ಜನಮನ ಸೆಳೆಯುವ ದೇವರ ಹಬ್ಬಗಳು, ಭಿನ್ನ ಆಚರಣೆ

ಬೈಗುಳವೇ ಇಲ್ಲಿ ದೇವರ ಶ್ಲೋಕ...!

ದೇವರ ಹೆಸರಿನಲ್ಲಿ ಕಂಡವರಿಗೆಲ್ಲ ಮನಸೋಇಚ್ಛೆ ಬೈದು, ಹಣ ಬೇಡಿ ನಂತರ ದೇವರಲ್ಲಿ ತಪ್ಪೊಪ್ಪಿಕೊಳ್ಳುವ ಗಿರಿಜನರ ಹಬ್ಬವೊಂದು ಜಿಲ್ಲೆಯ ಗಡಿ ಭಾಗದ ತಿತಿಮತಿ ಸಮೀಪದ ದೇವರಪುರದಲ್ಲಿ ಜರುಗುತ್ತದೆ.

ನಾಪೋಕ್ಲು: ದೇವರ ಹೆಸರಿನಲ್ಲಿ ಕಂಡವರಿಗೆಲ್ಲ ಮನಸೋಇಚ್ಛೆ ಬೈದು, ಹಣ ಬೇಡಿ ನಂತರ ದೇವರಲ್ಲಿ ತಪ್ಪೊಪ್ಪಿಕೊಳ್ಳುವ ಗಿರಿಜನರ ಹಬ್ಬವೊಂದು ಜಿಲ್ಲೆಯ ಗಡಿ ಭಾಗದ ತಿತಿಮತಿ ಸಮೀಪದ ದೇವರಪುರದಲ್ಲಿ ಜರುಗುತ್ತದೆ.

ದಕ್ಷಿಣ ಕೊಡಗಿನ ವೇಷಧಾರಿ ಗಿರಿಜನರ ಈ ಉತ್ಸವದಲ್ಲಿ ಬೈಗುಳವೇ ದೇವರ ಶ್ಲೋಕ. ದೇವರ ನಿಂದನೆ ಇಲ್ಲಿ ಸಾರಾಸಗಟಾಗಿ ನಡೆಯುತ್ತದೆ. ಇದು ದಕ್ಷಿಣ ಕೊಡಗಿನ ಹಬ್ಬವಾದರೆ ಇತ್ತ ನಾಲ್ಕು ನಾಡಿನಲ್ಲಿ ಕ್ರೀಡಾ ಉತ್ಸವಗಳ ಜೊತೆಜೊತೆಯಲ್ಲಿ ಏಪ್ರಿಲ್– ಮೇ ತಿಂಗಳಿನಲ್ಲಿ ದೇವರ ವಿಶೇಷ ಹಬ್ಬಗಳು ಜರುಗುತ್ತವೆ.

ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿ ಜರುಗುವ ಪನ್ನಂಗಾಲ ತಮ್ಮೆ ದೇವಿ ಉತ್ಸವವನ್ನು ಪರಿಶಿಷ್ಟ ವರ್ಗದವರು ಆಚರಿಸುತ್ತಾರೆ. ದೇವಾಲಯದಲ್ಲಿ ಕುರುಂದಕಳಿ ಎಂಬ ಉತ್ಸವವನ್ನು ಆಚರಿಸುತ್ತಾರೆ. ಇದರಲ್ಲಿ ಕತ್ತಿಯಿಂದ ತಲೆಯನ್ನು ಕಡಿದುಕೊಂಡು ಕುಣಿಯುವ ದೃಶ್ಯವೂ ಇರುತ್ತದೆ. ಎರಡು ವರ್ಷಕ್ಕೊಮ್ಮೆ ದೊಡ್ಡ ಕೊಡೆಯನ್ನು ಬಳಸಿ ಆಚರಿಸುವ ಕೊಡೆ ಹಬ್ಬ ಆಕರ್ಷಕವಾಗಿ ಜರುಗುತ್ತದೆ. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಜನರದ್ದು.

ಬಲ್ಲಮಾವಟಿ ಗ್ರಾಮದಲ್ಲಿ ಏಪ್ರಿಲ್ 26, 27ರಂದು ನಡೆಯುವ ವಿಶೇಷ ಹಬ್ಬದಲ್ಲಿ ದೇವರನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆ ಇದೆ. ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆಯನ್ನು ನಿರ್ಮಿಸಲಾಗಿದೆ. ಈ ಆಚರಣೆ ಹಲವು ವರ್ಷಗಳಿಂದ ಈ ಭಾಗದ ಜನರ ನಂಬಿಕೆಯ ಪ್ರತೀಕವಾಗಿ ನಡೆದುಕೊಂಡು ಬಂದಿದೆ.

ಬಲ್ಲಮಾವಟಿ, ಪೇರೂರು, ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ದೇವರನ್ನು ರಾಟೆಯಲ್ಲಿ ತೂಗುವುದು ಸೇರಿದಂತೆ ಹಲವು ವಿಶೇಷ ಪೂಜಾಕಾರ್ಯಕ್ರಮಗಳೊಂದಿಗೆ ಹಬ್ಬ ಆಚರಿಸಲಾಗುತ್ತದೆ.

ಇಲ್ಲಿ ಬೇಡು ಹಬ್ಬ, ಪೀಲಿಯಾಟ್, ಮುಂತಾದ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಗಂಡು ಹೆಣ್ಣಿನಂತೆ ಮತ್ತು ಹೆಣ್ಣು ಗಂಡಿನಂತೆ ವೇಷಧರಿಸಿ ಹರಕೆ ಸಲ್ಲಿಸುವ ಆಂಗೋಲಪೋಂಗೋಲ ಎಂಬ ಆಚರಣೆಯೂ ಇಲ್ಲಿದೆ. ಮೇ 3 ಮತ್ತು 4ರಂದು ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯದಲ್ಲಿ ನಡೆಯುವ ಅಜ್ಜಪ್ಪ ಕೋಲ ಹಾಗೂ ವಿಷ್ಣುಮೂರ್ತಿ ಕೋಲಗಳು ಜನಮನ ರಂಜಿಸುತ್ತವೆ.

ಹೋಬಳಿ ವ್ಯಾಪ್ತಿಯ ಪ್ರತೀ ಗ್ರಾಮಗಳಲ್ಲಿ ಭಗವತಿ ದೇವಾಲಯಗಳಿದ್ದು, ವಾರ್ಷಿಕ ಉತ್ಸವ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಜರುಗುತ್ತವೆ. ಇವು ಕೆಲವು ಉದಾಹರಣೆಗಳಷ್ಟೇ. ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಅಡ್ಡಾಡಿದರೆ ಕೊಳಲಿನ ಹಬ್ಬ, ದೋಸೆ ಹಬ್ಬ, ರೊಟ್ಟಿಹಬ್ಬ ಎಂಬ ಉತ್ಸವಗಳೂ ಕಂಡುಬರುತ್ತವೆ. ಆಯಾ ಊರಿನ ಮಂದಿ ಇಂತಹ ಆಚರಣೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಮತ್ತೆ ಮಳೆಗಾಲ ಬಂದೊಡನೆ ಕೃಷಿ ಕೆಲಸದಲ್ಲಿ ತೊಡಗುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಮಡಿಕೇರಿ
ಸಿಸಿಎಫ್‌ ಗೈರು: ಸಭೆ ಮುಂದೂಡಿಕೆ

ಆನೆ ಹಾಗೂ ಮಾನವ ಸಂಘರ್ಷ ತಡೆಯಲು ಶುಕ್ರವಾರ ಅರಣ್ಯ ಭವನದಲ್ಲಿ ಕರೆದಿದ್ದ ಸಭೆಗೆ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಗೈರಾದ ಹಿನ್ನೆಲೆಯಲ್ಲಿ ಮೇ 28ಕ್ಕೆ ಸಭೆ...

26 May, 2018
ಸಂಗೀತ ‘ಕಾರಂಜಿ’ಗೂ ಸಿಡಿಲ ಹೊಡೆತ!

ಮಡಿಕೇರಿ
ಸಂಗೀತ ‘ಕಾರಂಜಿ’ಗೂ ಸಿಡಿಲ ಹೊಡೆತ!

25 May, 2018
ಕರಾಟೆಯಲ್ಲಿ ಮಿನುಗುತ್ತಿರುವ ಪ್ರತಿಭೆ

ಸುಂಟಿಕೊಪ್ಪ
ಕರಾಟೆಯಲ್ಲಿ ಮಿನುಗುತ್ತಿರುವ ಪ್ರತಿಭೆ

25 May, 2018
ಕುಣಿದು ಕುಪ್ಪಳಿಸಿದ ಬುಡಕಟ್ಟು ಜನರು

ಗೋಣಿಕೊಪ್ಪಲು
ಕುಣಿದು ಕುಪ್ಪಳಿಸಿದ ಬುಡಕಟ್ಟು ಜನರು

25 May, 2018
ಬಿಲ್ಲವ ವಾರಿಯರ್ಸ್‌ ತಂಡಕ್ಕೆ ಪ್ರಶಸ್ತಿ

ವಿರಾಜಪೇಟೆ
ಬಿಲ್ಲವ ವಾರಿಯರ್ಸ್‌ ತಂಡಕ್ಕೆ ಪ್ರಶಸ್ತಿ

22 May, 2018