ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮ ಜರುಗಿಸಲು ಒತ್ತಾಯ

ಗಿರಿ ಶ್ರೇಣಿಗೆ ಖಾಸಗಿ ಆಸ್ಪತ್ರೆ ತ್ಯಾಜ್ಯ ವಿಲೇವಾರಿ
Last Updated 25 ಏಪ್ರಿಲ್ 2018, 8:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕವಿಕಲ್‍ಗಂಡಿ, ಗಿರಿಶ್ರೇಣಿಯ ರಸ್ತೆಗಳು, ತಿರುವುಗಳ ಪಕ್ಕದಲ್ಲಿ ನಗರದ ಅನೇಕ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಇದು ಪರಿಸರಕ್ಕೆ ಮಾರಕ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳಲ್ಲಿ ಬಳಸಿದ ಸೂಜಿ, ಸಿರೆಂಜ್, ಔಷಧಿ, ಮಾತ್ರೆಗಳು, ಬಾಟಲಿಗಳು ಮೊದಲಾದವನ್ನು ಚೀಲಗಳಲ್ಲಿ ತುಂಬಿ ವಾಹನಗಳಲ್ಲಿ ತಂದು ಗಿರಿ ಪ್ರದೇಶದ ಶೋಲಾ ಕಾಡುಗಳು, ಹುಲ್ಲುಗಾವಲು, ರಸ್ತೆ ಸನಿಹದಲ್ಲಿ ವಿಲೇವಾರಿ ಮಾಡಲಾಗಿದೆ. ಆಸ್ಪತ್ರೆ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಆದರೆ ನಗರದ ಕೆಲ ಆಸ್ಪತ್ರೆ ಮತ್ತು ಪ್ರಯೋಗಾಲಯಗಳು ಈ ಕಾನೂನನ್ನು ಪಾಲಿಸುತ್ತಿಲ್ಲ. ತ್ಯಾಜ್ಯಗಳನ್ನು ತಂದು ಸೂಕ್ಷ್ಮ ಪರಿಸರ ಪ್ರದೇಶವಾದ ಗಿರಿ ಶ್ರೇಣಿಯಲ್ಲಿ ಹಾಕುತ್ತಿದ್ದಾರೆ. ಇದು ಅಪಾಯಕಾರಿ ಮತ್ತು ಹೀನಾಯ ಕೆಲಸ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ತ್ಯಾಜ್ಯಗಳು ನೀರಿನ ಮೂಲಕ್ಕೆ ಸೇರಿಕೊಂಡು ಜನ ಮತ್ತು ಜಾನುವಾರು ಹಾಗೂ ವನ್ಯಜೀವಿಗಳ ಜೀವಕ್ಕೆ ಹಾನಿಯುಂಟಾಗುವ ಸಾಧ್ಯತೆ ಇದೆ. ಇಲ್ಲಿನ ಅಪರೂಪದ ವನ್ಯಜೀವಿಗಳು, ಸರಿಸೃಪಗಳು, ಬಾನಾಡಿಗಳು ಶೋಲಾಕಾಡುಗಳನ್ನೆ ಆಶ್ರಯಿಸಿವೆ. ಇಂಥ ಪ್ರದೇಶದಲ್ಲಿ ಆಸ್ಪತ್ರೆಯ ರಾಸಯನಿಕ ಮಿಶ್ರಿತ ತ್ಯಾಜ್ಯಗಳು, ಸಿರಿಂಜುಗಳಿಂದ ವನ್ಯಜೀವಿಗಳಿಗೂ ಕಾಯಿಲೆ ಹರಡುವ ಭೀತಿ ಎದುರಾಗಿದೆ ಎಂದು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಗಿರಿಶ್ರೇಣಿಯ ಪರಿಸರದಲ್ಲಿ ಈ ತ್ಯಾಜ್ಯಗಳನ್ನು ಹಾಕುವುದರಿಂದ ಇಲ್ಲಿನ ಪರಿಸರವು ಹಾಳಾಗುತ್ತಿದೆ. ಇಲ್ಲಿನ ನಿಸರ್ಗ ಸೊಬಗನ್ನು ಕಾಪಾಡಿಕೊಳ್ಳುವುದು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಆಸ್ಪತ್ರೆ ತ್ಯಾಜ್ಯಗಳನ್ನು ತಂದು ಗಿರಿಪ್ರದೇಶದಲ್ಲಿ ಸುರಿದ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪರಿಸರವಾದಿಗಳು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT