ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಾಣಾವರ ಕೆರೆ ಕೋಡಿಯಲ್ಲಿ ಕೋಳಿ ತ್ಯಾಜ್ಯ

Last Updated 22 ಆಗಸ್ಟ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಾಣಾವರ ಕೆರೆಯ ಕೋಡಿಗೆ ಗ್ರಾಮದಲ್ಲಿರುವ ಕೋಳಿ ಮಾಂಸದ ಅಂಗಡಿಯವರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೋಳಿ ತ್ಯಾಜ್ಯದ ಗಬ್ಬುವಾಸನೆಯಿಂದ ಗ್ರಾಮಸ್ಥರು ರೋಗದ ಭೀತಿ ಎದುರಿಸುತ್ತಿದ್ದಾರೆ.

ಚಿಕ್ಕಬಾಣಾವರದಲ್ಲಿ ಕೋಳಿ ಮಾಂಸದ 20 ಅಂಗಡಿಗಳು ಇವೆ. 50ರಿಂದ 60 ಕೆ.ಜಿ ಮಾಂಸದ ವ್ಯಾಪಾರವಾಗುತ್ತದೆ. ಪ್ರತಿನಿತ್ಯ ಹತ್ತು ಕೆ.ಜಿ.ಯಷ್ಟು ಕೋಳಿ ತ್ಯಾಜ್ಯ ಹೋರಬೀಳುತ್ತದೆ. ಅದನ್ನು ಗೋಣಿ ಚೀಲಗಳಲ್ಲಿ ಕಟ್ಟಿ ಕೆರೆಯ ಕೋಡಿ ಇಲ್ಲವೇ ಕೆರೆಯ ರಸ್ತೆ ಪಕ್ಕದಲ್ಲಿ ಎಸೆದು ಹೋಗುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮ ಪಂಚಾಯಿತಿ ಈ ಕೃತ್ಯವನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಈ ವಿಷಯದಲ್ಲಿ ಸ್ಥಳೀಯಾಡಳಿತ ಕಿವುಡಾಗಿದೆ ಎಂದು ಗ್ರಾಮದ ನಿವಾಸಿ ಹನುಮಯ್ಯ ಅಳಲು ತೋಡಿಕೊಂಡರು.

ಡಾ. ರಶ್ಮಿ ಅವರು ‘ಸಾಮಾನ್ಯವಾಗಿ ಯಾವುದೇ ಗಬ್ಬು ವಾಸನೆಗಳಿಗೆ ಬಲಿಯಾಗುವುದು ಶ್ವಾಸಕೋಶ. ಆಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಮಧುಮೇಹ ತೊಂದರೆ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂಥವರಿಗೆ ಈ ಗಬ್ಬುವಾಸನೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ತರಬಹುದು. ಗಭೀರ್ಣಿಯರ ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾ ವಿ.ಸಿ. ‘ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT