ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2050ಕ್ಕೆ ಭಾರತ ಜನಸಂಖ್ಯೆ ಚೀನಾಗಿಂತ ಹೆಚ್ಚು; ಮಕ್ಕಳ ಸಂಖ್ಯೆ ಈಗಿನದಕ್ಕಿಂತ ಕಡಿಮೆ

Last Updated 23 ಆಗಸ್ಟ್ 2018, 9:19 IST
ಅಕ್ಷರ ಗಾತ್ರ

ನವದೆಹಲಿ:2050ರ ವೇಳೆಗೆ ಭಾರತದ ಜನಸಂಖ್ಯೆ ಚೀನಾಗಿಂತ ಶೇ. 8 ರಷ್ಟು ಹೆಚ್ಚು ಆಗಿರಲಿದ್ದು, ಮಕ್ಕಳ(15 ವರ್ಷಕ್ಕಿಂತ ಕೆಳಗಿನವರ) ಸಂಖ್ಯೆಯುಈಗ ಇರುವ ಪ್ರಮಾಣಕ್ಕಿಂತಶೇ. 20 ರಷ್ಟು ಕಡಿಮೆಯಾಗಲಿದೆಎಂಬುದನ್ನು ವರದಿಯೊಂದು ತಿಳಿಸಿದೆ.

ವಾಷಿಂಗ್ಟನ್‌ನ ಸ್ವಯಂ ಸೇವಾ ಸಂಸ್ಥೆಜನಸಂಖ್ಯೆಅವಲೋಕನ ಕೇಂದ್ರ(ಪಿಆರ್‌ಬಿ) ಬಿಡುಗಡೆ ಮಾಡಿರುವವಿಶ್ವ ಜನಸಂಖ್ಯಾ ವರದಿಯ ಪ್ರಕಾರ, ಸದ್ಯ ಭಾರತ ಹಾಗೂ ಚೀನಾ ದೇಶಗಳ ಜನಸಂಖ್ಯೆಯು ಕ್ರಮವಾಗಿ 137 ಹಾಗೂ 139 ಕೋಟಿ ಇದೆಎನ್ನಲಾಗಿದೆ.

2030ರ ವೇಳೆಗೆ ದೇಶದ ಜನಸಂಖ್ಯೆ 153 ಹಾಗೂ 2050ರ ವೇಳೆಗೆ 168 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ ಚೀನಾ ಜನಸಂಖ್ಯೆಯು 142 ಕೋಟಿ ಆಗಿರಲಿದ್ದು, 2050 ಆಗುವುದರೊಳಗೆ 134 ಕೋಟಿಗೆ ಇಳಿಯಲಿದೆ ಎನ್ನಲಾಗಿದೆ.

2050ರ ವೇಳೆಗೆ ವಿಶ್ವ ಜನಸಂಖ್ಯೆ ಬೆಳವಣಿಗೆ ದರ ಶೇ. 29.3 ಇರಲಿದ್ದು, ಭಾರತದ ಪ್ರಮಾಣವುಶೇ. 22.5 ರಷ್ಟು ಇರಲಿದೆ.

ಸದ್ಯ ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ. 28 ರಷ್ಟು ಮಕ್ಕಳಿದ್ದು, ಈ ಪ್ರಮಾಣವು 2050 ಆಗುವಷ್ಟರಲ್ಲಿ ಶೇ.19ಕ್ಕೆ ಇಳಿಯಲಿದೆ.ಈಗ ಪ್ರತಿ ನಾಲ್ಕು ಜನರಲ್ಲಿ ಒಂದು ಮಗು ಇದೆ. ಜನಸಂಖ್ಯೆ ಬೆಳವಣಿಗೆ ದರ ಹೀಗೆಯೇ ಮುಂದುವರಿದರೆ2050ರ ವೇಳೆಗೆ ಪ್ರತಿ ಐದು ಜನರಿಗೆ ಒಂದು ಮಗು ಉಳಿಯಲಿದೆ.

ಅಂದಹಾಗೆ ದೇಶದಲ್ಲಿ ವೃದ್ಧರ ಸಂಖ್ಯೆಯೂ ಏರಿಕೆಯಾಗಲಿದೆ. ಸದ್ಯ ವೃದ್ಧರ ಸಂಖ್ಯೆ ಶೇ. 6 ಇದ್ದು, 2050ರ ವೇಳೆಗೆ ಇದು ಶೇ. 13ಕ್ಕೆಏರಿಕೆ ಆಗಲಿದೆ.

2018ರಲ್ಲಿ ದೇಶದಲ್ಲಿ ಹತ್ತು ಜನರಲ್ಲಿ ಒಬ್ಬರು ವೃದ್ಧರಿದ್ದು, ಈ ಅನುಪಾತವು ಆರರಲ್ಲಿ ಒಂದಕ್ಕೆ ಏರಿಕೆ ಯಾಗಲಿದೆ.ಒಟ್ಟಾರೆ ಈ ವರದಿ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ದೇಶವು ಚೀನಾವನ್ನು ಹಿಂದಿಕ್ಕಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT