ಭೂಗತ ಪಾತಕಿ ತಾಯಿ, ಸಹೋದರಿ ಅರ್ಜಿ ವಜಾ

ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ಮುಂಬೈನಲ್ಲಿರುವ ತಮ್ಮ ಏಳು ವಸತಿ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರದ ವಿರುದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಾಯಿ ಅಮಿನಾ ಬಿ ಕಸ್ಕರ್‌ ಮತ್ತು ಸೋದರಿ ಹಸೀನಾ ಪಾರ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಸ್ವತ್ತುಗಳನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮುಂಬೈನಲ್ಲಿ ದಾವೂದ್ ತಾಯಿ ಮತ್ತು ಸೋದರಿ ಹೆಸರಿನಲ್ಲಿ ನೋಂದಣಿ ಆಗಿರುವ ಡಮರ್‌ವಾಲಾ (ಎಡಚಿತ್ರ), ಶಬನಮ್ ಗೆಸ್ಟ್ ಹೌಸ್ (ಬಲಭಾಗದಲ್ಲಿ ಮೇಲಿನ ಚಿತ್ರ) ಮತ್ತು ದೆಹಲಿ ಜೈಕಾ ಕಟ್ಟಡ –ಪಿಟಿಐ ಚಿತ್ರ

ನವದೆಹಲಿ: ಮುಂಬೈನಲ್ಲಿರುವ ತಮ್ಮ ಏಳು ವಸತಿ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರದ ವಿರುದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತಾಯಿ ಅಮಿನಾ ಬಿ ಕಸ್ಕರ್‌ ಮತ್ತು ಸೋದರಿ ಹಸೀನಾ ಪಾರ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಸ್ವತ್ತುಗಳನ್ನು ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ಹೊಂದಿರುವ ಈ ಏಳರಲ್ಲಿ ಎರಡು ಕಟ್ಟಡಗಳು ಅಮಿನಾ ಬಿ ಅವರ ಹೆಸರಿನಲ್ಲಿ ಮತ್ತು ಐದು ಕಟ್ಟಡಗಳು ಹಸೀನಾ ಅವರ ಹೆಸರಿನಲ್ಲಿ ನೋಂದಣಿ ಆಗಿವೆ. ಇವುಗಳನ್ನು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ದಾಖಲಾತಿ ಕೊಡದ ಕಾರಣ ಸರ್ಕಾರ 1988ರಲ್ಲಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿತ್ತು.

‘ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ವಂಚಕರ ಆಸ್ತಿ ಮುಟ್ಟುಗೋಲು ಕಾಯ್ದೆ’ ಅಡಿ ಇವುಗಳ ಮುಟ್ಟುಗೋಲಿಗೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಇದರ ವಿರುದ್ಧ ದಾವೂದ್‌ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಆನಂತರ ಇಬ್ಬರೂ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

ತೆಲಂಗಾಣ
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

26 May, 2018
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

‘ಪೋಷಕರು ಒತ್ತಡ ಹಾಕಿರಲಿಲ್ಲ’
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

26 May, 2018
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

ಏಕವಚನದಲ್ಲೇ ನಿಂದನೆ
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

26 May, 2018
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

ಎನ್‌ಡಿಎ ಸರ್ಕಾರಕ್ಕೆ 4 ವರ್ಷ
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

26 May, 2018
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

ಬೆಂಗಳೂರು
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

26 May, 2018