ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಕ್ಸ್‌ಟೀರ್‌ ಸಾಫ್ಟ್‌ವೇರ್‌ ಕೇಂದ್ರ ಆರಂಭ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೆಕ್ಸ್‌ಟೀರ್‌ ಆಟೊಮೋಟಿವ್‌, ತನ್ನ ಜಾಗತಿಕ ಸಾಫ್ಟ್‌ವೇರ್‌ ತಂಡದ ವಿಸ್ತರಣೆ ಮತ್ತು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಕಾರ್ಯತಂತ್ರದ ಅಂಗವಾಗಿ ಬೆಂಗಳೂರಿನಲ್ಲಿ  ಸಾಫ್ಟ್‌ವೇರ್‌ ಕೇಂದ್ರ ಆರಂಭಿಸಿದೆ.

ಸಂಸ್ಥೆಯ ಜಾಗತಿಕ ಸಾಫ್ಟ್‌ವೇರ್‌ ತಂಡಗಳಿಗೆ ಈ ಹೊಸ ಕೇಂದ್ರವು ಪೂರಕವಾಗಿ ಕಾರ್ಯನಿರ್ವಹಿಸಲಿದೆ. ನೆಕ್ಸ್‌ಟೀರ್‌ ಆಟೊಮೊಟಿವ್‌ ಸದ್ಯಕ್ಕೆ ಪುಣೆ ಮತ್ತು ಗುರು ಗ್ರಾಮಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಚೆನ್ನೈನಲ್ಲಿ ಎಲೆಕ್ಟ್ರಾನಿಕ್‌ ಪವರ್‌ ಸ್ಟೀರಿಂಗ್‌ಗಳ ತಯಾರಿಕಾ ಘಟಕ ಸ್ಥಾಪಿಸಲೂ ಸಂಸ್ಥೆ ಉದ್ದೇಶಿಸಿದೆ.

‘ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿರುವ ಈ ಸಾಫ್ಟ್‌ವೇರ್‌ ಕೇಂದ್ರವು ಸಾಫ್ಟ್‌ವೇರ್‌ ಉತ್ಪನ್ನಗಳ ತಯಾರಿಕೆಗೆ  ಗಮನ ನೀಡಲಿದೆ. ಈ ಉತ್ಪನ್ನಗಳು ಗುಣಮಟ್ಟ ಮತ್ತು ನಿಯಂತ್ರಣ ಕ್ರಮಗಳಿಗೆ ಪೂರಕವಾಗಿ ಇರುವುದನ್ನು ಖಾತರಿಪಡಿಸಲಿದೆ.

ಸಂಸ್ಥೆಯು 2019ರ ಹಣಕಾಸು ವರ್ಷದಲ್ಲಿ ಈ ಎಲ್ಲ ವಿಸ್ತರಣಾ ಚಟುವಟಿಕೆಗಳಿಗಾಗಿ ಒಟ್ಟು ರೂ 13 ಕೋಟಿಗಳಷ್ಟು ಬಂಡವಾಳ ತೊಡಗಿಸಲು ಉದ್ದೇಶಿಸಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಜೆಫ್‌ ಕ್ರೀಗರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT