ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಗ್ರಹ

ಚುನಾವಣಾ ಕರ್ತವ್ಯ ಆದೇಶ ಪುನರ್‌ ಪರಿಶೀಲಿಸಿ

‘ವಿಧಾನಸಭಾ ಚುನಾವಣೆ ಕರ್ತವ್ಯ ನಿರ್ವಹಿಸಲು ಆಯೋಗದ ನೀತಿ, ನಿಯಮಗಳಡಿ ಶಿಕ್ಷಣ ಇಲಾಖೆ ನೀಡಿರುವ ಅರ್ಹತಾ ಪಟ್ಟಿಯನ್ನು ಪರಿಗಣಿಸಬೇಕು. ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿದ ಆದೇಶಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.

ಲಿಂಗಸುಗೂರಲ್ಲಿ ಶಿಕ್ಷಕ ಸಂಘದ ಪದಾಧಿಕಾರಿಗಳು ಚುನಾವಣಾ ಕರ್ತವ್ಯದ ಆದೇಶಗಳ ಪುನರ್‌ ಪರಿಶೀಲನೆಗೆ ಆಗ್ರಹಿಸಿ ಶನಿವಾರ ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ ಅವರಿಗೆ ಮನವಿ ಸಲ್ಲಿಸಿದರು.

ಲಿಂಗಸುಗೂರು: ‘ವಿಧಾನಸಭಾ ಚುನಾವಣೆ ಕರ್ತವ್ಯ ನಿರ್ವಹಿಸಲು ಆಯೋಗದ ನೀತಿ, ನಿಯಮಗಳಡಿ ಶಿಕ್ಷಣ ಇಲಾಖೆ ನೀಡಿರುವ ಅರ್ಹತಾ ಪಟ್ಟಿಯನ್ನು ಪರಿಗಣಿಸಬೇಕು. ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿದ ಆದೇಶಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.

ಶನಿವಾರ ಉಪ ವಿಭಾಗಾಧಿಕಾರಿ ರೇಣುಕಾ ಪ್ರಸಾದ ಅವರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ‘ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಅಂಗವಿಕಲರು, ತೀವ್ರ ಕಾಯಿಲೆಗಳಿಂದ ಬಳಲುವವರು, ಮೃತಪಟ್ಟವರು, ಗರ್ಭಿಣಿಯರು, ಬಾಣಂತಿಯರಿಗೆ ಸೇರಿದಂತೆ ಮನಸೋ ಇಚ್ಛೆ ಆದೇಶ ಪತ್ರ ಕಳುಹಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆ ಚುನಾವಣೆ ಕರ್ತವ್ಯಕ್ಕೆ ಅರ್ಹತೆಯುಳ್ಳ ನೌಕರರ ಪಟ್ಟಿಯನ್ನು ನೀಡಿದ್ದರೂ 6 ರಿಂದ 7 ವರ್ಷಗಳ ಹಿಂದೆ ಮೃತಪಟ್ಟಿರುವ ನೌಕರರ ಹೆಸರಲ್ಲಿ ಆದೇಶ ಪತ್ರಗಳು ಬಂದಿವೆ. ಬೇರೆ ಜಿಲ್ಲೆಗೆ ವರ್ಗಾವಣೆ ಆಗಿರುವ ಶಿಕ್ಷಕರು, ನಿವೃತ್ತಿ ಹೊಂದಿದ ನೌಕರರಿಗೂ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕರ್ತವ್ಯಲೋಪ ಎದ್ದು ಕಾಣುತ್ತಿದೆ’ ಎಂದು ಅವರು ಆರೋಪಿಸಿದರು.

‘ಶಿಕ್ಷಣ ಇಲಾಖೆ ಕಳುಹಿಸಿರುವ ಅರ್ಹತಾ ಪಟ್ಟಿಯನ್ನು ಪರಿಗಣಿಸಿಯೆ ಆದೇಶಗಳನ್ನು ಕಳುಹಿಸಬೇಕು. ಈಗಾಗಲೇ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಆದೇಶ ಹೊರಡಿಸಿರುವುದನ್ನು ವಾಪಸ್ ಪಡೆದು ಪುನರ್‌ ಪರಿಶೀಲನೆ ಮಾಡಬೇಕು. ಶಿಕ್ಷಣ ಇಲಾಖೆ ಕೆಲಸಗಳ ಜೊತೆಗೆ ವಿವಿಧ ಇಲಾಖೆಗಳ, ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ನೌಕರರ ನೆರವಿಗೆ ಆಯೋಗ ಮುಂದಾಗಬೇಕು’ ಎಂದು ಕೋರಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಕರಡಗಿ, ಪದಾಧಿಕಾರಿಗಳಾದ ಬಾಲಸ್ವಾಮಿ, ನಾಗಪ್ಪ ವಿಜಯಕುಮಾರ ಮೇಟಿ, ಬಸವರಾಜ ಮ್ಯಾಗೇರಿ, ಸದಸ್ಯರಾದ ಸುಭಾಷ, ವಿರೇಶ, ಕುಪ್ಪೆರಾಯ, ಗುರುಬಸಪ್ಪ, ಅಮರೇಗೌಡ ನಾಡಗೌಡ್ರ ಇದ್ದರು.

**

ಚುನಾವಣಾ ಆಯೋಗ ಸೂಚಿಸುವ ಕರ್ತವ್ಯ ನಿರ್ವಹಿಸಲು ನಾವು ಸಿದ್ಧರಿದ್ದೇವೆ. ಆದರೆ ಅನಾರೋಗ್ಯ, ಅಂಗವಿಕಲತೆ ವಿಶೇಷ ಪ್ರಕರಣದ ನೌಕರರಿಗೆ ವಿನಾಯಿತಿ ನೀಡಬೇಕು – ಬಸವರಾಜ ಕರಡಿ, ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ. ಸಂ ಲಿಂಗಸುಗೂರು.

**

Comments
ಈ ವಿಭಾಗದಿಂದ ಇನ್ನಷ್ಟು
ಮೂರು ಶಿಲಾ ಶಾಸನಗಳ ಬರಹ ಬೆಳಕಿಗೆ

ರಾಯಚೂರು
ಮೂರು ಶಿಲಾ ಶಾಸನಗಳ ಬರಹ ಬೆಳಕಿಗೆ

26 May, 2018
ಕೃಷಿ ಚಟುವಟಿಕೆ ಚುರುಕು

ಲಿಂಗಸುಗೂರು
ಕೃಷಿ ಚಟುವಟಿಕೆ ಚುರುಕು

26 May, 2018
ಅದ್ಧೂರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

ಕವಿತಾಳ
ಅದ್ಧೂರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

25 May, 2018

ರಾಯಚೂರು
ನಿಫಾ ಸೋಂಕು: ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ

‘ಜಿಲ್ಲೆಯಲ್ಲಿ ನಿಫಾ ವೈರಸ್‌ ಪ್ರಕರಣ ಇಲ್ಲಿಯವರೆಗೂ ಪತ್ತೆ ಆಗಿಲ್ಲ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದಕ್ಕೆ ತಜ್ಞ ವೈದ್ಯರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು...

25 May, 2018
‘ಸ್ವಚ್ಛ ಭಾರತ’ ಮಾಡುವವರಿಗೆ ವೇತನ ಸಿಗುತ್ತಿಲ್ಲ

ರಾಯಚೂರು
‘ಸ್ವಚ್ಛ ಭಾರತ’ ಮಾಡುವವರಿಗೆ ವೇತನ ಸಿಗುತ್ತಿಲ್ಲ

22 May, 2018