಳಪ್ಪ ತಮ್ಮ ತಂಡದ ಪರ ಒಂದು ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT