ದ್ರಾಕ್ಸಿ, ಕರಬೂಜ ಬೇಸಾಯದಲ್ಲಿ ಯಶಸ್ಸು ಕಂಡ ರೇಕುಳಗಿ ಗ್ರಾಮದ ರೈತ

ಪದವೀಧರ ಯುವಕನ ಕೈಹಿಡಿದ ಕರಬೂಜ

ದೀರ್ಘಾವಧಿ ಬೆಳೆಗಳ ಬೆಳೆದು ಮಾರುಕಟ್ಟೆಯಲ್ಲಿ ತಕ್ಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವ ಬಹುತೇಕ ರೈತರಿಗೆ ಅಲ್ಪಾವಧಿಯ ಕರಬೂಜ ಬೇಸಾಯ ಮಾಡಿ ಇಲ್ಲೊಬ್ಬ ಯುವ ರೈತ ಯಶಸ್ಸು ಕಂಡಿದ್ದಾರೆ.

ರೇಕುಳಗಿ ಗ್ರಾಮದ ತಮ್ಮ ತೋಟದಲ್ಲಿ ಬೆಳೆದ ಕರಬೂಜ ತೋರಿಸುತ್ತಿರುವ ಬಸವರಾಜ್

ಚಿಟಗುಪ್ಪ: ದೀರ್ಘಾವಧಿ ಬೆಳೆಗಳ ಬೆಳೆದು ಮಾರುಕಟ್ಟೆಯಲ್ಲಿ ತಕ್ಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವ ಬಹುತೇಕ ರೈತರಿಗೆ ಅಲ್ಪಾವಧಿಯ ಕರಬೂಜ ಬೇಸಾಯ ಮಾಡಿ ಇಲ್ಲೊಬ್ಬ ಯುವ ರೈತ ಯಶಸ್ಸು ಕಂಡಿದ್ದಾರೆ.

ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದ ಬಿ.ಎ ಪದವೀಧರ ಯುವಕ ಬಸವರಾಜ್ ಮಾಣಿಕರಾವ್ ಬೋರಾಳ ಅವರೇ ಕರಬೂಜ ಬೇಸಾಯದಲ್ಲಿ ಯಶ ಕಂಡ ರೈತ.

ಮೂರು ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮೂಲಕ ದ್ರಾಕ್ಷಿ, ಕರಬೂಜ ಬೆಳೆದು ಕೈತುಂಬ ಆದಾಯ ಗಳಿಸಿದ್ದಾರೆ. ದ್ರಾಕ್ಷಿ, ಕರಬೂಜದಿಂದ ತುಂಬಿ ತುಳುಕುತ್ತಿರುವ ಇವರ ತೋಟ ನೂರಾರು ರೈತರ ಆಕರ್ಷಣೆಯ ಕೇಂದ್ರವಾಗಿದೆ.

ಕಳೆದ ಜನವರಿ ತಿಂಗಳಲ್ಲಿ ಲಾಡು ಕರಬೂಜ ತಳಿಯ 21 ಸಾವಿರ ಕರಬೂಜ ಸಸಿಗಳನ್ನು ನಾಟಿ ಮಾಡಿದ್ದಾರೆ. ಒಟ್ಟು ಸಸಿಗೆ ₹ 2,100 ಹಾಗೂ ರಸಾಯನಿಕ ಹಾಗೂ ತಿಪ್ಪೆಗೊಬ್ಬರ ಹಾಗೂ ಔಷಧಿಗಾಗಿ ₹ 15 ಸಾವಿರ ಖರ್ಚು ಮಾಡಿದ್ದಾರೆ.

21 ಸಾವಿರ ಗಿಡಗಳಲ್ಲಿ ಪ್ರತಿ ಗಿಡದಿಂದ ಸುಮಾರು 40–50 ಹಣ್ಣಿನ ಫಲ ಬಿಟ್ಟಿದೆ. ಈಗಾಗಲೇ 10 ಟನ್ ಇಳುವರಿಯಿಂದ ₹ 20 ಸಾವಿರ ಆದಾಯ ಬಂದಿದೆ. ಸದ್ಯದ ಬೆಲೆ ಕೆ.ಜಿ.ಗೆ ₹20 ಇದೆ. ಇನ್ನೂ 30 ಟನ್ ಫಸಲಿನ ನಿರೀಕ್ಷೆಯಲ್ಲಿದ್ದಾರೆ ರೈತ ಬಸವರಾಜ್ ಮಾಣಿಕರಾವ್.

ಕರಬೂಜ ಹಣ್ಣು ಹೈದರಾಬಾದ್, ಜಹಿರಾಬಾದ್, ಕಲಬುರ್ಗಿ, ಬೀದರ್ ಮಾರುಕಟ್ಟೆಗೆ ಕೊಂಡ್ಯೊಯ್ದು ಮಾರಾಟ ಮಾಡುತ್ತಿದ್ದಾರೆ.

ತೋಟದಲ್ಲಿ 20x40 ಅಳತೆಯ ಎರೆಹುಳು ಗೊಬ್ಬರ ಘಟಕ ನಿರ್ಮಿಸಿಕೊಂಡಿದ್ದು, ಅದರಿಂದ ಮೂರು ತಿಂಗಳಿಗೊಮ್ಮೆ 30 ಕೆ.ಜಿ.ಯ 50 ಬ್ಯಾಗ್‌ ಗೊಬ್ಬರ ಸಿಗುತ್ತಿದೆ. ಎರೆಹುಳು ಗೊಬ್ಬರದಿಂದ ಇಳುವರಿ ಪ್ರಮಾಣ ಜಾಸ್ತಿಯಾಗುತ್ತದೆ ಎನ್ನುವುದು ಬಸವರಾಜ್ ಮಾಣಿಕ ರಾವ್ ಅವರ ಅನುಭವದ ಮಾತು.

‘ನನ್ನ ತಂದೆ ಮಾಣಿಕರಾವ್ ಅವರ ಪ್ರೋತ್ಸಾಹ, ರಾಷ್ಟ್ರೀಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಅಭಿಮನ್ಯು ನಿರಗುಡಿ ಅವರ ಮಾರ್ಗದರ್ಶನದಲ್ಲಿ ಕೃಷಿ ಕಾಯಕ ಮಾಡುತ್ತಿದ್ದು, ಶ್ರಮಕ್ಕೆ ತಕ್ಕ ಆದಾಯ, ಬದುಕಿಗೆ ನೆಮ್ಮದಿ, ನಿತ್ಯ ಕನಿಷ್ಠ 8 ಜನ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಡುತ್ತಿರುವ ಈ ವೃತ್ತಿಯು ತೃಪ್ತಿ ತಂದಿದೆ’ ಎಂದು ನುಡಿಯುತ್ತಾರೆ ಅವರು.

ರೈತ ಬಸವರಾಜ ಅವರ ಅನುಭವ ಹಂಚಿಕೊಳ್ಳಲು ಮೊಬೈಲ್ 99002 92730 ಗೆ ಸಂಪರ್ಕಿಸಬಹುದು.

**

ಹಲವು ವರ್ಷಗಳಿಂದ ನಿರಂತರವಾಗಿ ಅಲ್ಪಾವಧಿಯ ಹಣ್ಣು ಬೆಳೆಗಳ ಬೇಸಾಯ ಮಾಡುತ್ತಿದ್ದು, ನಿರಂತರ ಪರಿಶ್ರಮ, ಮುನ್ನೆಚ್ಚರಿಕೆ ಇದ್ದಲ್ಲಿ ಕೃಷಿಯಲ್ಲಿ ಲಾಭ ಗಳಿಸಬಹುದು – ಬಸವರಾಜ್ ಮಾಣಿಕರಾವ್.

**

ವೀರೇಶ್ ಕುಮಾರ್ ಎನ್.ಮಠಪತಿ

Comments
ಈ ವಿಭಾಗದಿಂದ ಇನ್ನಷ್ಟು
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

ಚಿಟಗುಪ್ಪ
ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

26 May, 2018

ಬಸವಕಲ್ಯಾಣ
ಹುಲಸೂರ ರಸ್ತೆ ಸುಧಾರಣೆಗೆ ಆಗ್ರಹ

ಬಸವಕಲ್ಯಾಣ– ಹುಲಸೂರ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ...

26 May, 2018

ಬೀದರ್
ದೇಶದಲ್ಲಿ ಏಳು ಸಾವಿರ ಸೊಳ್ಳೆ ಪ್ರಭೇದ 

‘ವಿಶ್ವದಲ್ಲಿ ಹನ್ನೊಂದು ಸಾವಿರ ಸೊಳ್ಳೆ ಪ್ರಭೇದಗಳಿವೆ. ಭಾರತದಲ್ಲಿ ಏಳು ಸಾವಿರ ಪ್ರಭೇದಗಳು ಕಾಣಸಿಗುತ್ತವೆ. ಅರಣ್ಯ ಪ್ರದೇಶದಲ್ಲಿರುವ ಸೊಳ್ಳೆಗಳಿಗಿಂತ ಜನವಸತಿ ಪ್ರದೇಶ ದಲ್ಲಿರುವ ಸೊಳ್ಳೆಗಳು ಇತ್ತೀಚಿನ...

26 May, 2018
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

ಬಸವಕಲ್ಯಾಣ
ಕರಪತ್ರಗಳಿಂದ ಅಂದಗೆಟ್ಟ ಗೋಡೆಗಳು

26 May, 2018
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

ಬಸವಕಲ್ಯಾಣ
ಉರ್ಕಿಯಲ್ಲಿ ನೀರಿಗಾಗಿ ಹಾಹಾಕಾರ

25 May, 2018