ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರಿಂದ ಸುರಕ್ಷಿತ ನೋಂದಣಿ ಫಲಕ

ಹೊಸ ವಾಹನಗಳಿಗೆ ಕಡ್ಡಾಯ l ಕದ್ದ ವಾಹನಗಳ ಮಾರಾಟಕ್ಕೆ ಕಡಿವಾಣ
Last Updated 22 ಏಪ್ರಿಲ್ 2018, 20:12 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ ಯಾಗುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್–ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಲಿದೆ.

ಈ ಸಂಬಂಧ ಕೇಂದ್ರ ಭೂಸಾರಿಗೆ ಸಚಿವಾಲಯವು ಕರಡನ್ನು ಹೊರಡಿಸಿದೆ. ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಸದ್ಯ ಚಾಲ್ತಿಯಲ್ಲಿರುವ ವಾಹನಗಳ ನಂಬರ್‌ ಪ್ಲೇಟ್‌ಗಳಿಗಿಂತ ಇವು ಭಿನ್ನವಾಗಿ ಮತ್ತು ಹೆಚ್ಚು ಸುರಕ್ಷಿತವಾಗಿರುತ್ತವೆ. ಪ್ರತಿ ವಾಹನದ ಎಚ್‌ಎಸ್‌ಆರ್‌ಪಿಗೂ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಯಾವುದೇ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನೀಡುವ ಮುನ್ನ ಅದನ್ನು ಸಾರಿಗೆ ಇಲಾಖೆ ನೋಂದಣಿ ಮಾಡಿರುತ್ತದೆ. ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪಡೆಯಲು ಸಾಧ್ಯವಿಲ್ಲ.

ವಾಹನ ತಯಾರಕರೇ ನೋಂದಣಿ ಫಲಕಗಳನ್ನು ತಯಾರಿಸಿ ಕೊಡಬೇಕು. ವಾಹನದ ಬೆಲೆಯಲ್ಲೇ, ಫಲಕದ ಬೆಲೆಯನ್ನೂ ಸೇರಿಸಿರಬೇಕು

ವಾಹನವನ್ನು ನೋಂದಣಿ ಮಾಡಿಸಿ, ಎಚ್‌ಎಸ್‌ಆರ್‌ಪಿಯಲ್ಲಿ ನೋಂದಣಿ ಸಂಖ್ಯೆಯನ್ನು ಮುದ್ರಿಸಿ ಅಳವಡಿಸುವ ಹೊಣೆ ಡೀಲರ್‌ಗಳದ್ದು

ಗ್ರಾಹಕರ ಬೇಡಿಕೆ ಮೇರೆಗೆ ಹಳೆಯ ವಾಹನಗಳಿಗೂ ಎಚ್‌ಎಸ್‌ಆರ್‌ಪಿಯನ್ನು ಡೀಲರ್‌ಗಳು ಅಳವಡಿಸಬಹುದು. ಪ್ರತ್ಯೇಕ ಶುಲ್ಕವಿರುತ್ತದೆ.

ಎಚ್‌ಎಸ್‌ಆರ್‌ಪಿ ಎನ್ನುವುದು ‘ನಂಬರ್ ಪ್ಲೇಟ್: ನೋಂದಣಿ ಫಲಕ ಎನ್ನುವುದು ‘ನಂಬರ್ ಪ್ಲೇಟ್’ ಅರ್ತಾಥ್ ನೋಂದಣಿ ಸಂಖ್ಯಾ ಫಲಕವೇ ಹೌದು. ಯಾವುದೇ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನೀಡುವ ಮುನ್ನ ಆ ಎಚ್‌ಎಸ್‌ಆರ್‌ಪಿಯನ್ನೂ ಸಾರಿಗೆ ಇಲಾಖೆ ನೋಂದಣಿ ಮಾಡಿರುತ್ತದೆ. ಹೀಗಾಗಿ ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡೆರಡು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪಡೆಯಲು ಸಾಧ್ಯವಿಲ್ಲ. ಇವುಗಳಲ್ಲಿ ಹಲವು ಹಂತದ ಸುರಕ್ಷಾ ಸವಲತ್ತುಗಳಿದ್ದು, ನಕಲು ಮಾಡಲು ಸಾಧ್ಯವಿಲ್ಲ.

ಇದು ವಾಹನದ ವಿಶಿಷ್ಟ ಗುರುತಿನ ಸಂಖ್ಯೆ. ವಾಹನದ ಎಂಜಿನ್ ಸಂಖ್ಯೆ, ಛಾಸಿಸ್ ಸಂಖ್ಯೆ, ನೋಂದಣಿ ಸಂಖ್ಯೆ, ವಾಹನದ ಮಾದರಿ, ಮಾಲೀಕರ ವಿವರ ಸೇರಿಸಿ ಈ ಸಂಖ್ಯೆಯನ್ನು ಸೃಷ್ಟಿಸಲಾಗಿರುತ್ತದೆ. ಇದನ್ನು ಲೇಸರ್‌ ತಂತ್ರಜ್ಞಾನದಲ್ಲಿ ಮುದ್ರಿಸಿರುವುದರಿಂದ ಅಳಿಸಲು ಸಾಧ್ಯವಿಲ್ಲ. ಹಳೆಯ ಕಾರುಗಳನ್ನು ಕೊಳ್ಳುವಾಗ ಈ ಸಂಖ್ಯೆಯನ್ನು ಪರಿಶೀಲಿಸಿದರೆ, ಆದು ಅದೇ ವಾಹನದ್ದೇ ಅಥವಾ ಅಲ್ಲವೇ ಎಂಬುದು ತಿಳಿಯುತ್ತದೆ. ಕದ್ದ ವಾಹನದ ನಂಬರ್‌ ಪ್ಲೇಟ್ ಬದಲಿಸಿ ಮಾರಾಟ ಮಾಡಲು ಸಾಧ್ಯವಿಲ್ಲದ್ದರಿಂದ ವಾಹನ ಕಳ್ಳತನಕ್ಕೆ ಕಡಿವಾಣ ಬೀಳಲಿದೆ.

ಒಮ್ಮೆ ಮಾತ್ರ ಬಳಸಬಹುದಾದ, ಬಿಚ್ಚಲು ಸಾಧ್ಯವಿಲ್ಲದ ಸ್ನ್ಯಾಪ್‌ಲಾಕ್‌ಗಳನ್ನು ಬಳಸಿ ವಾಹನಕ್ಕೆ ಅಳವಡಿಸಲಾಗುತ್ತದೆ. ಹೀಗಾಗಿ ಕದ್ದ ವಾಹನಗಳಿಗೆ ಬೇರೆ ನೋಂದಣಿ ಫಲಕಗಳನ್ನು ಅಳವಡಿಸಲು ಸಾಧ್ಯವಿಲ್ಲ.

ಇದು ಮೂರನೇ ನೋಂದಣಿ ಫಲಕ. ವಾಹನಗಳ ಮುಂಬದಿಯ ಗಾಜಿನ (ವಿಂಡ್‌ಶೀಲ್ಡ್‌) ಒಳಭಾಗದಲ್ಲಿ ಇದನ್ನು ಅಳವಡಿಸಬೇಕು. ವಾಹನದ ಸಂಪೂರ್ಣ ವಿವರ ಇದರಲ್ಲಿ ಮುದ್ರಿತವಾಗಿರುತ್ತದ. ಇದನ್ನು ತೆಗೆದರೆ ಮತ್ತೆ ಅಂಟಿಸಲು ಸಾಧ್ಯವಿಲ್ಲ. ಮುದ್ರಿತ ಅಕ್ಷರಗಳು ಗಾಜಿಗೆ ಅಂಟಿಕೊಂಡಿರುತ್ತವೆ. ದ್ವಿಚಕ್ರ ವಾಹನಗಳಲ್ಲಿ ಇವನ್ನು ಎಲ್ಲಿ ಅಳವಡಿಸುವುದು ಎಂಬುದರ ಮಾಹಿತಿ ಕರಡಿನಲ್ಲಿ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT