ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದರ್ಶನ್‌ ಪುಟ್ಟಣ್ಣಯ್ಯ ಅಮೆರಿಕ ಪೌರತ್ವ ಪಡೆದಿಲ್ಲ’

ಕಾನೂನು ಸಲಹೆಗಾರ, ವಕೀಲ ಕೇಶವಮೂರ್ತಿ ಸ್ಪಷ್ಟನೆ
Last Updated 23 ಏಪ್ರಿಲ್ 2018, 10:49 IST
ಅಕ್ಷರ ಗಾತ್ರ

ಪಾಂಡವಪುರ: ‘ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರು ಅಮೆರಿಕ ಪ್ರಜೆ, ಅವರ ನಾಮಪತ್ರ ಅನರ್ಹಗೊಳ್ಳಲಿದೆ ಎಂದು ಸುಳ್ಳು ವದಂತಿ ಹಬ್ಬಿಸಿ ಸಾರ್ವಜನಿಕರಲ್ಲಿ ಗೊಂದಲು ಉಂಟು ಮಾಡುತ್ತಿದ್ದಾರೆ. ಆದರೆ, ದರ್ಶನ್‌ ಅವರು ಭಾರತೀಯ ಪ್ರಜೆಯಾಗಿಯೇ ಉಳಿದಿರುವುದರಿಂದ ಅವರ ನಾಮಪತ್ರ ಅರ್ಹಗೊಳ್ಳಲಿದೆ’ ಎಂದು ಪಕ್ಷದ ಕಾನೂನು ಸಲಹೆಗಾರ, ವಕೀಲ ಕೇಶವಮೂರ್ತಿ ತಿಳಿಸಿದರು.

ದರ್ಶನ್‌ ಪುಟ್ಟಣ್ಣಯ್ಯ ಅವರು ಶಿಕ್ಷಣ ಮತ್ತು ಉದ್ಯೋಗದ ದೃಷ್ಟಿಯಿಂದ ವೀಸಾ ಪಡೆದಿದ್ದು, ಇದು 2020ನೇ ಇಸವಿವರೆಗೂ ಚಾಲ್ತಿಯಲ್ಲಿರು
ತ್ತದೆ. ದರ್ಶನ್‌ ಅವರು ಅಮೆರಿಕದ ಗ್ರೀನ್‌ ಕಾರ್ಡ್‌ ಪಡೆದಿಲ್ಲ. ಪಡೆದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ, ವಿದೇಶಿ ಪೌರತ್ವವನ್ನು ಪಡೆದಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿರುವುದಿಲ್ಲ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿ
ಯಲ್ಲಿ ಹೇಳಿದರು.

‘ದರ್ಶನ್‌ ಅವರು ಅಮೆರಿಕದಲ್ಲಿ ಎಂಎಸ್‌ ಶಿಕ್ಷಣ ಪಡೆದು ಅಲ್ಲೇ ಉದ್ಯೋಗಿಯಾಗಿ 15 ವರ್ಷಗಳಿಂದ ಇದ್ದಾರೆ. ಅವರು ಅಲ್ಲಿಯ ಪೌರತ್ವವನ್ನು ಹೊಂದಿಲ್ಲ. ಕನಿಷ್ಠ ಗ್ರೀನ್‌ ಕಾರ್ಡ್‌ ಅನ್ನೂ ಹೊಂದಿಲ್ಲ. ಅವರು ಭಾರತೀಯ ಪ್ರಜೆ ಎಂಬುದಕ್ಕೆ ಅವರು ಹೊಂದಿರುವ ಪಾಸ್‌ಪೋರ್ಟ್‌, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿರುವುದು, ಮತದಾರರ ಗುರುತಿನ ಕಾರ್ಡ್‌ ಹೊಂದಿರುವುದು. ಅಲ್ಲದೆ, 2017ರ ಡಿಸೆಂಬರ್ ತಿಂಗಳಲ್ಲಿ ಕ್ಯಾತನಹಳ್ಳಿ ಗ್ರಾಮದ ಪಂಚಾಯಿತಿ ಉಪ ಚುನಾವಣೆಯಲ್ಲಿ ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿರುವುದೇ ಸಾಕ್ಷಿಯಾಗಿದೆ. ಇದೇ ರೀತಿ ಸಚಿವ ಕೃಷ್ಣ ಬೈರೇಗೌಡ ಅವರ ಮೇಲೂ ಅಪಪ್ರಚಾರ ನಡೆದಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT