ಹುಬ್ಬಳ್ಳಿ

ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿ, ನಗದು ಪ್ರದಾನ

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ಶನಿವಾರ ಚಾಲುಕ್ಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ರೈಲ್ವೆ ಸಪ್ತಾಹ ಕಾರ್ಯಕ್ರಮ ನಡೆಯಿತು.

ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ಸಿಬ್ಬಂದಿಗೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ್ ಮೋಹನ್‌ ಪ್ರಶಸ್ತಿ ಪ್ರದಾನ ಮಾಡಿದರು

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ಶನಿವಾರ ಚಾಲುಕ್ಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ರೈಲ್ವೆ ಸಪ್ತಾಹ ಕಾರ್ಯಕ್ರಮ ನಡೆಯಿತು.

2017–18ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹುಬ್ಬಳ್ಳಿ ವಿಭಾಗದ 134 ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಿರ್ವಹಣಾ ನಿಲ್ದಾಣ, ಅತ್ಯುತ್ತಮ ಕಾರ್ಯಾಲಯ ಮತ್ತು ಉತ್ತಮ ಆರೋಗ್ಯ ಘಟಕ ಹೀಗೆ 13 ವಿಭಾಗಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ್ ಮೋಹನ್‌ ಮಾತನಾಡಿ  ‘ಹುಬ್ಬಳ್ಳಿ ವಿಭಾಗವು ಈ ಸಾಲಿನಲ್ಲಿ 35.4 ಮಿಲಿಯನ್ ಟನ್ ಸರಕು ಸಾಗಿಸಿದೆ. ಈ ಮೂಲಕ ಸರಕು ಸಾಗಣೆಯಲ್ಲಿ ಭಾರತೀಯ ರೈಲ್ವೆಯ 28 ವಿಭಾಗಗಳಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ನೈರುತ್ಯ ರೈಲ್ವೆ ವಲಯ ಮಟ್ಟದ ರೈಲ್ವೆ ಸಪ್ತಾಹದಲ್ಲಿ ಹುಬ್ಬಳ್ಳಿ ವಿಭಾಗವು ವಾಣಿಜ್ಯ, ಯಾಂತ್ರಿಕ, ಭದ್ರತೆ, ಸಿಗ್ನಲ್ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ದಕ್ಷತಾ ಶೀಲ್ಡ್‌ಗಳನ್ನು ಪಡೆದುಕೊಂಡಿದೆ. ಈ ಎಲ್ಲ ಸಾಧನೆಗಳು ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಸಾಧ್ಯವಾಗಿದೆ’ ಎಂದರು.

ಸಿಬ್ಬಂದಿಯ ಯೋಗಕ್ಷೇಮಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ನೃತ್ಯ, ಸಂಗೀತ ಕಾರ್ಯಕ್ರಮಗಳು ಜರುಗಿದವು.

ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕರಾದ ಆರ್.ಸಿ. ಪುನೇಠಾ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಉಪಾಧ್ಯಕ್ಷೆ ಮಮತಾ ಪುನೇಠಾ, ವರಿಷ್ಠ ವಿಭಾಗೀಯ ಸಿಬ್ಬಂದಿ ಶುಜಾ ಮಹಮೂದ್, ವಿಭಾಗೀಯ ಸಿಬ್ಬಂದಿ ಅಧಿಕಾರಿ ಪ್ರಸಾದ್ ಇಚ್ಚಂಗಿಮಠ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಬಿಲ್ಡ್‌ಟೆಕ್‌’ ವಸ್ತು ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿ
‘ಬಿಲ್ಡ್‌ಟೆಕ್‌’ ವಸ್ತು ಪ್ರದರ್ಶನಕ್ಕೆ ಚಾಲನೆ

26 May, 2018
ಗಗನಮುಖಿಯಾಗಿರುವ ಪೆಟ್ರೋಲ್‌ ಬೆಲೆ

ಹುಬ್ಬಳ್ಳಿ
ಗಗನಮುಖಿಯಾಗಿರುವ ಪೆಟ್ರೋಲ್‌ ಬೆಲೆ

26 May, 2018
ಹುಬ್ಬಳ್ಳಿಯಲ್ಲಿ ಕಂಡಲ್ಲೆಲ್ಲ ಕಸದ ರಾಶಿ!

ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಕಂಡಲ್ಲೆಲ್ಲ ಕಸದ ರಾಶಿ!

26 May, 2018

ಧಾರವಾಡ
‘ಮನೋರೋಗ ವಾಸಿಯಾಗಬಲ್ಲ ಕಾಯಿಲೆ’

'ಮನೋವ್ಯಾಕುಲತೆ ವಾಸಿಯಾಗಬಲ್ಲ ಕಾಯಿಲೆಯಾಗಿದ್ದು ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ಅಗತ್ಯ' ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಹಳ್ಯಾಳ ಹೇಳಿದರು.

26 May, 2018

ಧಾರವಾಡ
ಕೇರಳ ವಿದ್ಯಾರ್ಥಿಗಳ ಮೇಲೆ ನಿಗಾ

ನಿಫಾ ವೈರಾಣು ಸೋಂಕು ತಗುಲಿರುವ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಈವರೆಗೂ ವರದಿಯಾಗದಿದ್ದರೂ, ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಮೇಲೆ ತೀವ್ರ ನಿಗಾ ವಹಿಸಲು...

25 May, 2018