ಮೊಬೈಲ್‌ಫೋನ್‌ ಸಂಖ್ಯೆ ದಾಖಲಿಸಿ ಅನಿಯಮಿತ ಇಂಟರ್‌ನೆಟ್ ಬಳಸಬಹುದು

ರಾಯಚೂರು ರೈಲು ನಿಲ್ದಾಣದಲ್ಲಿ ವೈಫೈ

ಪ್ರಯಾಣಿಕರ ಅನುಕೂಲಕ್ಕಾಗಿ ರಾಯಚೂರು ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ರಾಯಚೂರಿನ ರೈಲು ನಿಲ್ದಾಣದಲ್ಲಿ ಉಚಿತ ವೈ ಫೈ ಬಳಕೆ ಮಾಡುತ್ತಿರುವ ಪ್ರಯಾಣಿಕರು

ರಾಯಚೂರು: ಪ್ರಯಾಣಿಕರ ಅನುಕೂಲಕ್ಕಾಗಿ ರಾಯಚೂರು ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ಸದ್ಯಕ್ಕೆ ಪ್ರಾಯೋಗಿಕವಾಗಿ ವೈಫೈ ಸೇವೆಯನ್ನು ಬಳಕೆಗೆ ನೀಡಲಾಗಿದೆ. ಅಧಿಕೃತ ಚಾಲನೆ ಬಳಿಕ ಇನ್ನಷ್ಟು ವೇಗದಲ್ಲಿ ಇಂಟರ್‌ನೆಟ್‌ ಸೇವೆ ಸಿಗಲಿದೆ. ಸಿಕಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ರಾಯಚೂರು ಸೇರಿ ಹಲವು ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆಗಾಗಿ ಉಪಕರಣಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ.

ಎಲ್ಲವೂ ಪೂರ್ಣವಾದ ಬಳಿಕ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅಧಿಕೃತ ಘೋಷಣೆ ಮೂಲಕ ಸಾರ್ವಜನಿಕರಿಗೆ ಈ ಬಗ್ಗೆ ವಿವರ ನೀಡಲಿದ್ದಾರೆ. ಸದ್ಯ, ರಾಯಚೂರು ರೈಲು ನಿಲ್ದಾಣದಲ್ಲಿ 2.4 ಗೀಗಾ ಹರ್ಟ್ಸ್‌ ಫ್ರಿಕ್ವೆನ್ಸಿ ಸಾಮರ್ಥ್ಯ ಇರುವ, ಪ್ರತಿ ಸೆಕೆಂಡಿಗೆ ಮೆಗಾ ಬೈಟ್ (ಎಂಬಿಪಿಎಸ್) ವೇಗದಲ್ಲಿ ಇಂಟರ್‌ನೆಟ್ ಸೇವೆ ಸಿಗುತ್ತಿದೆ.

ಹೇಗೆ ಬಳಕೆ: ಉಚಿತ ವೈಫೈ ಸೇವೆಯನ್ನು ವೈಫೈ ಸೌಲಭ್ಯ ಹೊಂದಿರುವ ಫೋನ್ ಗಳಿಂದ ಪಡೆಯಬಹುದು. ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವೈಫೈ ಮೂಲಕ 'ರೇಲ್ ವೈರ್ ವೈಫೈ' ಶೋಧಿಸಬೇಕು. ಸಂಪರ್ಕ ಸಾಧ್ಯವಾದ ಮೇಲೆ ಮೊಬೈಲ್ ಸಂಖ್ಯೆ ದಾಖಲಿಸಬೇಕು. ದಾಖಲಿಸಿದ ಮೊಬೈಲ್ ಸಂಖ್ಯೆಗೆ ನಾಲ್ಕು ಅಂಕಿಗಳ ಪಾಸ್ ವರ್ಡ್ ಇರುವ ಮೇಸೆಜ್ ಬರುತ್ತದೆ. ಪಾಸ್ ವರ್ಡ್ ದಾಖಲಿಸಿದ ಕೂಡಲೇ ಉಚಿತ ಹೈ ಸ್ಪೀಡ್ ಇಂಟರ್‌ನೆಟ್ ಸೇವೆ ಆರಂಭವಾಗುತ್ತದೆ.

ರೈಲು ನಿಲ್ದಾಣಗಳಲ್ಲಿ ಇಂಟರ್‌ನೆಟ್ ಸೇವೆಯ ಪೂರೈಕೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರೈಲ್ವೆ ಇಲಾಖೆಯು ಪ್ರತ್ಯೇಕವಾಗಿ 'ರೇಲ್ ಟೆಲ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ' ಕಂಪನಿ ಸ್ಥಾಪಿಸಿದೆ. ರೇಲ್ ಟೆಲ್ ಕಂಪನಿಯ ಎಂಜಿನಿಯರ್‌ಗಳ ತಂಡವು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ವೈಫೈ ಸೇವೆ ಒದಗಿಸುವುದಕ್ಕೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಿದ್ದಾರೆ. ಪ್ಲಾಟ್ ಪಾರಂಗಳಲ್ಲಿ ಒಎಫ್‌ಸಿ ಕೇಬಲ್ ಅಳವಡಿಸಿದ್ದಾರೆ. 3 ಕಿಲೊ ವಾಟ್ ಸಾಮರ್ಥ್ಯ ಬ್ಯಾಟರಿ ಬ್ಯಾಕಪ್ ಮಾಡಲಾಗಿದೆ. ಎರಡು ಸ್ವಿಚ್, ಎರಡು ಕಡೆ ಯುಪಿಎಸ್ ಹಾಗೂ ಎಂಟು ವೈಫೈ ಸ್ವಿಚ್ ಅಳವಡಿಸಲಾಗಿದೆ. ನಗದು ರಹಿತ ರೈಲ್ವೆ ನಿಲ್ದಾಣ ಎನ್ನುವ ಹೆಗ್ಗಳಿಕೆಯನ್ನು ರಾಯಚೂರು ರೈಲ್ವೆ ನಿಲ್ದಾಣ ಹೊಂದಿತ್ತು. ಈಗ ವೈಫೈ ಸೇವೆ ಆರಂಭಿಸಿರುವುದು ವಿಶೇಷ.

**

ರಾಯಚೂರು ರೈಲು ನಿಲ್ದಾಣದಲ್ಲಿ ವೈಫೈ ಸೇವೆ ನೀಡುವುದಕ್ಕೆ ಉಪಕರಣಗಳನ್ನು ಅಳವಡಿಸಿ ಹೋಗಿದ್ದಾರೆ. ಇನ್ನೂ ಉದ್ಘಾಟನೆ ಮಾಡಿಲ್ಲ
-ವಿವೇಕಾನಂದ, ಸ್ಟೇಷನ್ ಮಾಸ್ಟರ್, ರಾಯಚೂರು ರೈಲ್ವೆ ನಿಲ್ದಾಣ

 

Comments
ಈ ವಿಭಾಗದಿಂದ ಇನ್ನಷ್ಟು
ಮೂರು ಶಿಲಾ ಶಾಸನಗಳ ಬರಹ ಬೆಳಕಿಗೆ

ರಾಯಚೂರು
ಮೂರು ಶಿಲಾ ಶಾಸನಗಳ ಬರಹ ಬೆಳಕಿಗೆ

26 May, 2018
ಕೃಷಿ ಚಟುವಟಿಕೆ ಚುರುಕು

ಲಿಂಗಸುಗೂರು
ಕೃಷಿ ಚಟುವಟಿಕೆ ಚುರುಕು

26 May, 2018
ಅದ್ಧೂರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

ಕವಿತಾಳ
ಅದ್ಧೂರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ

25 May, 2018

ರಾಯಚೂರು
ನಿಫಾ ಸೋಂಕು: ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ

‘ಜಿಲ್ಲೆಯಲ್ಲಿ ನಿಫಾ ವೈರಸ್‌ ಪ್ರಕರಣ ಇಲ್ಲಿಯವರೆಗೂ ಪತ್ತೆ ಆಗಿಲ್ಲ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದಕ್ಕೆ ತಜ್ಞ ವೈದ್ಯರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು...

25 May, 2018
‘ಸ್ವಚ್ಛ ಭಾರತ’ ಮಾಡುವವರಿಗೆ ವೇತನ ಸಿಗುತ್ತಿಲ್ಲ

ರಾಯಚೂರು
‘ಸ್ವಚ್ಛ ಭಾರತ’ ಮಾಡುವವರಿಗೆ ವೇತನ ಸಿಗುತ್ತಿಲ್ಲ

22 May, 2018