ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಬಿಎಫ್‌ಸಿಗೆ ಸೋಲು

Last Updated 22 ಆಗಸ್ಟ್ 2018, 19:16 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿಯ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಬುಧವಾರ ಇಲ್ಲಿ ನಡೆದ ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನಲ್ಲಿ ತುರ್ಕಮೇನಿಸ್ತಾನದ ಅಲ್ಟೀನ್ ಅಸೈರ್ ಕ್ಲಬ್ ಎದುರು ಸೋತಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಬಿಎಫ್‌ಸಿ 2–3 ಗೋಲುಗಳಿಂದ ಸೋತಿತು. ಪಂದ್ಯದ ಮೊದಲಾರ್ಧದಲ್ಲಿ ಅಲ್ಟಿನ್ ತಂಡವು ಪಾರಮ್ಯ ಮೆರೆಯಿತು. ತಂಡದ ಪ್ರಮುಖ ಆಟಗಾರ ವಾಹಿತ್ ವಾರ್ಜೇಕೆಡೊವ್ ಆವರು 11ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು ಅಲ್ಟೈಮೈರತ್ ಅನ್ನಾದುಯೆವ್ 25ನೇ ನಿಮಿಷದಲ್ಲಿ ಗೋಲು ಹೊಡೆದರು.46ನೇ ನಿಮಿಷದಲ್ಲಿ ಮತ್ತೆ ಮಿಂಚಿದ ವಾಹಿತ್ ಮತ್ತೊಂದು ಗೋಲು ಹೊಡೆದರು.

ಆತಿಥೇಯ ತಂಡದ ಮಿಕು ಮತ್ತು ನಾಯಕ ಸುನಿಲ್ ಚೆಟ್ರಿ ಅವರು ಕ್ರಮವಾಗಿ 41 ಮತ್ತು 42ನೇ ನಿಮಿಷಗಳಲ್ಲಿ ಲಭಿಸಿದ ಅವಕಾಶಗಳನ್ನು ಕೈಚೆಲ್ಲಿದರು. ತಂಡದ ರಾಹುಲ್ ಭೆಕೆ 63ನೇ ನಿಮಿಷದಲ್ಲಿ ಗೋಲು ಗಳಿಸಿದರು. 88ನೇ ನಿಮಿಷದಲ್ಲಿ ಎರಿಕ್ ಪಾರ್ಟಲು ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT