ಕೋಲಾರ

ವಿಧಾನಸಭಾ ಚುನಾವಣೆ: 11 ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಶನಿವಾರ ಜಿಲ್ಲೆಯಲ್ಲಿ 11 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಶನಿವಾರ ಜಿಲ್ಲೆಯಲ್ಲಿ 11 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಕೋಲಾರ ಸಾಮಾನ್ಯ ಕ್ಷೇತ್ರದಿಂದ ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ನಾರಾಯಣಸ್ವಾಮಿ, ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರದಲ್ಲಿ ಸಿಪಿಎಂನಿಂದ ಪಿ.ಆರ್.ಸೂರ್ಯನಾರಾಯಣ ನಾಮಪತ್ರ ಸಲ್ಲಿಸಿದರು.

ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಕೆಜಿಎಫ್ ಮೀಸಲು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಭಕ್ತ ವತ್ಸಲಂ, ಪಕ್ಷೇತರ ಅಭ್ಯರ್ಥಿಗಳಾಗಿ ವಿ.ಮುನಿಯಪ್ಪ, ಎಂ.ನಂದಿನಿ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ವೆಂಕಟೇಶಪ್ಪ, ಕೆ.ಎಚ್.ವೆಂಕಟರಾಮ್, ಸುಬ್ರಮಣಿ, ಜಿ.ಸಿ.ರಾಮಪ್ಪ ಉಮೇದುವಾರಿಕೆ ಸಲ್ಲಿಸಿದರು. ಮಾಲೂರು ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ.

ಮಾದರಿ ಕ್ಷೇತ್ರ: ‘ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನ ನನಗೆ ಆಶೀರ್ವದಿಸುವ ವಿಶ್ವಾಸವಿದೆ. ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ’ ಎಂದು ವೆಂಕಟಸ್ವಾಮಿ
ತಿಳಿಸಿದರು.

‘5 ವರ್ಷಗಳಿಂದ ಕ್ಷೇತ್ರದಲ್ಲಿ ವರ್ತೂರ್ ಹಠಾವೊ ಕೋಲಾರ ಬಚಾವೊ ಆಂದೋಲನದ ಮೂಲಕ ಹೋರಾಟ ಮಾಡುತ್ತಿದ್ದೇನೆ. ಕಾರ್ಯಕರ್ತರು ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ರಾಜ್ಯದ 70 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದ್ದು, 10ರಿಂದ 12 ಮಂದಿ ಗೆಲುವು ಸಾಧಿಸುತ್ತಾರೆ. ಏ.26ರಂದು ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ’ ಎಂದು
ಹೇಳಿದರು.

ಚುನಾವಣಾಧಿಕಾರಿ ಕಚೇರಿಗಳ ಬಳಿ ಮುನ್ನೆಚ್ಚರಿಕೆಗೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಏ.24 ಕಡೆ ದಿನವಾಗಿದ್ದು, ಸೋಮವಾರ (ಏ.23) ಹೆಚ್ಚಿನ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ನಿರೀಕ್ಷೆ ಇದೆ.

Comments
ಈ ವಿಭಾಗದಿಂದ ಇನ್ನಷ್ಟು
ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

ಶ್ರೀನಿವಾಸಪುರ
ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

26 May, 2018
ಖಾಸಗಿ ಶಾಲೆಗೆ ಬೀಗ, ಬೀದಿಗೆ ಮಕ್ಕಳು

ಬಂಗಾರಪೇಟೆ
ಖಾಸಗಿ ಶಾಲೆಗೆ ಬೀಗ, ಬೀದಿಗೆ ಮಕ್ಕಳು

26 May, 2018

ಕೋಲಾರ
ಮಕ್ಕಳ ಕಳ್ಳರ ವದಂತಿ: ಕರಪತ್ರ ಹಂಚಿಕೆ

ರಾಜ್ಯಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ನಗರದ ಗಲ್‌ಪೇಟೆ ಠಾಣೆ ಪೊಲೀಸರು ಸಾರ್ವಜನಿಕರ ಆತಂಕ ದೂರ ಮಾಡಲು ನಗರದಲ್ಲಿ ಶುಕ್ರವಾರ...

26 May, 2018

ಕೆಜಿಎಫ್‌
ಪೊಲೀಸರಿಗೆ ದಲಿತ ಸಮಾಜ ಸೇನೆ ಮನವಿ

ಮಕ್ಕಳ ಅಪಹರಣ ಬಗ್ಗೆ ವದಂತಿ ಹಬ್ಬಿದ್ದು, ಕೂಡಲೇ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಮಾಜ ಸೇನೆಯ ಅಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯಿಸಿದರು. ...

25 May, 2018

ಕೆಜಿಎಫ್‌
ಮಕ್ಕಳ ಅಪಹರಣ: ಪೋಷಕರಲ್ಲಿ ನಿವಾರಣೆಯಾಗದ ಭೀತಿ

ಮಕ್ಕಳ ಅಪಹರಣದ ಕುರಿತ ವದಂತಿ ಹಾಗೂ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿರುವ ಬಗ್ಗೆ ಪೊಲೀಸರು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ...

25 May, 2018