ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕುವಿನಿಂದ ತಾಯಿ, ತಂಗಿಯ ಹತ್ಯೆ: ಹೊಣೆ ಹೊತ್ತ ಐಎಸ್

Last Updated 23 ಆಗಸ್ಟ್ 2018, 14:17 IST
ಅಕ್ಷರ ಗಾತ್ರ

ಪ್ಯಾರಿಸ್, ಫ್ರಾನ್ಸ್ : ಚಾಕುವಿನಿಂದ ತನ್ನ ತಾಯಿ ಹಾಗೂ ತಂಗಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ಪ್ಯಾರಿಸ್‌ಗೆ ಸಮೀಪದ ಟ್ರ್ಯಾಪ್ಸ್ ಪಟ್ಟಣದಲ್ಲಿ ನಡೆದಿದೆ.

ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದು, ಈತನ ಹೆಸರು 2016ರಲ್ಲಿ ಉಗ್ರರ ನಿಗಾಪಟ್ಟಿಯಲ್ಲಿ ಇತ್ತು ಎಂದು ಅಂತರಿಕ ಇಲಾಖೆ ಸಚಿವ ಗೆರಾರ್ಡ್ ಕೊಲ್ಲಂಬ್ ಹೇಳಿದ್ದಾರೆ.

ಘಟನೆಯ ಹೊಣೆಯನ್ನು ಐಎಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಆದರೆ ಹತ್ಯೆಗೆ ಕಾರಣ ಏನೆಂದು ಸದ್ಯಕ್ಕೆ ತಿಳಿದುಬಂದಿಲ್ಲ. ಭಯೋತ್ಪಾದನಾ ನಿಗ್ರಹ ತಜ್ಞರ ಬದಲು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಫೋನ್ ಹಾಗೂ ಕಂಪ್ಯೂಟರ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈತ ಮದ್ಯ ಹಾಗೂ ಮಾದಕವಸ್ತುಗಳ ವ್ಯಸನಕ್ಕೆ ಒಳಗಾಗಿದ್ದ ಎಂದು ಬಿಎಫ್ಎಂ ಸುದ್ದಿವಾಹಿನಿ ವರದಿ ಮಾಡಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಯ ಮೇಲೆ ಗುಂಡು ಹಾರಿಸಿದರು. ಪೊಲೀಸರ ಕಡೆಗೆ ಚಾಕು ಹಿಡಿದು ಬಂದಿದ್ದರಿಂದ ಆತನ ಮೇಲೆ ದಾಳಿ ನಡೆಸಬೇಕಾಯಿತು ಎಂದು ಕೊಲ್ಲಂಬ್ ಹೇಳಿದ್ದಾರೆ.

ಮುಸ್ಲಿಂ ಬಾಹುಳ್ಯದ ಈ ಪಟ್ಟಣವು, ಇಸ್ಲಾಂನ ತೀವ್ರಗಾಮಿತನ, ಬಡತನ ಹಾಗೂ ಡ್ರಗ್ಸ್ ವ್ಯಸನದಂತಹ ಸಮಸ್ಯೆಗಳನ್ನು ಎದುರಿಸತ್ತಿದೆ. ಸಿರಿಯಾ ಹಾಗೂ ಇರಾಕ್‌ನಲ್ಲಿ ಐಎಸ್‌ ಪರವಾಗಿ ಹೋರಾಡಲು 50ಕ್ಕೂ ಹೆಚ್ಚು ಜನರು ಫ್ರಾನ್ಸ್ ತೊರೆದಿರುವ ಶಂಕೆಯಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT