ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮಾವು ಬೆಳೆಗಾರರಿಗೆ ಸಂಕಷ್ಟ

ರಾಮನಗರ: ಬಿರುಗಾಳಿ ಸಹಿತ ವರುಣನ ಆರ್ಭಟ
Last Updated 23 ಏಪ್ರಿಲ್ 2018, 12:33 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿ, ಮಿಂಚು ಹಾಗೂ ಗುಡುಗು ಸಹಿತ ಅರ್ಧ ಗಂಟೆಗೂ ಹೆಚ್ಚು ಮಳೆ ಸುರಿಯಿತು. ಹಲವು ಗ್ರಾಮಗಳಲ್ಲೂ ಮಿಂಚು ಸಹಿತ ಮಳೆಯಾಗಿದೆ.

ಮಧ್ಯಾಹ್ನ ಬಿಸಿಲಿನ ತೀವ್ರತೆ 36 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು. ಬಿಸಿಲಿನ ಝಳದಿಂದ ಬಸವಳಿದಿದ್ದ ಜನರಿಗೆ ಅಕಾಲಿಕ ಮಳೆ ತಂಪನ್ನು ಉಂಟು ಮಾಡಿತು. ಈ ರೀತಿ ಈಗ ಗಾಳಿ ಸಹಿತ ಮಳೆಗೆ ಮಾವಿನ ಕಾಯಿಗಳು ಉದುರಿ ಹೋಗುತ್ತವೆ ಎಂಬುದು ರೈತರ ಚಿಂತೆಯಾಗಿದೆ.

ಮಾವು ಬೆಳೆಗಾರರಿಗೆ ಸಂಕಷ್ಟ: ಪ್ರಸಕ್ತ ವರ್ಷದ ಮಾವಿನ ತೋಟದಲ್ಲಿ ಮರದ ತುಂಬ ಮಾವಿನ ಫಸಲು ಬಂದಿತ್ತು. ಉತ್ತಮ ಮಾವಿನ ಫಸಲಿನಿಂದ ಮಾವು ಬೆಳೆಗಾರರು ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮರದ ತುಂಬೆಲ್ಲಾ ತುಳುಕಾಡುತ್ತಿದ್ದ ಮಾವಿನ ಕಾಯಿಗಳು ನೆಲಕಚ್ಚುತ್ತಿವೆ.

ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮಾವು ಮಳೆಯ ಆರ್ಭಟದಿಂದ ಮಣ್ಣು ಪಾಲಾಗುತ್ತಿದೆ. ಜತೆಗೆ ಮಾವಿನ ದರ ಈ ಬಾರಿ ಕುಸಿತ ಕಂಡಿದ್ದು, ಮಾವು ಬೆಳೆಗಾರರಿಗೆ ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

‘ಸತತ ಬರಗಾಲದಿಂದ ಬೇಸತ್ತಿದ್ದರೂ ಮಾವಿನ ಉತ್ತಮ ಇಳುವರಿಗೆ ಬೇಕಾದ ಗೊಬ್ಬರ, ಕೀಟನಾಶಕ ಎಲ್ಲವನ್ನೂ ಒದಗಿಸಲಾಗಿತ್ತು. ಮಾವಿನ ಮರ
ದಲ್ಲಿ ಉತ್ತಮ ಫಸಲನ್ನು ಕಂಡು ಲಾಭದ ನಿರೀಕ್ಷೆಯಲ್ಲಿದ್ದೇವು. ಆದರೆ, ಬೆಲೆ ಕುಸಿತ ಹಾಗೂ ಮಳೆಯ ಆರ್ಭಟದಿಂದ ನಮ್ಮ ಪರಿಸ್ಥಿತಿ ಈಗ ಶೋಚನೀಯವಾಗಿದೆ’ ಎನ್ನುತ್ತಾರೆ ಪೇಟೆಕುರುಬರಹಳ್ಳಿಯ ಮಾವು ಬೆಳೆಗಾರ ದಿನೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT