ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಗೆಳತಿಯಿಂದ ₹14.28 ಲಕ್ಷ ವಂಚನೆ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಿವಾಸಿ ಹರೀಶ್‌ ಎಂಬುವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು, ₹14.28 ಲಕ್ಷ ಪಡೆದುಕೊಂಡು ವಂಚಿಸಿದ್ದಾಳೆ.‌

ಈ ಸಂಬಂಧ ಸೈಬರ್‌ ಕ್ರೈಂ ಠಾಣೆಗೆ ಹರೀಶ್‌ ದೂರು ನೀಡಿದ್ದಾರೆ.

‘ರೋಸ್ ಸ್ಯಾಂಟೋಸ್‌ ಎಂಬಾಕೆ ಕೆಲ ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಳು. ಅದನ್ನು ಸ್ವೀಕರಿಸಿದ್ದೆ. ಆ ನಂತರ, ಆಕೆ ನನ್ನೊಂದಿಗೆ ಚಾಟಿಂಗ್‌ ಮಾಡಲಾರಂಭಿಸಿದ್ದಳು’ ಎಂದು ದೂರಿನಲ್ಲಿ ಹರೀಶ್‌ ಹೇಳಿದ್ದಾರೆ.

‘ಹರ್ಬಲ್ ಆಯಿಲ್ ವ್ಯಾಪಾರ ಮಾಡುವುದಾಗಿ ಹೇಳಿದ್ದ ಆಕೆ, ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು.  ವ್ಯಾಪಾರ ಆರಂಭಿಸಲು ಹಣ ಬೇಕೆಂದು ನನ್ನಿಂದ ₹14.28 ಲಕ್ಷ ಪಡೆದಿದ್ದಳು. ಆ ನಂತರ, ಚಾಟಿಂಗ್‌ ಮಾಡುವುದನ್ನೇ ನಿಲ್ಲಿಸಿದ್ದಾಳೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT